ಸುಮಲತ ಅಂಬರೀಶ್ ಅವರು ಮಾದ್ಯಮಗಳ ಮುಂದೆ ತಮ್ಮ ಬಗ್ಗೆ ಮಾತನಾಡಿರುವ ಮಾನ್ಯ ಮುಖ್ಯಮಂತ್ರಿಗಳೂ ಹಾಗೂ ಮಂಡ್ಯ ಕ್ಷೇತ್ರದ ಮೈತ್ರಿ ಸರ್ಕಾರದ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿಯವರ ತಂದೆಯಾದ ಹೆಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ಪ್ರತ್ಯುತ್ತರವನ್ನು ನೀಡಿದ್ದಾರೆ ಹಾಗೂ ನೇರವಾಗಿ ಕೆಲವು ವಾಸ್ತವ ವಿಚಾರಗಳ ಕಡೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಿನಿಂದಲೂ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಬಿಸಿ ಬಿಸಿ ಚರ್ಚೆಗಳು, ಆರೋಪ ಪ್ರತ್ಯಾರೋಪಗಳು ನಡೆಯುತ್ತಾ ಬೇರೆಲ್ಲಾ ಕ್ಷೇತ್ರಗಳಲ್ಲಿ ಇಲ್ಲದ ರೋಚಕ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ.

ಸುಮಲತ ಅವರು ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಅವರ ಸ್ಥಾನವನ್ನೇ ಮರೆತು ಮಾತಾಡ್ತಾ ಇದ್ದಾರೆ ಎಂದಿದ್ದಾರೆ ಹಾಗೂ ಅವರ ಪಕ್ಷ ಯಾವತ್ತೂ 112 ಸೀಟ್ ಪಡೆದು ಮುಖ್ಯಮಂತ್ರಿ ಆದವರಲ್ಲ. ಎರಡು ಬಾರಿ ಕೂಡಾ ಒಂದು ಅಂಡರ್ ಸ್ಟಾಂಡಿಂಗ್, ಒಂದು ಡೀಲ್ ಹಾಗೂ ಒಂದು ಅಗ್ರಿಮೆಂಟ್ ಅಂತ ಸಿಎಂ ಅಧಿಕಾರ ಪಡೆದವರು ಇವರು ಎಂದು ಹೇಳಿದ್ದಾರೆ. ನನ್ನನ್ನು ಬಿಜೆಪಿಗೆ ಬೆಂಬಲ ಅಂತ ಹೇಳ್ತಾರೆ, ಆದರೆ ಬಿಜೆಪಿ ಅವರ ಜೊತೆ 20-20 ಅಂತ ಅಗ್ರಿಮೆಂಟ್ ಮಾಡಿಕೊಂಡ ಪಕ್ಷ ಯಾವುದು? ಅಂತಾ ಕೂಡಾ ಅವರ ಬಹಳ ನೇರವಾಗಿ ಪ್ರಶ್ನಿಸಿದ್ದಾರೆ.

ಸುಮಲತ ಗೆದ್ದರೆ ಅವರು ಬಿಜೆಪಿ ಸೇರ್ತಾರೆ ಅಂತ ಬಿಂಬಿಸುತ್ತಾ ಇದ್ದಾರೆ ಎಂದು ದೂರಿದ ಅವರು, ನಾನೊಬ್ಬ ಪಕ್ಷೇತರ ಅಭ್ಯರ್ಥಿ ಅಷ್ಟೇ. ನಾನೇದಾರೂ ಗೆದ್ದರೆ ನನ್ನ ಒಂದು ಸೀಟಿಂದ ಬಿಜೆಪಿಗೆ ಆಗೋ ಲಾಭವಾಗಲೀ ನಷ್ಟವಾಗಲೀ ಇಲ್ಲ ಎಂದ ಅವರು, ಇವರದು ಒಂದು ಪಕ್ಷ ಇದೆ, ಇವರ ವರಿಷ್ಠರು ದೆಹಲಿಯಲ್ಲಿ ಯಾವ ಯಾವ ಬಿಜೆಪಿ ನಾಯಕರ ಜೊತೆ ಚರ್ಚಿಸ್ತಾ ಇದ್ದಾರೆ,ಚುನಾವಣೆ ನಂತರ ಬಿಜೆಪಿ ಗೆದ್ದರೆ ಅವರ ಜೊತೆ ಸೇರೋಕೆ ಯಾರು ಯೋಜನೆ ಹಾಕ್ತಾ ಇದ್ದಾರೆ ಅಂತ ಜನರಿಗೆ ಬಹಳ ಬೇಗ ಗೊತ್ತಾಗುತ್ತೆ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here