ಸುಮಲತ ಅಂಬರೀಶ್ ಅವರು ಇತ್ತೀಚಿಗೆ ಮಾದ್ಯಮಗಳ ಮುಖ್ಯ ಸುದ್ದಿಯಾಗಿದ್ದಾರೆ. ಅವರ ಪ್ರತಿ ಮಾತು , ಅವರ ಹೇಳಿಕೆ ಹಾಗೂ ಅವರ ನಿರ್ಧಾರಗಳು ಪ್ರತಿಯೊಂದು ಸಂಚಲನವನ್ನುಂಟು ಮಾಡುತ್ತಿವೆ. ಇದಕ್ಕೆ ಕಾರಣವಾಗಿರುವು ಮಂಡ್ಯ ಲೋಕಸಭಾ ಚುನಾವಣೆ. ಹೌದು ಸುಮಲತ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದಾಗಿನಿಂದಲೂ ಆ ಕ್ಷೇತ್ರ ನಾಡಿನ ಪ್ರಮುಖ ಹಾಗೂ ಸಿಕ್ಕಾಪಟ್ಟೆ ಸೆನ್ಷೇಷನಲ್ ಕ್ಷೇತ್ರವಾಗಿ ಮಾರ್ಪಟ್ಟಿತು. ಒಂದೆಡೆ ಗೌಡರ ವಂಶದ ಕುಡಿಯಾದ ನಿಖಿಲ್ ಕುಮಾರ ಸ್ವಾಮಿ ಅವರಿದ್ದರೆ, ಇನ್ನೊಂದೆಡೆ ಮಂಡ್ಯದ ಗಂಡು, ಮಂಡ್ಯದ ಪುತ್ರ ಅಂಬರೀಶ್ ಅವರ ಪತ್ನಿ ಸುಮಲತ ಸ್ಪರ್ಧೆಗೆ ಇಳಿದಿರುವುದೇ ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಹೋರಾಟ ನಡೆದಿದೆ.

ಸುಮಲತ ಅವರು ಮೊದಲಿಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಬಹುದು ಎಂದು ಎಲ್ಲರಿಗೂ ಅನಿಸಿತು. ಸುಮಲತ ಅವರು ಕೂಡಾ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬಯಸಿದ್ದರು. ಕೊನೆಯವರೆಗೂ ಅವರು ಕಾಂಗ್ರೆಸ್ ಸರ್ಕಾರದಿಂದ ಟಿಕೆಟ್ ಸಿಗಬಹುದೆಂದು ಕಾದರು. ಆದರೆ ಮೈತ್ರಿ ಧರ್ಮ ಪಾಲನೆಯೆಂಬ ಕಾರಣದಿಂದ ಸುಮಲತ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ದೊರೆಯಲಿಲ್ಲ. ಅದಾದ ನಂತರ ಬಿಜೆಪಿ ಅವರಿಗೆ ಟಿಕೆಟ್ ನೀಡಲು ಸಿದ್ಧವಾಯಿತು. ಆದರೆ ಸುಮಲತ ಅವರು ಅದನ್ನು ನಿರಾಕರಿಸಿದರು.‌ ನಿಲ್ಲುವುದಾದರೆ ಕಾಂಗ್ರೆಸ್ ನಿಂದ ಇಲ್ಲವಾದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ನಿರ್ಧಾರ ಮಾಡಿದರು.

ಈಗ ಇದೇ ವಿಷಯವಾಗಿ ಹಲವರು ವಿಶ್ಲೇಷಣೆಗಳನ್ನು ನೀಡಲು ತೊಡಗಿದ್ದಾರೆ. ಅದರ ಪ್ರಕಾರ ಸುಮಲತ ಅವರು ಪಕ್ಷೇತರವಾಗಿ ನಿಲ್ಲಲು ಏನು ಕಾರಣ ಇರಬಹುದು ಎಂಬುದಕ್ಕೆ ಕೆಲವರ ಅಭಿಪ್ರಾಯ ಏನೆಂದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದರೆ ಅವರು ಬಿಜೆಪಿಗೆ ಅವರು ತಮ್ಮ ಸಪೋರ್ಟ್ ನೀಡಬಹುದು ಹಾಗೇನಾದರೂ ಆಗದೆ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಬಂದರೆ ಆಗ ಅದಕ್ಕೆ ಬೆಂಬಲ ನೀಡಬಹುದೆಂಬ ದೂರ ದೃಷ್ಠಿಯಿಂದ ಅವರು ಬಿಜೆಪಿಯ ಆಹ್ವಾನವನ್ನು ಹಾಗೂ ಅವಕಾಶವನ್ನು ನಿರಾಕರಿಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಇದರ ಜೊತೆಗೆ ಮಂಡ್ಯದಲ್ಲಿ ಪಕ್ಷೇತರವಾಗಿ ನಿಲ್ಲುವ ಸುಮಲತ ಅಂಬರೀಶ್ ಅವರು, ಹಾಗೂ ಜೆಡಿಎಸ್ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಮಂಡ್ಯದಲ್ಲಿ ವಿಭಜನೆಯಾಗುತ್ತದೆ. ಎಲ್ಲೆಡೆ ಮೋದಿ ಅಲೆ ಇರುವ ಕಾರಣ ಬಿಜೆಪಿ ಅಭ್ಯರ್ಥಿ ಕೂಡಾ ಗೆಲ್ಲುವ ಸಾಧ್ಯತೆಗಳನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ ಎನ್ನುತ್ತಿದ್ದಾರೆ ಬಿಜೆಪಿಯ ಕೆಲವು ಅನುಭವಿ ಕಾರ್ಯಕರ್ತರು. ಸುಮಲತ ಅವರ ನಡೆ ನಿಜಕ್ಕೂ ನೂರು ಊಹಾ ಪೋಹಗಳಿಗೆ ಕಾರಣವಾಗಿದ್ದು, ರಾಜಕೀಯ ತಜ್ಞರು ತಮ್ಮದೇ ಆದ ನಿಲುವುಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದಂತೂ ನಿಜ.

ಒಟ್ಟಿನಲ್ಲಿ ಚುನಾವಣೆ ಮುಗಿದು ಫಲಿತಾಂಶ ಬರುವ ತನಕವೂ ಮಂಡ್ಯ ಲೋಕಸಭಾ ಕ್ಷೇತ್ರ ಅಕ್ಷರಶಃ ಪ್ರಬಲ ಅಭ್ಯರ್ಥಿಗಳು ಇರುವ ಹೋರಾಟದ ಕಣವಾಗುವುದಂತೂ ವಾಸ್ತವ. ಯಾರ ನಡೆ ಹೇಗೆ? ಯಾರ ರಾಜಕೀಯ ತಂತ್ರಗಳು ಏನು? ಮುಂದಿನ ಅವರ ಯೋಜನೆಗಳೇನು? ಇವೆಲ್ಲವಕ್ಕೂ ಚುನಾವಣೆಯವರೆಗೂ ಕಾಯಲೇಬೇಕಿದೆ. ಇಲ್ಲಿ ಅನುಭವಿಗಳ ಅಭಿಪ್ರಾಯವನ್ನು ಮೀರಿದ ಫಲಿತಾಂಶ ಬಂದರೂ ಬರಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here