ಮಂಡ್ಯದಲ್ಲಿ ಸುಮಲತ ಅಂಬರೀಶ್ ಅವರು ಸ್ವಾಭಿಮಾನಕ್ಕೆ ಮತ ನೀಡಿ ಎಂದು ಹೇಳಿದ ಮಾತಿಗೆ ಮಂಡ್ಯದ ಜನ ಅವರ ಜೊತೆ ನಿಂತು, ಅವರನ್ನು ಲೋಕಸಭಾ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡುವ ಮೂಲಕ ಸುಮಲತ ಅವರನ್ನು ಸಂಸದೆಯನ್ನಾಗಿ ಮಾಡಿದರು. ಆದರೆ ಈಗ ಸುಮಲತ ಅವರು ಬಿಜೆಪಿ ಸೇರಲಿದ್ದಾರಾ? ಎಂಬ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇಂತಹುದೊಂದು ಅನುಮಾನ ಜನರಲ್ಲಿ ಕಾಣತೊಡಗಿದೆ. ಇದಕ್ಕೆ ಕಾರಣ ಮಂಡ್ಯದಲ್ಲಿ ಪ್ರವಾಸ ಕೈಗೊಂಡಿರುವ ಸಂಸದೆ ಸುಮಲತ ಅವರು ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಭಾಗವಹಿಸಲಿದ್ದು ಅವರ ಈ ನಿರ್ಧಾರದಿಂದ ಹಲವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸುಮಲತ ಅವರು ಚುನಾವಣಾ ಕಣಕ್ಕೆ ಇಳಿದಾಗ ಅವರ ಬೆಂಬಲಕ್ಕೆ ನಿಂತವರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಂಬರೀಶ್ ಅವರ ಅಭಿಮಾನಿಗಳು ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೇ ವಿಷಯವನ್ನು ಅಂದರೆ ಕಾಂಗ್ರೆಸ್ ಮುಖಂಡರೇ ಸುಮಲತ ಅವರ ಗೆಲುವಿಗೆ ಕಾರಣ ಎಂದು ಜೆಡಿಎಸ್ ವರಿಷ್ಠರು ಆರೋಪವನ್ನು ಕೂಡಾ ಮಾಡಿದ್ದರು. ಮೈತ್ರಿ ಸರ್ಕಾರ ಪತನಾನತಂತರ ಸುಮಲತ ಅವರಿಗೆ ಬೆಂಬಲ ನೀಡಿದ ಕಾಂಗ್ರೆಸ್ ಮುಖಂಡರು ತಾವು ಸುಮಲತ ಅವರ ಪರ ನಿಂತ ಕಾರಣವನ್ನು ಕೂಡಾ ವಿವರಿಸಿದ್ದಾರೆ.

ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ಸುಮಲತ ಪರವಾಗಿ ನಿಂತವರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿದ್ದ ಬ್ಲಾಕ್ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ ಮುಖಂಡರನ್ನು ಮತ್ತೆ ಮರು ನೇಮಕ ಕೂಡಾ ಮಾಡಿಕೊಂಡಿರುವುದು ಗಮನಾರ್ಹ ವಿಷಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಕೂಡಾ ಸುಮಲತ ಅವರ ತಮ್ಮ ಬೆಂಬಲಿತ ಅಭ್ಯರ್ಥಿ ಎಂಬ ಆಶಾ ಭಾವನೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಆದರೆ ಈಗ ಸುಮಲತ ಅವರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವುದು ಸ್ವಲ್ಪಮಟ್ಟಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here