ಲೋಕಸಭಾ ಚುನಾವಣೆ ಸಮಯದಲ್ಲಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯ ಈ ರೀತಿಯಲ್ಲಿ ಆರೋಪ ಮಾಡುವ ಸಮಯದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ರೀತಿಯಾದಾಗ ಗೊಂದಲ ಮಾಡಿಕೊಳ್ಳಬೇಕಾದ ಸಂದರ್ಭ ಒದಗಿಬರುತ್ತದೆ. ಈಗ ಅಂತಹದೇ ಒಂದು ಗೊಂದಲ ಸುಮಲತಾ ಅವರಿಗೆ ಉಂಟಾಗುತ್ತದೆ. ಮಂಡ್ಯ ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪ ಮೇರೆಗೆ ಮಂಡ್ಯ ಚುನಾವಣಾಧಿಕಾರಿ ಎನ್​​. ಮಂಜುಶ್ರೀಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ನೋಟಿಸ್​​ ಜಾರಿ ಮಾಡಲಾಗಿದೆ.

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಸುಮಲತಾ, ನಾಮಪತ್ರ ಪೇಪರ್​​ಗಳಲ್ಲಿ ತಪ್ಪಿದೆ. ಆ ತಪ್ಪನ್ನು ಮುಚ್ಚಿಡೋಕೆ ಆಫಿಷಿಯಲ್​ ಮಷೀನರಿ ಕೆಲಸ ಮಾಡುತ್ತಿದೆ. ಸಿಎಂ ಅವರು ಡಿಸಿ ಅವರನ್ನು ಮನೆಗೆ ಕರೆಸಿಕೊಂಡು ಅವರಿಗೆ ಇವರು ಇರುವ ಸ್ಥಳಕ್ಕೆ ಕರೆಸಿಕೊಂಡು ಸಿಎಂ ಅವರು ಮಾತಾಡಿದ್ದಾರೆ ಅನ್ನೋ ಮಾಹಿತಿ ನನಗೆ ಸಿಕ್ಕಿದೆ ಎಂದು ಆರೋಪಿಸಿದ್ದರು.

ಈ ಹೇಳಿಕೆಯಿಂದ ಇಡೀ ಜಿಲ್ಲಾಡಳಿತ ಮೇಲೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಆಗಿದೆ. ಪ್ರಾಮಾಣಿಕ ಅಧಿಕಾರಿಯಾದ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಸಮಾಜದ ದೃಷ್ಟಿಯಲ್ಲಿ ತಪ್ಪಿತಸ್ಥರೆಂದು ಬಿಂಬಿಸಿರುವುದಾಗಿ ಅಳಲು ತೋಡಿಕೊಂಡರು. ಐಪಿಸಿ ಸೆಕ್ಷನ್ 189ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ನೋಟಿಸ್ ನೀಡಲಾಗಿದೆ. ಹೇಳಿಕೆಗೆ ಸಂಬಂಧಿಸಿದಂತೆ ಉತ್ತರ ನೀಡಲು ಒಂದು ದಿನದ ಕಾಲಾವಕಾಶ ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here