ಸುಮಲತ ಅಂಬರೀಶ್ ಅವರು ಚಿತ್ರರಂಗಕ್ಕೆ ಬಹು ಬೇಗ ಅಂದರೆ ಕಿರಿಯ ವಯಸ್ಸಿನಲ್ಲೇ ಎಂಟ್ರಿ ಕೊಟ್ಟವರು. ಕನ್ನಡಕ್ಕೆ ಅವರು ಮೊದಲ ಸಿನಿಮಾಗಾಗಿ ಬಂದಾಗ ಅವರ ವಯಸ್ಸು ಹದಿನಾರು ವಯಸ್ಸು. ರವಿಚಂದ್ರ ಅವರ ನಟನೆಯ ಮೊದಲ ಕನ್ನಡ ಚಿತ್ರ. ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಒಂದು ಹಾಸ್ಯ ಪ್ರಸಂಗವನ್ನು ಅವರು ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಹಂಚಿಕೊಂಡಿದ್ದಾರೆ. ಸುಮಲತ ಅವರು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸೆಟ್ ನಲ್ಲಿ ಅವರೇ ಕಿರಿ ವಯಸ್ಸಿನವರು. ಆದ ಕಾರಣ ಆಗಾಗ ಬರುತ್ತಿದ್ದ ಅಂದಿನ ಪುಟ್ಟ ಹುಡುಗ ಏಳೆಂಟು ವಯಸ್ಸಿನ ಲೋಹಿತ್ ಅಂದರೆ ಇಂದಿನ ಪವರ್ ಸ್ಟಾರ್ ಜೊತೆ ಬಹಳ ಬೇಗ ಸ್ನೇಹ ಆಗಿತ್ತು.

ಹೀಗೆ ಅವರೊಡನೆ ಆಟ ಆಡ್ಕೊಂಡು, ಮಾತಾಡ್ಕೊಂದು ಇರ್ತಾ ಇದ್ರಂತೆ ಸುಮಲತ. ಆಗ ಒಂದ್ಸಲ ಪುನೀತ್ ಅವರು ಮನೆಯಲ್ಲಿ ನಾನ್ ಮದ್ವೆ ಆದ್ರೆ ಸುಮಲತಾ ಅವರನ್ನೇ ಮದುವೆಯಾಗೋದು ಅಂತ ಹೇಳಿದ್ರಂತೆ. ಮುಂದೆ ಈ ವಿಷಯವನ್ನು ಸುಮಲತ ಅವರು ಅಂಬರೀಶ್ ಹೇಳಿದಾಗ, ಅಂಬರೀಶ್ ಅವರು ಪುನೀತ್ ಅವರನ್ನು ರೇಗಿಸಿದ್ದು ಹೌದಂತೆ. ಅಂಬರೀಷ್ ಅವರು ಪುನೀತ್‍ಗೆ ಏನೋ.. ನನ್ ಹೆಂಡ್ತೀಗೇ ಲೈನ್ ಹಾಕ್ತಿಯಾ ಎಂದು ರೇಗಿಸುತ್ತಿದ್ದರಂತೆ.

ಹೀಗೆ ಅಂದಿನ ಆ ಹಾಸ್ಯ ಘಟನೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತ ಅವರು ಬಂದ ಸಂದರ್ಭದಲ್ಲಿ, ವಿಡಿಯೋ ಮೂಲಕ ಮಾತನಾಡಿದ ಪವರ್ ಸ್ಟಾರ್ ಪುನೀತ್ ಅವರು ಕೂಡಾ ನೆನಪಿಸಿಕೊಂಡು ನಕ್ಕರು. ಸುಮಲತಾ ಅಂಬಿಗಿಂತ ಮೊದಲು ನನಗೆ ಪ್ರಪೋಸ್ ಮಾಡಿದ್ದುದು ಅಪ್ಪು ಎಂದು ನೆನಪಿಸಿಕೊಂಡು, ಅದೊಂದು ಬಹಳ ತಮಾಷೆಯ ಸನ್ನಿವೇಶ ಎಂದು ಹಿಂದಿನ ದಿನಗಳನ್ನು ಒಮ್ಮೆ ಸ್ಮರಿಸಿಕೊಂಡು ನಕ್ಕರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here