ಮಂಡ್ಯದಲ್ಲಿ ದಿನೇ ದಿನೇ ಚುನಾವಣಾ ಕಾವು ಹೆಚ್ಚುವ ಜೊತೆಗೆ ಆರೋಪ ಪ್ರತ್ಯಾರೋಪದ ವೀಡಿಯೋ ಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ‌. ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣಾ ಕಣ ದಿನೇದಿನ ರಂಗೇರುತ್ತಿದ್ದು, ಜೆಡಿಎಸ್​ ಹಾಗೂ ನಟಿ ಸುಮಲತಾ ಅಂಬರೀಷ್​ ನಡುವಿನ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಾಡಾಗಿದೆ.ಹೌದು, ಮಂಡ್ಯ ಇದೀಗ ಪರ-ವಿರೋಧದ ಚರ್ಚೆಯ ಕೇಂದ್ರಬಿಂದುವಾಗಿದೆ. ಇಡೀ ಕರ್ನಾಟಕದ ದೃಷ್ಟಿ ಮಂಡ್ಯ ಕ್ಷೇತ್ರದತ್ತ ನೆಟ್ಟಿದ್ದು, ಏನೇ ಆಗಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ, ಅದು ಮಂಡ್ಯ ಕ್ಷೇತ್ರದಿಂದಲೇ ಅಖಾಡಕ್ಕೆ ಇಳಿಯುತ್ತೇನೆ ಎಂದು ಟೊಂಕ ಕಟ್ಟಿ ನಿಂತಿರುವ ನಟಿ ಸುಮಲತಾ ಅವರ ಮುಂದಿನ ನಡೆ ಏನು ಎಂಬುದು ಕೂತೂಹಲ ಉಂಟು ಮಾಡಿದೆ.

ಇತ್ತ ಜೆಡಿಎಸ್​ನಿಂದ ನಿಖಿಲ್​ ಕುಮಾರಸ್ವಾಮಿ ಅವರಿಗೆ ಟಿಕೆಟ್​ ಘೋಷಣೆಯಾಗಿದ್ದು, ಆಗಲೇ ನಿಖಿಲ್​ ಚುನಾವಣಾ ಪ್ರಚಾರಕ್ಕೆ ಧುಮುಕ್ಕಿದ್ದಾರೆ.ಈ ಮಧ್ಯೆ ಮಂಡ್ಯ ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಕೆಲವರು ಸುಮಲತಾ ಅವರ ಬೆನ್ನಿಗೆ ನಿಂತರೆ, ಮತ್ತೆ ಕೆಲವರು ಜೆಡಿಎಸ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ಕುಟುಂಬ ರಾಜಕಾರಣ ಯಾಕೆ? ಮಂಡ್ಯ ಏನು ನಿಮ್ಮ ಕುಟುಂಬ ಆಸ್ತಿಯೇ ಎಂದು ಹಲವರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು, ಅಂಬಿ ಅಭಿಮಾನಿಗಳು ಕೂಡ ಜೆಡಿಎಸ್​ ವಿರುದ್ಧ ಮುಗಿಬಿದ್ದಿದ್ದಾರೆ.

ಇತ್ತ ಸುಮಲತಾ ಅವರನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಅಂಬಿಗೆ ಬೇಡವಾದದ್ದು ನಿಮಗ್ಯಾಕೆ? ಸುಮಲತಾ ಅವರ ನಡೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದು, ಅಂಬಿ ಅಣ್ಣನಿಗೆ ಬೇಡವಾದ ರಾಜಕೀಯ ಸುಮಕ್ಕನಿಗೆ ಯಾಕೆ ಎಂದು ಪ್ರಶ್ನೆಗಳು ಕೇಳಿಬರುತ್ತಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುತ್ತಿದ್ದಾರೆ. ಮಂಡ್ಯಕ್ಕೆ 5,000 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದು ಜೆಡಿಎಸ್​ ಪರ ಬ್ಯಾಟ್​ ಬೀಸಿದ್ದಾರೆ.ಮಂಡ್ಯ ಜಿಲ್ಲೆಯಲ್ಲಿ 7 ಶಾಸಕರು, 3 ಎಂಎಲ್​ಸಿಗಳು ಹಾಗೂ ಒಬ್ಬ ಸಂಸದ ಇದ್ದಾರೆ.

ಇವರೆಲ್ಲರೂ ಜೆಡಿಎಸ್​ನವರೇ ಆಗಿದ್ದು, ಇವರಲ್ಲಿ ಯಾರು ದೇವೇಗೌಡರ ಕುಟುಂಬದವರು ಎಂದು ಪ್ರಶ್ನಿಸುವ ಮೂಲ ಕುಟುಂಬ ರಾಜಕಾರಣ ಎಂದು ಹೇಳುವವರಿಗೆ ತಿರುಗೇಟು ನೀಡಿದ್ದಾರೆ. ಹೀಗೆ ಒಬ್ಬರ ಮೇಲೊಬ್ಬರು ವೀಡಿಯೋ ಮೂಲಕ ಟಾಂಗ್ ಕೊಡುವುದು ಮಂಡ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ.ಈ ವೀಡಿಯೋ ನೋಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here