ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದಾಗಿದೆ. ಮಂಡ್ಯ ಲೋಕಸಭಾ ಚುನಾವಣಾ ಕಣ, ಜಿದ್ದಾಜಿದ್ದಿನ ಕಣ,ಹೈ ವೋಲ್ಟೇಜ್ ಕಣ ಹೀಗೆಲ್ಲಾ ಕರೆಯಲ್ಪಟ್ಟ ಚುನಾವಣಾ ಕಣದಲ್ಲಿ ಈಗ ಸುಮಲತಾ ಅವರಿಗೆ ಮಂಡ್ಯ ಜನ ಭರ್ಜರಿ ಜಯ ಸಾಧಿಸೋದಕ್ಕೆ ಅವರ ಬೆನ್ನಿಗೆ ನಿಂತು, ಮತ ಚಲಾಯಿಸಿ ವಿಜಯದ ಸವಿಯನ್ನು ಅವರಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸುಮಲತ ಅವರಿಗಾಗಿ ಮಂಡ್ಯದಲ್ಲಿ ಪ್ರಚಾರಕ್ಕೆ ತೊಡಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಬಹು ನಿರೀಕ್ಷೆಯ ರಾಬರ್ಟ್ ಚಿತ್ರೀಕರಣದ ಪ್ರಯುಕ್ತ ಪಾಂಡಿಚೆರಿಯಲ್ಲಿ ಬ್ಯುಸಿಯಾಗಿದ್ದಾರೆ. ಬ್ಯುಸಿಯ ನಡುವೆಯೇ ಮಂಡ್ಯದಲ್ಲಿ ಸುಮಲತ ಅಂಬರೀಶ್ ಗೆಲುವಿನ ಸಂಭ್ರಮವನ್ನು ರಾಬರ್ಟ್ ಚಿತ್ರೀಕರಣದ ಸ್ಥಳದಲ್ಲೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಇನ್ನು ನೆನ್ನೆಯೇ ದರ್ಶನ್ ಚಿತ್ರೀಕರಣದ ಸ್ಥಳದಿಂದ ವೀಡಿಯೋ ಮಾಡಿ ಸಂಭ್ರಮಿಸಿದ್ದಾರೆ‌. ಮಂಡ್ಯ ಜನತೆಗೆ ವಿಡಿಯೋ ಮೂಲಕ ತಮ್ಮ ಕೃತಜ್ಞತೆ ಯನ್ನು ಅರ್ಪಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿದಾಗ ವಿರೋಧಿ ಪಾಳೆಯದಿಂದ ದರ್ಶನ್ ಕೂಡಾ ಟೀಕೆಗೆ ಒಳಗಾಗಿದ್ದು ನಿಜ.ಚುನಾವಣೆಯ ನಂತರ ಭರ್ಜರಿ ವಿಜಯವನ್ನು ಪಡೆದಿರುವ ಸುಮಲತ ಅಂಬರೀಶ್ ಅವರ ವಿಜಯಕ್ಕೆ ಕಾರಣವಾದ ಮಂಡ್ಯ ಜನರಿಗೆ ದರ್ಶನ್ ಅವರು ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ. ಅವರು ಮಂಡ್ಯದ ಜನರು ತಾವು ಮಾಡಿರೋ ಸಣ್ಣ ಸೇವೆಯನ್ನು ಜನ ನೆನಪು ಇಟ್ಕೊಂಡು ಇಂತಹ ದೊಡ್ಡ ಜಯ ತಂದು ಕೊಟ್ಟ ಪ್ರತಿಯೊಬ್ಬರಿಗೂ ಮನಸ್ಸಿನಿಂದ ಧನ್ಯವಾದ ಹೇಳ್ತಾ, ಧನ್ಯವಾದಗಳು ಹೇಳೋದು ಬಹಳ ಕಡಿಮೆ ಆಗುತ್ತೆ ಎಂದಿದ್ದಾರೆ.

ಮಂಡ್ಯದ ಜನ ಅಮ್ಮ ಸುಮಲತ ಅವರಿಗೆ ಈ ಮಟ್ಟದಲ್ಲಿ ಬೆಂಬಲ ನೀಡಿರೋದಕ್ಕೆ ಜೀವನ ಪೂರ್ತಿ ಚಿರ ಋಣಿ ಆಗಿರ್ತೀನಿ ಅಂತ ಅವರು ಹೇಳಿದ್ದಾರೆ.ಸುಮಲತ ಅವರು ಕೂಡಾ ಮಂಡ್ಯ ಜನರಿಗೆ ಇನ್ನು ಏನು ಐದು ವರ್ಷ ಅವಕಾಶ ಇದೆ, ಅದರಲ್ಲಿ ಮಂಡ್ಯದ ಜನರಿಗೆ ಏನೇನು ಮಾಡಬೇಕೋ ಅದೆಲ್ಲಾ ತಪ್ಪದೇ ಮಾಡ್ತಾರೆ ಅಂತ ಭರವಸೆಯನ್ನು ಅವರು ನೀಡಿದ್ದಾರೆ. ಅಲ್ಲದೆ ಮಂಡ್ಯದ ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಹಳ್ಳಿ, ಊರು, ಇವೆ ಎಲ್ಲರಿಗೂ ಕೂಡಾ ತಾನು ಚಿರ ಋಣಿ ಅವರು ತೋರಿಸಿರೋ ಪ್ರೀತಿಗೆ ಆಬಾರಿಯಾಗಿದ್ದೇನೆ ಅಂತ ಭಾವನಾತ್ಮಕವಾದ ಸಂದೇಶ ನೀಡೋ ಮೂಲಕ ಸುಮಲತ ಅವರ ಜಯಕ್ಕೆ ಕಾರಣರಾದ ಜನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here