ಲೋಕಸಭಾ ಚುನಾವಣೆ ಈಗಾಗಲೇ ರಾಜ್ಯದಲ್ಲಿ ಮುಗಿದಿದ್ದು, ಈಗ ಎಲ್ಲರ ಆಸಕ್ತಿಯು ಇನ್ನು ಕೆಲವೇ ದಿನಗಳಿರುವ ಫಲಿತಾಂಶದ ಕಡೆಗಿದ್ದು, ಫಲಿತಾಂಶಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಫಲಿತಾಂಶಕ್ಕಾಗಿ ಕಾಯುವ ವೇಳೆಯಲ್ಲಿಯೇ ಸೋಲು ಗೆಲುವಿನ ಲೆಕ್ಕಾಚಾರಗಳೂ ಕೂಡಾ ಭರ್ಜರಿಯಾಗಿ ನಡೆಯುತ್ತಿವೆ. ಅದರಲ್ಲಿ‌ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ತೀವ್ರ ಕುತೂಹಲವನ್ನು ಕೆರಳಿಸಿದ್ದು, ಹಲವು ಸಮೀಕ್ಷೆಗಳು ಕೂಡಾ ಈಗಾಗಲೇ ನಡೆದು ಮಾದ್ಯಮಗಳಲ್ಲಿ ಸುದ್ದಿಯಾಗಿವೆ. ಇನ್ನು ಫಲಿತಾಂಶದ ಬಗ್ಗೆ ನಾಡಿದ ಸ್ವಾಮಿಜಿಗಳು ಕೂಡಾ ಭವಿಷ್ಯ ವಾಣಿ ನುಡಿಯುತ್ತಿದ್ದಾರೆ. ಈಗ ಒಬ್ಬ ಸ್ವಾಮಿಜಿಗಳು ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕೂಡಾ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಿಂತಿದ್ದು, ಇಲ್ಲಿನ ಸ್ವಾಮೀಜಿಯೋರ್ವರು ಸುಮಲತಾ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಹಲವು ರೀತಿಯ ಚುನಾವಣಾ ಭವಿಷ್ಯಗಳನ್ನು ನುಡಿದಿದ್ದು, ಈಗ ಆ ಸಾಲಿಗೆ ಈ ಸ್ವಾಮೀಜಿಯವರ ಭವಿಷ್ಯ ವಾಣಿಯೂ ಸೇರಿದೆ. ಸ್ವಾಮಿಜಿ ಅವರು ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದಿದ್ದಾರೆ.  ಈ ಭವಿಷ್ಯ ನುಡಿದವರು ವಿಭೂತಿಮಠದ ಬಸವಾನಂದ ಸ್ವಾಮೀಜಿಯವರು.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವಧರ್ಮದ ಪ್ರಸಾರಕರಾದ ಬಸವಾನಂದ ಸ್ವಾಮಿಜಿಯವರು ಭವಿಷ್ಯ ನುಡಿಯುತ್ತಾ ಮಾತೃ ಹೃದಯಿ ಸುಮಲತಾ ಗೆಲ್ಲುವುದರ ಜೊತೆಗೆ ಕೇಂದ್ರ ಸಚಿವರಾಗುವುದು ಖಚಿತ ಎಂದಿದ್ದಾರೆ. ಅಲ್ಲದೆ ಸುಮಲತ ಅವರದು  ಪ್ರಬುದ್ಧ ನಡೆ ಹಾಗೂ ಮೃದು ಮಾತು. ಆದ್ದರಿಂದಲೇ ಅವರು ಎಲ್ಲಾ ಸಮುದಾಯದವರ ಹೃದಯ ಗೆಲ್ಲಲು ಸಾಧ್ಯವಾಗಿದೆ.‌ ಸುಮಲತಾ ಅಂಬರೀಷ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಕೂಡಾ ಇದೆ ಎಂದು ಅವರು ನುಡಿದಿದ್ದಾರೆ. ಅದರ ಜೊತೆಗೆ ನರೇಂದ್ರ ಮೋದಿಯವರು ಕೂಡಾ ಎರಡನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ, ಯಡಿಯೂರಪ್ಪನವರು ಸಿಎಂ ಆಗುವುದು ಕೂಡಾ ಖಚಿತ ಎಂದು ಅವರು ಭವಿಷ್ಯ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here