ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಾಗ ಮಾದ್ಯಮಗಳ ಮೇಲೆ ಕೋಪ ಮಾಡಿಕೊಳ್ಳುವುದು ಸಹಜವಾಗಿದೆ. ಅದೇ ರೀತಿ ಈಗ ಮತ್ತೊಮ್ಮೆ ಅವರು ಮಾದ್ಯಮಗಳ‌ ವಿರುದ್ಧ ಗರಂ ಆಗಿ ತಮ್ಮ ಅಸಮಾಧಾನ ಹಾಗೂ ಕೋಪವನ್ನು ಹೊರಗೆ ಹಾಕಿದ್ದಾರೆ. ಸಿಎಂ ಅವರು ಹುಬ್ಬಳ್ಳಿಯಲ್ಲಿ ಪ್ರಚಾರಕ್ಕೆಂದು ಹೋದಾಗ ಚುನಾವಣಾ ಸಮಯದಲ್ಲಿ ಸುಮಲತ ಸುಮಲತ ಎಂದು ಸುಮಲತರನ್ನು ಹೈಲೈಟ್ ಮಾಡಿದ್ದೀರಿ ಎಂದು ಮಾದ್ಯಮಗಳ ವಿರುದ್ಧ ಕೆಂಡಕಾರಿದ್ದಾರೆ. ಅವರು ನೇರವಾಗಿ ಮಾದ್ಯಮಗಳನ್ನು ದೂರಿರುವ ಘಟನೆ ನಡೆದಿದೆ.

ಸಿಎಂ ಅವರು ಮಾದ್ಯಮಗಳ ಜೊತೆ ಮಾತನಾಡುತ್ತಾ ಮಾದ್ಯಮಗಳು ಪ್ರಧಾನಿ ಮೋದಿಗಿಂತ ಮಂಡ್ಯಕ್ಕೆ ಹೆಚ್ಚಿನ ಪ್ರಚಾರವನ್ನು ನೀಡಿದ್ದೀರಿ. ಕೇವಲ ಸುಮಲತಾ ಸುಮಲತಾ ಸುಮಲತಾ ಅನ್ನೋದು ಮಾತ್ರ ಇತ್ತು ಮಾದ್ಯಮಗಳಲ್ಲಿ, ಮೇ 23ಕ್ಕೆ ನಿಮಗೆಲ್ಲಾ ತಕ್ಕ ಉತ್ತರವನ್ನು ನಾನುಕೊಡುವೆ. ಮಂಡ್ಯ ಜನರು ಕೂಡಾ ನಿಮಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಸಿಎಂ ಅವರು ಮಾಧ್ಯಮಗಳ ವಿರುದ್ಧ ಅಸಮಾಧಾನ ಮತ್ತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೊನೆಗೆ ಅವರು ಉತ್ತರ ಕರ್ನಾಟಕದ 10ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಎರಡನೇ ಹಂತದ ಚುನಾವಣೆಗೆ ನಾನು ಪ್ರಚಾರ ಮಾಡುವೆ. ಈಗಾಗಲೇ ಮಂಡ್ಯದಲ್ಲಿ ತಮ್ಮ ಪಕ್ಷಕ್ಕೆ ಬಹಳ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. ಮಂಡ್ಯದಲ್ಲಿ ಈ ಬಾರಿ ಕಳೆದ ವಿಧಾನಸಭೆಗಿಂತ ಹೆಚ್ಚಿನ ಮತದಾನವಾಗಿದೆ. ಮತದಾನ ಹೆಚ್ಚಾಗಿರುವುದು ನಮಗೆ ಅಧಿಕ ಲಾಭವಾಗುವುದು ಖಚಿತ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here