ಚುನಾವಣಾ ಸಂದರ್ಭದಲ್ಲಿ ಮಂಡ್ಯ ರಣಕಣದಲ್ಲಿ ನಡೆದ ಮಾತಿನ ಚಕಮಕಿ, ವಾಗ್ದಾಳಿಗಳನ್ನು ಬಹಳ ಬೇಗ ಮರೆಯುವುದು ಸಾಧ್ಯವಿಲ್ಲ. ಜೆಡಿಎಸ್ ನಾಯಕರು ಸುಮಲತ ಅವರ ವಿರುದ್ಧ ಮಾಡಿದ ಟೀಕಾ ಪ್ರಹಾರಗಳನ್ನು ಬಹುತೇಕ ಎಲ್ಲರೂ ಖಂಡಿಸಿದ್ದು ನಿಜ. ಅದಾದ ನಂತರ ಸುಮಲತ ಅವರು ಚುನಾವಣಾ ಕಣದಲ್ಲಿ ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಜಯಗಳಿಸಿ ಸಂಸದೆಯಾದರು. ಅವರ ಪ್ರತಿಸ್ಪರ್ಧಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸೋಲಿನಿಂದ ನಾನು ವಿಚಲಿತನಾಗಿಲ್ಲ. ನಾನು ಮಂಡ್ಯದಲ್ಲೇ ಇದ್ದು ಅಲ್ಲಿನ ಜನರಿಗಾಗಿ ದುಡಿಯುವೆ ಎಂದು ಹೇಳಿದ್ದರು.

ಅದರಂತೆ ಮಂಡ್ಯಕ್ಕೆ ಭೇಟಿ ನೀಡಿದ ನಿಖಿಲ್ ಅವರು ಇಂದು ಅಲ್ಲಿ ಅನಾರೋಗ್ಯದ ಕಾರಣ ಮೃತಪಟ್ಟ ಜೆಡಿಎಸ್ ಕಾರ್ಯಕರ್ತನ ಮನೆಗೆ ಭೇಟಿ ಕೊಟ್ಟ ಅವರು ಸಂತಾಪ ಸೂಚಿಸಿದ್ದರು. ಅದಾದ ನಂತರ ಅವರು ಮಾತನಾಡುತ್ತಾ ಮಂಡ್ಯದ ನೂತನ ಸಂಸದೆ ಸುಮಲತ ಅಂಬರೀಶ್ ಅವರಿಗೆ ತಮ್ಮ ಮಾತಿನ ಮೂಲಕವೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅವರು ಮಾತನಾಡುತ್ತಾ ನೂತನ ಸಂಸದರು ಬಹಳ ಶಕ್ತಿ ಶಾಲಿ, ನಾವೆಲ್ಲಾ ಸಣ್ಣವರು ಬಿಡಿ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಅವರಿಗೆ ಬಿಜೆಪಿಯ ಬೆಂಬಲ ಇದೆ. ಅವರು ಕಾವೇರಿ ನೀರಿಗಾಗಿ ಹೋರಾಟ ಮಾಡ್ತಾರೆ. ಅವರಿಗೇನು ಪ್ರಧಾನಿ ಮಂತ್ರಿವರೆಗೂ ಕಾಂಟಾಕ್ಟ್ ಇದೆ. ನಾವೆಲ್ಲಾ ಯಾರು ಸ್ವಾಮಿ, ಆದ್ರೆ ದೇವೇಗೌಡರೇನು ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡ್ಕೊಂಡು ಬಂದಿದ್ದಾರೆ ಅದನ್ನು ಪ್ರಾಮಾಣಿಕವಾಗಿ ಮುಂದುವರೆಸೋದಕ್ಕೆ ನಾವಿದ್ದೀವಿ. ಆದರೆ ಸಂಸದೆಯವರಿಗೂ ಜವಾಬ್ದಾರಿ ಇದೆ ಅನ್ನೋ ನಂಬಿಕೆ ನನಗಿದೆ, ಜನರಿಗೆ ಇದೆ. ನಿರೀಕ್ಷೆಗೆ ತಕ್ಕಂತೆ ಅವರು ಕಾರ್ಯ ಮಾಡಲಿ ಅಂತ ನಾವು ಆಶಿಸ್ತೇವೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here