ಮಂಡ್ಯ ಚುನಾವಣಾ ಕಣದಲ್ಲಿ ಇರುವ ಪಕ್ಷೇತರ ಅಭ್ಯರ್ಥಿ ಸುಮಲತ ಅವರ ಪರವಾಗಿ ಹಾಗೂ ವಿರೋಧವಾಗಿ ಹಲವು ಹೇಳಿಕೆಗಳನ್ನು ನಾವೆಲ್ಲಾ‌ ಕೇಳುತ್ತಲೇ ಬಂದಿದ್ದೇವೆ. ಈಗ ಅವರ ವಿರೋಧಿಗಳ‌ ಗುಂಪಿಗೆ ಅಡಿ ಇಟ್ಟಿದ್ದಾರೆ ಮಾಜಿ ಸಂಸದೆ ಹಾಗೂ ನಟಿ ರಮ್ಯ ಅವರ ತಾಯಿ. ಅವರು ಮಾದ್ಯಮಗಳ ಜೊತೆ ಮಾತನಾಡುತ್ತಾ ಅಂಬರೀಶ್ ಅವರ ಬಗ್ಗೆ ಹಾಗೂ ಅವರ ಪತ್ನಿ ಸುಮಲತ ಅಂಬರೀಶ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಬರೀಶ್ ಅವರು ಇದ್ದಾಗ ಎಲ್ಲೂ ಮಾತನಾಡದಿದ್ದ ರಮ್ಯ ಅವರ ತಾಯಿ ರಂಜಿತ ಅವರು , ಈಗ ಅಂಬರೀಶ್ ಬಗ್ಗೆ ಮಾತನಾಡೋಕೆ ನನಗೆ ಯಾವುದೇ ಭಯವಿಲ್ಲ ಎಂದು ಮಾದ್ಯಮಗಳ ಎದುರು ನುಡಿದಿದ್ದಾರೆ.

ರಂಜಿತ ಅವರು ಮಾತನಾಡುತ್ತಾ ಸುಮಲತ ಅಂಬರೀಶ್ ಅವರು ಮಾಡುತ್ತಿರುವುದೆಲ್ಲಾ ಡ್ರಾಮಾ, ಮಾತನಾಡುತ್ತಿರುವುದೆಲ್ಲಾ ಸುಳ್ಳು ಅವರನ್ನು ಯಾವುದೇ ಕಾರಣಕ್ಕೂ ನಂಬಿ ಮೋಸ ಹೋಗಬೇಡಿ ಎಂದು ಅವರು ಮಂಡ್ಯದ ಜನರಿಗೆ ಸಲಹೆ ನೀಡಿದ್ದಾರೆ. ತನಗೆ ರಮ್ಯ ಅವರೇ ಮಂಡ್ಯಕ್ಕೆ ಹೋಗಿ ಕುಮಾರಸ್ವಾಮಿ ಅವರು ಹಾಗೂ ಜೆಡಿಎಸ್ ಮಂಡ್ಯಕ್ಕೆ ಮಾಡಿರುವ ಕೆಲಸಗಳ ಬಗ್ಗೆ ಹೇಳಲು, ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡಲು ಹೇಳಿದ್ದು ಎಂದು ತಿಳಿಸಿರುವ ಅವರು ರಮ್ಯಾಗೆ ಕೆಲವು ಕಾರಣಗಳಿಂದ ಪ್ರಚಾರಕ್ಕೆ ಬರಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ರಂಜತ ಅವರು ಇಂದು ಎಲ್ಲರಿಗೂ ಗೊತ್ತಿದೆ ರಮ್ಯ ಸೋತಿದ್ದು, ಇತರೆ ಎಂಎಲ್ಎ ಹಾಗೂ ಎಂಪಿಗಳು ಸೋತಿದ್ದಕ್ಕೆ ಮುಖ್ಯ ಕಾರಣ ಅಂಬರೀಶ್ ಅವರು. ಮಂಡ್ಯದ ಜನಕ್ಕೆ ಇವೆಲ್ಲಾ ಗೊತ್ತಿದೆ. ನನಗೆ‌‌ ಅಂಬರೀಶ್ ಅವರ ಬಗ್ಗೆ ಹೇಳಲು ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ. ಹೇಗೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂಬುದು ತಿಳಿದಿದೆ, ಈಗ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಜನರು ಗೆಲ್ಲಿಸಬೇಕಿದೆ. ಪಕ್ಷೇತರ ಅಭ್ಯರ್ಥಿಯ ಮಾತಿಗೆ ಮಂಡ್ಯದ ಜನರು ಮರುಳಾಗಬಾರದು ಎಂದು ರಮ್ಯ ಅವರ ತಾಯಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here