ಲೋಕಸಭಾ ಚುನಾವಣೆಯ ಫಲಿತಾಂಶದ ಮಹತ್ತರ ಘಟ್ಟಕ್ಕೆ ದಿನಗಣನೆ ಆರಂಭವಾಗಿದೆ. ಅದರಲ್ಲೂ ವಿಶೇಷವಾಗಿ ಎಲ್ಲರ ಗಮನ ಇರೋದು ಮಂಡ್ಯ ಲೋಕಸಭಾ ಕ್ಷೇತ್ರದ ಕಡೆಗೆ. ಅದು ಈ ಬಾರಿ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿತ್ತು ಹಾಗೂ ಎಲ್ಲರ ದೃಷ್ಟಿಯನ್ನು ತನ್ನ ಕಡೆ ಸೆಳೆದಿತ್ತು. ಕಾರಣ ಸುಮಲತ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಅಖಾಡದಲ್ಲಿ ಇದ್ದದ್ದು. ಫಲಿತಾಂಶ ಹತ್ತಿರವಾಗಿರುವ ಈ ಸಮಯದಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸಮಲತಾ ಅವರ ಗೆಲುವಿಗಾಗಿ ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಮಂಡ್ಯದಲ್ಲಿ ಈ ಬಾರಿ ಸುಮಲತ ಗೆಲ್ಲುತ್ತಾರೆಂಬ ನಿರೀಕ್ಷೆಗಳು ಬಹಳ ಇದೆ. ಮಂಡ್ಯ ಕ್ಷೇತ್ರದಲ್ಲಿನ ಜನರು ಹಾಗೂ ಬೇರೆ ಕಡೆಗಳಲ್ಲಿ ಕೂಡಾ ಜನರೆಲ್ಲರೂ ಕೂಡ ಸಮಲತಾ ಅವರೇ ಜಯ ಸಾಧಿಸುವಂತಾಗಲಿ ಎಂದು ಬಯಸಿದ್ದಾರೆ. ಜನರ ಬೆಂಬಲ, ಪ್ರೋತ್ಸಾಹ ಹಾಗೂ ಹಾರೈಕೆ, ಆಶೀರ್ವಾದಗಳೇ ಸಮಲತಾ ಗೆಲುವಿಗೆ ಜೊತೆಯಾಗಲಿವೆ ಎನ್ನಲಾಗಿದ್ದು ಅದರ ಜೊತೆಗೆ ತಾಯಿ ಶ್ರೀ ಅನ್ನಪೂಣೇಶ್ವರಿಯ ಕೃಪೆ ಕೂಡಾ ಬೇಕೆಂದು ದೇವಿಯಲ್ಲಿ ಸಮಲತಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದಾರೆ ರಾಕ್ ಲೈನ್ ವೆಂಕಟೇಶ್.

ಅಲ್ಲದೆ ಇದೇ ವೇಳೆ ಅವರು ಮಾದ್ಯಮಗಳಿಗೆ ಒಂದು ವೇಳೆ ದೇಶದಲ್ಲೇನಾದರೂ ಫಲಿತಾಂಶದ ನಂತರ ಅತಂತ್ರ ಪರಿಸ್ಥಿತಿ ಎದುರಾದರೆ ಆಗ ಸುಮಲತ ಜನರ ತೀರ್ಮಾನದಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ವೆಂಕಟೇಶ್ ಹೇಳಿದ್ದಾರೆ. ಚುನಾವಣೆ ವೇಳೆ ತೀವ್ರ ಪ್ರಚಾರ ಪಡೆದ ಜೋಡೆತ್ತು, ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಗಳ ಮಾತನಾಡಿದ ಅವರು ಕೇವಲ ಟೈಟಲ್ ಗಳಿಂದ ಸಿನಿಮಾಗಳು ನಡೆಯುವುದಿಲ್ಲ.‌ಅದರ ಜೊತೆಗೆ ನಾಯಕ, ಕಥೆ, ಎಲ್ಲವೂ ಮುಖ್ಯ ಎಂದಿದ್ದಾರೆ. ಕೇವಲ ಟೈಟಲ್ ನಿಂದ ಸಿನಿಮಾ ಓಡುತ್ತೆ ಅನ್ನೋದು ತಪ್ಪು ಕಲ್ಪನೆ ಅಷ್ಟೇ ಎಂದು ಇತ್ತೀಚಿಗೆ ಸಿನಿಮಾಗಳಿಗೆ ಜೋಡೆತ್ತು ಹಾಗೂ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಇಟ್ಟಿರುವುದರ ಬಗ್ಗೆ ಕೂಡಾ ರಾಕ್ ಲೈನ್ ವೆಂಕಟೇಶ್ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here