ಬೆಂಗಳೂರು-ಮಂಡ್ಯ

ಅಂಬರೀಶ್ ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಲು ನಿಖಿಲ್ ಕುಮಾರ್ ಜಾಗ ಗುರುತು ಮಾಡಿದ್ದರು” ಎಂದು ಹೇಳಿಕೆ ನೀಡಿದ್ದ ನಿರ್ಮಾಪಕ ಮುನಿರತ್ನ ಅವರಿಗೆ “ಸಾವಿನಲ್ಲೂ ರಾಜಕೀಯ ಮಾಡುವ ಇಂತಹ ಬೆಳವಣಿಗೆ ಚೆನ್ನಾಗಿಲ್ಲ’ ಎಂದು ಸುಮಲತಾ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುನಿರತ್ನ ಅವರು ಅಂಬರೀಷ್ ಅಭಿಮಾನಿಗಳ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ. ಅಂಬರೀಶ್ ಪತ್ನಿ ಸುಮಲತಾ, ದರ್ಶನ್ ಫ್ಯಾನ್ಸ್ ಹಾಗೂ ಅಂಬರೀಷ್ ಫ್ಯಾನ್ಸ್ ಎಲ್ಲರೂ ಮುನಿರತ್ನ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.”ನನ್ನ ಪತಿ ಅಂಬರೀಶ್ ಅವರಿಂದ ಮುನಿರತ್ನ ಯಾವ ರೀತಿ ಲಾಭ ಪಡೆದುಕೊಂಡಿದ್ದಾರೆ ಎಂಬುದನ್ನ ಒಮ್ಮೆ ನೆನಪಿಸಿಕೊಳ್ಳಲಿ’ ಎಂದು ಸುಮಲತಾ ಅವರು ಹೇಳಿದ್ದಾರೆ.

ಅಂಬರೀಶ್ ಅಂತ್ಯ ಸಂಸ್ಕಾರದ ಬಗ್ಗೆ ಹೇಳಿಕೆ ನೀಡಿರುವ ಮುನಿರತ್ನ ಅವರಿಗೆ ಇಲ್ಲಿ ಬಂದು ಮಾತನಾಡುವ ನೈತಿಕ ಹಕ್ಕಿಲ್ಲ. ಸುಳ್ಳು-ಸ್ವಾರ್ಥದ ರಾಜಕಾರಣ ಮಾಡುವುದು, ಹಣ-ಭ್ರಷ್ಟಾಚಾರದ ರಾಜಕಾರಣ ಮಾಡುವುದು, ಸಾವಿನಲ್ಲೂ ರಾಜಕಾರಣ ಮಾಡುವುದು ನಿಮ್ಮ ಅಭ್ಯಾಸ ಇರಬಹುದು. ಆದರೆ ಇದು ತುಂಬಾ ಹೇಸಿಗೆ ತರುವಂಥ ಸಂಗತಿ’ ಇಂಥಹ ಮಾತುಗಳನ್ನ ಯಾರೇ ಆಡಿದರೂ ನಾನು ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ಜನರು ಕೂಡ ಇದನ್ನ ಒಪ್ಪುವುದಿಲ್ಲ” ಎಂದು ಸುಮಲತಾ ಹೇಳಿದ್ದಾರೆ. ಕಿಡಿಕಾರಿದ್ದಾರೆ.”ಮಂಡ್ಯ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಅಂಬರೀಶ್ ಅವರ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಿಮ್ಮ ಸಾಧನೆ, ಮಂಡ್ಯದಲ್ಲಿ ನೀವು ಮಾಡಿದ ಅಭಿವೃದ್ದಿ ವಿಷಯಗಳನ್ನು ಜನರ ಮುಂದೆ ತಂದು ಪ್ರಚಾರ ಮಾಡಿಕೊಳ್ಳಿ.

ಅದು ಬಿಟ್ಟು ನೀವ್ಯಾಕೆ ಅಂಬರೀಶ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತೀರಿ? ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದಕ್ಕೆ ಅಥವಾ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಅಂದು ನೀವು ಅಂತ್ಯಕ್ರಿಯೆ ಮಾಡಿದ್ದೀರಿ ಎಂದು ನಾನು ತಿಳಿದುಕೊಳ್ಳಬೇಕಾ? ಅಂದು ಅದಕ್ಕೆ ನಾನು ಕೃತಜ್ಞಗಳನ್ನ ತಿಳಿಸಿದ್ದೇನೆ. ಸಾರ್ವಜನಿಕವಾಗಿ ಎಲ್ಲರ ಮುಂದೆಯೇ ಧನ್ಯವಾದ ತಿಳಿಸಿದ್ದೇನೆ” ಎಂದು ಸುಮಲತಾ ಅವರು ಖಾರವಾಗಿ ಪ್ರಶ್ನೆ ಹಾಗೂ ಪ್ರತಿಕ್ರಿಯೆ ನೀಡಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here