ಮಂಡ್ಯ ಪಕ್ಷೇತರ ಅಭ್ಯರ್ಥಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತ ಅವರಿಗೆ ಈ ತಿಂಗಳು ಅಂದರೆ ಮೇ ಬಹಳ ಮುಖ್ಯವಾಗಿದೆ. ಒಂದೆಡೆ ಅವರ ರಾಜಕೀಯ ಜೀವನವಾದರೆ, ಮತ್ತೊಂದೆಡೆ ಸಿನಿಮಾ ಹಾಗೂ ಅವರ ವೈಯಕ್ತಿಕ ಜೀವನದ ಕೆಲವು ಪ್ರಮುಖ ಘಟನೆಗಳಿಗೆ ಈ ತಿಂಗಳು ಸಾಕ್ಷಿಯಾಗಲು ಹೊರಟಿದೆ. ಈ ವರ್ಷದ ಮೇ ನಿಜಕ್ಕೂ ಸುಮಲತ ಅವರಿಗೆ ಬಹಳ ಮಹತ್ವಪೂರ್ಣ ಒಂದೆಡೆಯಾದರೆ, ಮತ್ತೊಂದೆಡೆ ಅದರ ಜೊತಗೆ ಒಂದು ನೆನಪು ಕೂಡಾ ಅಡಗಿದೆ. ಹಾಗಾದರೆ ಬನ್ನಿ ಈ ಬಾರಿಯ ಮೇ ತಿಂಗಳಿಗೂ ಸುಮಲತ ಅವರ ಜೀವನಕ್ಕೂ ಏಕಿಷ್ಟು ಮಹತ್ವ ಎಂಬುದಕ್ಕೆ ಉತ್ತರ ಇಲ್ಲಿದೆ.

ಮೊದಲನೆಯದಾಗಿ ಈ ತಿಂಗಳ 23 ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಬರಲಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಜಯ ಗಳಿಸಿದರೆ, ಅವರ ರಾಜಕೀಯ ಜೀವನ ಆರಂಭವಾಗುವುದರ ಜೊತೆಯಲ್ಲೇ ಸುಮಲತ ಅವರು ಒಂದು ಹೊಸ ದಾಖಲೆಯನ್ನು ಕೂಡಾ ಬರೆಯಲಿದ್ದಾರೆ. ಇನ್ನು ಇದಾದ ಮರುದಿನ ಅಂದರೆ ಮೇ 24 ರಂದು ಸುಮಲತ ಹಾಗೂ ಹರಿ ಪ್ರಿಯ ಅವರು ಅಭಿನಯಿಸಿರುವ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಪಾರ್ವತಮ್ಮ ನ ಲೀಡ್ ರೋಲ್ ನಲ್ಲಿ ಸುಮಲತ ಅವರು ಅಭಿನಯಿಸಿದ್ದಾರೆ.

ಇದೇ ತಿಂಗಳ 29 ರಂದು ರೆಬೆಲ್ ಸ್ಟಾರ್ ಅವರ ಹುಟ್ಟಿದ ದಿನ ಇದೆ. ಪ್ರತಿವರ್ಷ ಅಭಿಮಾನಿಗಳೊಡನೆ ಆಚರಿಸುತ್ತಿದ್ದ ಜನ್ಮ ದಿನವನ್ನು ಈ ಬಾರಿ ಆಚರಿಸಲು ಅಂಬರೀಶ್ ಅವರ ಅನುಪಸ್ಥಿತಿ ಎಲ್ಲರನ್ನೂ ಕಾಡಲಿರುವುದು ಕೂಡಾ ನಿಜ. ಅಲ್ಲದೆ ಇದೇ ತಿಂಗಳಲ್ಲಿ ಅಂಬರೀಶ್ ದಂಪತಿಗಳ ಏಕೈಕ ಪುತ್ರ ಅಭಿಷೇಕ್ ಅವರು ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದು, ಅವರ ಮೊದಲ ಸಿನಿಮಾ‌ ಬಿಡುಗಡೆಯಾಗುತ್ತಿದೆ. ಹೀಗೆ ಮಗನ ಸಿನಿಮಾ ಜೀವನ ಕೂಡಾ ಈ ಮೇ ತಿಂಗಳಿನಲ್ಲೇ ಆರಂಭವಾಗಲಿದ್ದು, ಸುಮಲತ ಅವರಿಗೆ ಇದು ಮರೆಯಲಾರದ ಮೇ ತಿಂಗಳಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here