ನಾವು ಏನಾದರೂ ಮಾಹಿತಿ ಬೇಕೆಂದ ಕೂಡಲೇ ಗೂಗಲ್ ನಲ್ಲಿ ಸರ್ಚ್ ಮಾಡಲು ಆರಂಭಿಸುತ್ತೇವೆ. ನಮ್ಮ ಬೆರಳಂಚಿನಲ್ಲಿ ಕೆಲವೇ ಕ್ಷಣಗಳಲ್ಲಿ ಅಗತ್ಯವಿರುವ ಮಾಹಿತಿ ನಮ್ಮ ಕಣ್ಮುಂದೆ ಬಂದು ಬಿಡುತ್ತದೆ‌. ಇಂದಿನ ಪೀಳಿಗೆ ಅಂತೂ ಯಾವುದೇ ವಿಷಯವೇ ಆದರೂ ಕೂಡಲೇ ನೋಡುವುದು‌ ಗೂಗಲ್ ಕಡೆಗೆ. ನಮಗೆ ಯಾವ ಮಾಹಿತಿ ಬೇಕೋ ಅದನ್ನು ಟೈಪ್ ಮಾಡಿ ಸರ್ಚ್ ಕೊಟ್ಟರೆ ಸಾಕು ಮಾಹಿತಿ ಲಭ್ಯ‌. ಆದರೆ ಕೆಲವೊಮ್ಮೆ ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಕೆಲವು ವಿಷಯಗಳು ನಮ್ಮನ್ನು ದಂಗು ಬಡಿಸುವುದು ಮಾತ್ರವಲ್ಲ, ಒಂದು ಕ್ಷಣ ಏನಿದು? ಎಂಬ ಅನುಮಾನ ಹುಟ್ಟಿಸುತ್ತದೆ.

ಈಗ ಅಂತಹುದೇ ಒಂದು ಎಡವಟ್ಟು ಮಾಡಿದೆ ಗೂಗಲ್. ಅದೇನೆಂದರೆ ಸ್ಯಾಂಡಲ್ ವುಡ್ ನ ಮಳೆ ಹುಡುಗಿ ಎಂದೇ ಖ್ಯಾತರಾದ ಪೂಜಾ ಗಾಂಧಿ ಅವರು ಎಲ್ಲರಿಗೂ ಚಿರಪರಿಚಿತ. ಆದರೆ ಗೂಗಲ್ ಮಾಡಿರುವ ಎಡವಟ್ಟು ಹೇಗಿದೆ ಎಂದರೆ, ನಾವು ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪತ್ನಿ ಯಾರೆಂದು ತಿಳಿಯಲು ಸನ್ನಿ ಡಿಯೋಲ್ ವೈಫ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ, ಅಲ್ಲಿ ಪೂಜಾ ಗಾಂಧಿಯವರ ಪೋಟೋಗಳು ಬರುತ್ತಿವೆ‌. ಒಂದು ಕ್ಷಣ ವಿಷಯ ತಿಳಿಯದವರು ಪೂಜಾ ಗಾಂಧಿಯವರಿಗೆ ಸನ್ನಿ ಡಿಯೋಲ್ ಅವರಿಗೆ ಪೂಜಾ ಅವರೊಡನೆ ಮದುವೆ ಯಾವಾಗ ಆಯಿತೆಂಬ ಅನುಮಾನ ಮೂಡಬಹುದು‌.

ಸನ್ನಿ ಡಿಯೋಲ್ ಅವರ ಪತ್ನಿಯ ಹೆಸರು ಪೂಜಾ ಡಿಯೋಲ್ ಆಗಿರುವುದರಿಂದ ಈ ಎಡವಟ್ಟು ಆಗಿದೆ. ಆದರೆ ಗೂಗಲ್ ಮಾಡಿದ ಈ ತಪ್ಪಿನಿಂದಾಗಿ ಈಗ ಪೂಜಾ ಗಾಂಧಿಯವರು ಸನ್ನಿ ಡಿಯೋಲ್ ಗೆ ಗೂಗಲ್ ಮದುವೆ ಮಾಡಿಸಿದಂತಾಗಿದೆ. ಅದು ಸಾಲದೆಂಬಂತೆ ಗೂಗಲ್ ಸರ್ಚ್ ನಲ್ಲಿ ಒಂದು ಇಮೇಜ್ ಕೂಡಾ ಸನ್ನಿ ಅವರ ಪತ್ನಿ ಪೂಜಾ ಎಂಬಂತೆ ಬಿಂಬಿಸಿರುವುದು ಕೂಡಾ ಹಾಸ್ಯಾಸ್ಪದ ಎನಿಸಿದೆ‌. ಅನುಮಾನವಿದ್ದರೆ ಒಮ್ಮೆ ಗೂಗಲ್ ಸರ್ಚ್ ನಲ್ಲಿ ಸನ್ನಿ ಡಿಯೋಲ್ ವೈಫ್ ಎಂದು ಇಂಗ್ಲೀಷ್‌ ನಲ್ಲಿ ಟೈಪ್ ಮಾಡಿ ಸರ್ಚ್ ಕೊಟ್ಟು ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here