ಜಗತ್ತಿನ ಪ್ರತಿಯೊಂದು ದೇಶದಲ್ಲಿಯೂ ಅಲ್ಲಿನ ಜನರಲ್ಲಿ ವಿಶೇಷತೆ ಹಾಗೂ ಕೆಲವು ವಿಶಿಷ್ಠವಾದ ಲಕ್ಷಣಗಳಿರುತ್ತವೆ‌. ನಮ್ಮ ದೇಶದಲ್ಲಿ ಕೂಡಾ ಜನರಲ್ಲಿ ಅನೇಕ ವಿಶೇಷತೆಗಳಿವೆ. ಅದರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ನಾವು ಬಹುಬೇಗ ಯಾರನ್ನೇ ಆಗಲಿ ನಮ್ಮವರೆಂದು ಒಪ್ಪಿಕೊಳ್ಳುತ್ತೇವೆ. ಅದರಲ್ಲೂ ಸಿನಿಮಾ ನಟ – ನಟಿಯರಾದರೆ ಅವರ ಮೇಲೆ ಅಭಿಮಾನವನ್ನು ಬಹುಬೇಗನೆ ಬೆಳೆಸಿಕೊಳ್ಳುತ್ತಾರೆ ಹಾಗೂ ತಮ್ಮ ನೆಚ್ಚಿನ ನಟ ಹಾಗೂ ನಟಿಯರನ್ನು ಆರಾಧ್ಯ ದೈವಗಳಂತೆ ಭಾವಿಸುತ್ತಾರೆ. ಈಗಾಗಲೇ ಪ್ರಖ್ಯಾತರಾದ ನಟ ನಟಿಯರನ್ನು ಆರಾಧ್ಯ ದೇವಗಳಂತೆ ಆರಾಧಿಸುವ ಜನರನ್ನು ನೋಡಿದ್ದೇವೆ. ಅಷ್ಟು ಮಾತ್ರವಲ್ಲದೆ ಅವರಿಗಾಗಿ ದೇವಾಲಯ ನಿರ್ಮಿಸಿರುವ ಉದಾಹರಣೆಗಳು ಕೂಡಾ ಇವೆ.

ಈಗ ಅಂತುಹುದೇ ಒಂದು ಅಭಿಮಾನದ ಸಂಕೇತವಾಗಿ, ಅಭಿಮಾನಿಗಳು ತಮ್ಮ ಅಭಿಮಾನ ನಟಿಗಾಗಿ ದೇವಾಲಯವನ್ನು ನಿರ್ಮಿಸಲು ಹೊರಟಿದ್ದಾರೆ. ಇನ್ನು ಆ ಮಂದಿರ ಯಾವ ನಟಿಗಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂದರೆ ಅದು ಮಾದಕ ನಟಿ ಸನ್ನಿ ಲಿಯೋನಿಗಾಗಿ. ಮುಂಬೈನ ಬಳಿ ಇರುವ ಹಳ್ಳಿಯಲ್ಲಿ ಈ ಆಲಯ ನಿರ್ಮಾಣಕ್ಕೆ ಅಲ್ಲಿನ ಅಭಿಮಾನಿಗಳು ತೀರ್ಮಾನಿಸಿದ್ದು, ಸನ್ನಿ ಲಿಯೋನಿ ಅವರ 36 ನೇ ಜನ್ಮ ದಿನದ ವೇಳೆಗೆ ಅದನ್ನು ಪೂರ್ತಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಈ ಹಿಂದೆ ಕೂಡಾ ಅಮಿತಾಬ್ ಬಚ್ಚನ್ ಹಾಗೂ ಮಮತಾ ಕುಲಕರ್ಣಿ ಗಾಗಿ ಆಲಯಗಳನ್ನು ಅಭಿಮಾನಿಗಳು ನಿರ್ಮಾಣ ಮಾಡಿದ್ದರು.

ಇನ್ನು ಈ ಗ್ರಾಮದ ಜನರು ಹೇಳುವುದು ಏನೆಂದರೆ ತಾವು ಈ ಮಂದಿರ ನಿರ್ಮಾಣಕ್ಕೆ ಕೈ ಹಾಕಿದರೆ ಅದಕ್ಕೆ ವಿರೋಧ ವ್ಯಕ್ತವಾಗಬಹುದು. ಆದರೆ ಯಾರೇನೇ ಅಂದರೂ ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡುವುದು ಖಚಿತ ಎಂದಿದ್ದಾರೆ. ಅಲ್ಲದೆ ದೇವಾಲಯದ ಉದ್ಘಾಟನೆಗೆ ಸನ್ನಿ ಲಿಯೋನಿ ಬಂದರೆ ತಮಗೆ ಸಂತಸವಾಗುತ್ತದೆ ಎಂದು ಹೇಳಿದ್ದಾರೆ. ಈ ವಿಷಯದ ಕುರಿತಾಗಿ ಸ್ಥಳೀಯ ಹಿಂದಿ ಪತ್ರಿಕೆಯಲ್ಲೂ ಕೂಡಾ ಸುದ್ದಿ ಬಂದಿದೆ. ಒಟ್ಟಾರೆ ಸನ್ನಿ ಲಿಯೋನಿ ಮೇಲಿನ ಅಭಿಮಾನ ಈಗ ಆಕೆಯ ಮಂದಿರ ನಿರ್ಮಾಣಕ್ಕೆ ಕೂಡಾ ಕಾರಣವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here