ಸನ್ನಿ ಲಿಯೋನಿ ಹೆಸರು ಕೇಳಿದೊಡನೆ ಪಡ್ಡೆಗಳ‌ ನಿದ್ದೆ ಕೆಡುತ್ತದೆ. ಪೊರ್ನ್ ಸ್ಟಾರ್ , ಬಿಂದಾಸ್ ಫೋಸ್ ಗಳ , ಹಾಟ್ ಹಾಟ್ ಲುಕ್ ನ ಬಾಲಿವುಡ್ ನಟಿಯೊಬ್ಬಳು ನಮ್ಮ ಕಣ್ಮುಂದೆ ಬರುತ್ತದೆ. ಸನ್ನಿ ಲಿಯೋನಿ ಎಂದರೆ ಮಡಿವಂತಿಕೆಯ ನಟಿಯರ ಪಾಲಿಗೊಂದು ದುಸ್ವಪ್ನ ಹಾಗೂ ಅನೇಕ ನಟಿಯರ ಮಾತುಗಳಿಗೆ ಆಹಾರವಾದ, ಅವರ ಕೆಂಗಣ್ಣುಗಳಿಗೆ ಗುರಿಯಾದ ನಟಿ. ಈಕೆಯ ಹೆಸರು ಹೇಳಲು ಕೂಡಾ ಜನ ಹಿಂಜರಿಯುತ್ತಾರೆ. ಆದರೆ ಇದೇ ಮಾದಕ ನಟಿಯು ಈಗ ಮಾಡಿರುವ ಮಹೋನ್ನತ ಕೆಲಸ ಪ್ರತಿಯೊಬ್ಬರೂ ಆಕೆಯ ಕಡೆ ಗೌರವದ ದೃಷ್ಟಿ ನೆಡುವಂತೆ ಮಾಡಿದೆ. ಆಕೆಯ ಬಗ್ಗೆ ಆಲೋಚಿಸುವ ವಿಧಾನ ಬದಲಾಗಲಿದೆ.

ಕೇರಳದ ಜನ ಅತಿವೃಷ್ಟಿಯಿಂದ ನರಳಿ, ನಲುಗಿ , ಪ್ರಾಣ ಭಯದಿಂದ ಚೀರಾಡಿದ ದೃಶ್ಯಗಳು ನಮ್ಮ ಕಣ್ಮುಂದೆ ಇವೆ. ಇದಾದ ಹಿನ್ನೆಲೆಯಲ್ಲಿ ರಾಷ್ಟ್ರದ ಆದ್ಯಂತ ಸಾಮಾನ್ಯ ಜನರಿಂದ ಹಿಡಿದು, ಸರ್ಕಾರ ಹಾಗೂ ಸೆಲೆಬ್ರಿಟಿ ಗಳು ಕೇರಳದ ಜನರ ನೆರವಿಗೆ ತಮ್ಮ ಕೈಲಾದ ನೆರವನ್ನು ನೀಡಲು ಮುಂದೆ ಬಂದರು. ಮಾದ್ಯಮಗಳಲ್ಲಿ ಜನರಿಗೆ ನೆರವು ನೀಡಲು ಮುಂದೆ ಬನ್ನಿ ಎಂದು ಹೇಳಿದರು. ಇನ್ನೂ ಕೆಲವು ನಟ ನಟಿಯರು ಲಕ್ಷ ಲಕ್ಷ ದೇಣಿಗೆ ಕೊಡಲು ಮುಂದಾದರು. ಆದರೆ ಮಾನವನ ಜೀವ ಹಾಗೂ ಜೀವನದ ಮುಂದೆ ಹಣದ ಮೌಲ್ಯ ಯಾವತ್ತೂ ಗೌಣ ಎಂಬುದನ್ನು ಸಾಬೀತು ಪಡಿಸುವಂತೆ, ಸನ್ನಿ ಲಿಯೋನಿ ಕೇರಳದ ನೆರವಿಗೆ 5 ಕೋಟಿ ಮೊತ್ತವನ್ನು ಕಾಣಿಕೆಯಾಗಿ ನೀಡಿದ್ದಾರೆ.

ಹೌದು ಈ ಮೊತ್ತ ಅಕ್ಷರಶಃ ಸತ್ಯ. ಸನ್ನಿ ಲಿಯೋನಿ ಬಾರಿ ಮೊತ್ತದ ಹಣ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದು, ಕೋಟಿ ಕೋಟಿ ಗಳಿಸುವವರಿಗೆ ಮಾದರಿಯಾಗಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಎರಡು ಕೋಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಸನ್ನಿ ಲಿಯೋನಿಯ ಬಗ್ಗೆ ಕೇರಳಿಗರು ಮಾತ್ರವಲ್ಲದೆ, ಇಡೀ ಭಾರತದ ಜನರು ತಮ್ಮ ದೃಷ್ಟಿ ಕೋನ ಬದಲಿಸುವ ಬೆಳವಣಿಗೆ ಇದಾಗಿದೆ. ಕೊಚ್ಚಿಯ ಅಯಾನ್ ಲೊಕೇಶ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನಿಯವರಿಗೆ ಜನರ ಪ್ರೀತಿ ಸದಾ ಇರುತ್ತದೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here