ಹೊಸವರ್ಷ ಹತ್ತಿರ ಬರುತ್ತಿದ್ದಂತೆಯೇ ಯುವಜನತೆಗೆ ಎಲ್ಲಿಲ್ಲದ ಸಂಭ್ರಮ ಸಡಗರ.ಪಾರ್ಟಿ ಮಾಡೋರಿಗೆ ಹೊಸವರ್ಷಕ್ಕಿಂತ ಹರ್ಷದ ವಾತಾವರಣ ಮತ್ತೊಂದು ಸಿಗಲಿಕ್ಕಿಲ್ಲ.

ದೇಶ ವಿದೇಶಗಳಲ್ಲೂ ಹೊಸವರ್ಷದ ಸಂಭ್ರಮ ಅದ್ದೂರಿಯಾಗಿ ಇರುತ್ತದೆ.ಇನ್ನು ನಮ್ಮ ಬೆಂಗಳೂರಿನಲ್ಲಿ ಕಮ್ಮಿಯೇನಿಲ್ಲ ಹೊಸ ವರ್ಷ ಬಂತೆಂದರೆ ಎಂಜಿ ರಸ್ತೆ ಬ್ರಿಗೇಡ್ ರೋಡ್ ಫುಲ್ ಝೂಮ್ ಝೂಮ್.

 

ಈ ಬಾರಿಯ ಹೊಸವರ್ಷಕ್ಕೆ ಬೆಂಗಳೂರು ಸ್ವಲ್ಪ ಸ್ಪೆಷಲ್ ಆಗಿ ರಂಗೇರಲಿದೆ ಎಂಬ ಸುದ್ದಿ ಇತ್ತು.ಈ ಸ್ಪೆಷಲ್ ಸುದ್ದಿಗೆ ಕಾರಣ ಒನ್ ಆ್ಯಂಡ್ ಓನ್ಲಿ ಸನ್ನಿ ಲಿಯೋನ್.ಹೌದು ಸನ್ನಿ ಲಿಯೋನ್ ಈ ಬಾರಿ ಬೆಂಗಳೂರಿನಲ್ಲಿ ಹೊಸವರ್ಷಕ್ಕೆ ಸೊಂಟ ಬಳುಕಿಸುತ್ತಾಳೆ ಎಂಬ ಸುದ್ದಿ ಪಡ್ಡಗಳಿಗೆ ಬೀಳುತ್ತಿದ್ದಂತೆಯೇ ಯುವಜನತೆ ಬಾಯಿಬಿಟ್ಕೊಂಡ್ ಸನ್ನಿ ಫೋಟೋ ನೋಡ್ತಾ ಸನ್ನಿ ಲಿಯೋನ್ ಬರುವಿಕೆಯನ್ನು ಎದುರುನೋಡ್ತಾ ಕುಳಿತಿದ್ರು.

 

ಈ ವಿಷಯ ಕೆಲ ಸಂಸ್ಕಾರವಂತರಿಗೆ ಇರಿಸುಮುರಿಸಿ ತರಿಸಿತ್ತು.ಈ ಸಂಬಂದ ಕೆಲವರು ಸನ್ನಿ ಬರುವುದನ್ನು ವಿರೋಧಿಸಿದ್ದರು.ಪೋಲೀಸ್ ಇಲಾಖೆ ಕೂಡ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ಪಡ್ಡೆ ಹುಡುಗರ ಕನಸಿಗೆ ತಣ್ಣೀರು ಎರಚಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿ.

ಹೌದು ಸನ್ನಿ ಲಿಯೋನ್ ಕಾರ್ಯಕ್ರಮ ನಮ್ಮ ಸಂಸ್ಕೃತಿ ಅಲ್ಲ ಹೀಗಾಗಿ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.ಈ ವಿಷಯವಾಗಿ ಮಾಧ್ಯಮದ ಜೊತೆ ಮಾತಾಡಿದ ಗೃಹಸಚಿವರು ಕಾರ್ಯಕ್ರಮ ಆಯೋಜಿಸಿರುವವರು ರದ್ದು ಪಡಿಸಬೇಕು ಎಂದು ಆದೇಶ ಹೊರಡಿಸಿರುವುದಾಗಿ ಹೇಳಿದರು.ಒಟ್ಟಾರೆ ಈ ಬಾರಿ ಸನ್ನಿ ಲಿಯೋನ್ ದರ್ಶನ ಬೆಂಗಳೂರಿನ ಪಡ್ಡಹುಡುಗರಿಗೆ ಸಿಗೋದು ಬಹುತೇಕ ಡೌಟ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here