ಸ್ಯಾಂಡಲ್ ವುಡ್ ಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರನ ಮಗ ನಿರಂಜನ್ ಸುಧೀಂದ್ರ ಅವರು ಸಂಪೂರ್ಣ ಮಟ್ಟದ ನಾಯಕ ನಟನಾಗಿ ಎಂಟ್ರಿ ನೀಡಲು ಭರ್ಜರಿಯಾಗಿ ಸಿದ್ಧತೆಗಳು ನಡೆದಿವೆ. ಆಗಸ್ಟ್ 15 ರಂದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಅವರ ಉಪಸ್ಥಿತಿಯಲ್ಲಿ ಹೊಸ ಸಿನಿಮಾದ ಲಾಂಚ್ ನಡೆದಿದೆ. ನಿರಂಜನ್ ಅವರ ನಟನೆಯ ಈ ಹೊಸ ಸಿನಿಮಾಕ್ಕೆ ಈ ಹಿಂದೆ ಉಪೇಂದ್ರ ಅವರೇ ನಟಿಸಿ, ನಿರ್ದೇಶನ ಮಾಡಿದ್ದ ಸೂಪರ್ ಸ್ಟಾರ್ ಹೆಸರನ್ನೇ ಇಡಲಾಗಿದ್ದು, ಈ ಹೊಸ ಸಿನಿಮಾದ ನಿರ್ದೇಶನವನ್ನು ಮಾಡುತ್ತಿರುವುದು ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು.

ಈಗ ಈ ಸಿನಿಮಾದ ಮತ್ತೊಂದು ವಿಶೇಷ ಸುದ್ದಿ ಹೊರ ಬಂದಿದೆ. ಏನು ಆ ವಿಶೇಷ ಸುದ್ದಿ ಎಂದರೆ ಈ ಸಿನಿಮಾದ ಜೊತೆ ರಾಖಿ ಭಾಯ್ ಯಶ್ ಅವರು ಕೂಡಾ ಜೊತೆಯಾಗುತ್ತಿದ್ದಾರೆ. ಅಂದರೆ ರಾಖೀ ಬಾಯ್ ಯಶ್ ಅವರು ಈ ಸಿನಿಮಾದಲ್ಲಿ ನಟನೆ ಮಾಡುತ್ತಿಲ್ಲ, ಬದಲಿಗೆ ಅವರು ನಿರಂಜನ್ ಅವರ ನಡನೆಯ ಈ ಹೊಸ ಸಿನಿಮಾದ ಟೀಸರ್ ಗೆ ತಮ್ಮ ಧ್ವನಿಯನ್ನು ನೀಡಲು ಹೊರಟಿದ್ದಾರೆ. ಹೌದು ಸೂಪರ್ ಸ್ಟಾರ್ ಸಿನಿಮಾದ ಟೀಸರ್ ನಿರಂಜನ್ ಅವೆ ಜನ್ಮದಿನದಂದು ಅಂದರೆ ಆಗಸ್ಟ್ 20 ರಂದು ಬಿಡುಗಡೆ ಆಗಲಿದ್ದು, ಈ ಟೀಸರ್ ನಲ್ಲಿ ನಾವು ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಆಗಿರುವ ಧ್ವನಿಯನ್ನು ಕೇಳಬಹುದಾಗಿದೆ.

ನಿರ್ದೇಶಕರು ಬರೆದಿರುವ ಡೈಲಾಗ್ ಗಳು ಟೀಸರ್ ನಲ್ಲಿ ಇರಲಿದ್ದು, ಇದು ಯಶ್ ಅವರ ಧ್ವನಿಯಲ್ಲಿ ನಮ್ಮ ಮುಂದೆ ಬರಲಿದೆ. ಸೂಪರ್ ಸ್ಟಾರ್ ಸಿನಿಮಾಕ್ಕೆ ರಾಕಿಂಗ್ ಸ್ಟಾರ್ ಅವರ ಒಂದು ಕಾಣಿಕೆ ಇದೆನ್ನಬಹುದಾಗಿದೆ. ಸೂಪರ್ ಸ್ಟಾರ್ ಸಿನಿಮಾದಲ್ಲಿ ನಿರಂಜನ್ ಒಬ್ಬ ಪ್ರೊಫೆಷನಲ್ ಡಾನ್ಸರ್ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದು ಅದಕ್ಕಾಗಿ ಅವರು ತಮ್ಮ ದೇಹವನ್ನು ಸಾಕಷ್ಟು ಮೆರುಗುಗೊಳಿಸಿ ಪಾತ್ರಕ್ಕೆ ತಕ್ಕಂತೆ ಮಿಂಚಲು ಸಜ್ಜಾಗಿದ್ದು, ಸಿನಿಮಾ ನಾಯಕಿಯ ಸಹಿತ ಇತರೆ ಪಾತ್ರಗಳ ಆಯ್ಕೆ ಇನ್ನೂ ನಡೆದಿದೆ ಎನ್ನಲಾಗಿದೆ‌. ಈ ಸಿನಿಮಾ ಆರ್.ವಿ.ಬಿ. ಸಿನಿಮಾಸ್ ಬ್ಯಾನರ್ ನಲ್ಲಿ ಮೈತ್ರಿ ಪ್ರೊಡಕ್ಷನ್ ಅವರ ಸಹಯೋಗದೊಂದಿಗೆ ನಿರ್ಮಾಣವಾಗಲಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here