ತಮಿಳುನಾಡಿನ ಚಿತ್ರರಂಗದ ಆರಾಧ್ಯ ದೈವ ಎಂದೇ ಕರೆಯಲ್ಪಡುವ ಪ್ರಪಂಚಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಬರಲು ಮುಹೂರ್ತ ಫಿಕ್ಸ್ ಆಗಿದೆ.ತಮಿಳುನಾಡಿನ ಚೆನೈನಲ್ಲಿ ಇಂದಿನಿಂದ ಆರು ದಿನಗಳ ಕಾಲ ನಡೆಯಲಿರುವ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಾಜಕೀಯಕ್ಕೆ ಬರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಜನೀಕಾಂತ್ ನಾನು ಕನ್ನಡ, ತಮಿಳು,ತೆಲುಗು ,ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದೇನೆ ,ರಾಜಕೀಯಕ್ಕೆ ಹೊಸಬನಲ್ಲ , ಕಳೆದ ಮೂವತ್ತು ವರ್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ, ಯುದ್ಧಕ್ಕೆ ಇಳಿದ ಮೇಲೆ ಜಯಿಸಬೇಕು, ಯುಯುದ್ಧ ಮಾಡಲು ತೋಳ್ಬಲ ಇದ್ದರಷ್ಟೇ ಸಾಲದು ಬುದ್ಧಿಬಲವೂ ಹೆಚ್ಚಾಗಿ ಇರಬೇಕು ನಸನು ಡಿಸೆಂಬರ್ 31 ರಂದು ನನ್ನ ರಾಜಕೀಯದ ನಡೆ ತಿಳಿಸುತ್ತೇನೆ ಎಂದು ರಜನಿಕಾಂತ್ ತಿಳಿಸಿದರು.ಚೆನೈನಲ್ಲ ರಾಘವೇಂದ್ರ ಹಾಲ್ ನಲ್ಲಿ ರಜನಿಕಾಂತ್ ಅಭಿಮಾನಿಗಳ ಭೇಟಿ ಕಾರ್ಯಕ್ರಮ ಇಂದಿನಿಂದ ಆರು ದಿನಗಳ ಕಾಲ ನಡೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here