ಕಾಂಗ್ರೆಸ್​ ಹಾಗೂ ಜೆಡಿಎಸ್​ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರವನ್ನು ಸ್ಪೀಕರ್​ ಇಂದೇ ನಿರ್ಧರಿಸ್ಬೇಕು. ಅತೃಪ್ತರು ಇಂದು ಸಂಜೆ 6ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಬೇಕು ಅಂತ ಸುಪ್ರೀಂಕೋರ್ಟ್ ಸೂಚಿಸಿದೆ.
ರಾಜೀನಾಮೆಗಳನ್ನು ಅಂಗೀಕರಿಸದೆ ಸ್ಪೀಕರ್ ಮುಂದೂಡ್ತಿದ್ದಾರೆ ಅಂತ ಆರೋಪಿಸಿ 10 ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಅತೃಪ್ತರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ರು. ವಾದ ಆಲಿಸಿದ ಸುಪ್ರೀಂ, ಸ್ಪೀಕರ್ ಇಂದು ನಿರ್ಧಾರ ತೆಗೆದುಕೊಂಡು ನಾಳೆ ಕೋರ್ಟ್​​​ಗೆ ವಿಷಯ ತಿಳಿಸಬೇಕು. ಅತೃಪ್ತರು ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಬೇಕು ಅಂತ ಆದೇಶಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ರೆಬೆಲ್ ಶಾಸಕರು ಇಂದು ಸಂಜೆ ವೇಳೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.ಮುಖ್ಯಮಂತ್ರಿಗಳು ಕರೆದಿರುವ ಸಚಿವ ಸಂಪುಟ ಸಭೆಯತ್ತ ಎಲ್ಲ ಅತೃಪ್ತರ ಚಿತ್ತ ಹರಿದಿದ್ದು, ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನ ಮೇಲೆ ಎಲ್ಲ ಶಾಸಕರ ಗಮನ ಕೇಂದ್ರಿಕೃತವಾಗಿದೆ.

ಬುಧವಾರ ನಡೆದ ರಾಜಕೀಯ ಹೈಡ್ರಾಮಾ ಹಿನ್ನೆಲೆ ಕಾದು ನೋಡುವ ತಂತ್ರವನ್ನು ಅತೃಪ್ತ ಶಾಸಕರು ಅನುಸರಿಸುತ್ತಿದ್ದಾರೆ.ಬೆಳಗ್ಗೆ ಎಲ್ಲ ಶಾಸಕರು ಒಂದೆ ಕಡೆ ಸೇರಿ ಮುಂದಿನ ನಿರ್ಧಾರ ಬಗ್ಗೆ ಚರ್ಚೆಸಿದ್ದು, ಅತ್ತ ಮಹಾರಾಷ್ಟ್ರ ಬಿಜೆಪಿ ಮುಖಂಡರು ಹೋಟೆಲ್‍ನಲ್ಲಿಯೇ ಇದ್ದಾರೆ. ಹೋಟೆಲ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here