ಟಗರು ಚಿತ್ರದ ಅದ್ದೂರಿ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಸೂರಿ ಟಗರು 2 ಚಿತ್ರಕ್ಕೆ ಸಿದ್ದತೆ ನಡೆಸಿದ್ದಾರೆ.ಟಗರು ನಂತರ ಪಾಪ್ ಕಾರ್ನ್ ಮಂಕಿ ಟೈಗರ್ ಅಂತ ಸದ್ದು ಮಾಡಿರುವ ಸೂರಿ ಅದಾದ ನಂತರ ಟಗರು ೨ ಶುರು ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ. ಆದರೆ ಟಗರು ಎರಡರಲ್ಲಿ ಯಾರೆಲ್ಲ ಇರ್ತಾರೆ ಅನ್ನೋ ಗುಟ್ಟನ್ನು ನಿರ್ದೇಶಕ ಸೂರಿ ಕೊಟ್ಟಿದ್ದಾರೆ. ಹೌದು ಮೊನ್ನೆ ನಡೆದ ಟಗರು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ

ಮಾತನಾಡಿದ ಸೂರಿ ಟಗರು ಎರಡರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹೇಳಿದ್ದು ಅಭಿಮಾನಿಗಳಿಗೆ ಈ ಸುದ್ದಿ ಸಕ್ಕತ್ ಥ್ರಿಲ್ ಕೊಡುತ್ತಿದೆ. ಅಭಿಮಾನಿಗಳು ಆಯೋಜಿಸಿದ್ದ ಟಗರು ಶತದಿನೋತ್ಸವದ ಸಂಭ್ರಮಬದಲ್ಲಿ ಮಾತನಾಡಿರುವ ನಿರ್ದೇಶಕ ಸೂರಿ ಎಲ್ಲವೂ ಅಂದುಕೊಂಡಂತೆ ಆದರೆ ಟಗರು ಎರಡರಲ್ಕಿ ಪುನೀತ್ ರಾಜ್‍ಕುಮಾರ್ ಅವರು ಅಭಿನಯಿಸಲಿದ್ದಾರೆ. ಈಗಾಗಲೇ ಪುನೀತ್ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ.

ಅಪ್ಪು ಕೂಡ ಕಥೆ ಸಿದ್ದಪಡಿಸುವಂತೆ ಹೇಳಿದ್ದಾರೆ. ಟಗರು ಮುಂದುವರಿದ ಭಾಗದಲ್ಲಿ ಎಂದಿನಂತೆ ಶಿವಣ್ಣ ಇದ್ದೇ ಇರುತ್ತಾರೆ. ಎಲ್ಲವೂ ಪಕ್ಕಾ ಆದರೆ ಶಿವಣ್ಣ ಮತ್ತು ಅಪ್ಪು ಒಂದೇ ಚಿತ್ರದಲ್ಲಿ ಅಭಿನಯಿಸುವ ಕಾಲ ಹತ್ತಿರವಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ ಈ ಚಿತ್ರದಲ್ಲಿ ಅಭಿಮಾನಿಗಳ ನಿರೀಕ್ಷೆಯಂತೆ ಅದ್ಬುತ ಸಾಹಸಗಳು ಮತ್ತು ನೃತ್ಯಗಳು ಇರುತ್ತವೆ. ಹೊಸ ತರಹದ ಚಿತ್ರಕಥೆ ಸಿದ್ದಪಡಿಸುತ್ತೇನೆ ಎಂದು ಸೂರಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಗಳ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆಯ ಮೇಲೆ ಶಿವರಾಜಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರನ್ನು ಒಟ್ಟಿಗೆ ನೋಡುವ ಅವಕಾಶ ಸಿಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here