ಸೂರಿ ಅವರ ನಿರ್ದೇಶನ ಎಂದರೆ ಅಲ್ಲಿ ಏನಾದರೊಂದು ಹೊಸತು ಇದ್ದೇ ಇರುತ್ತದೆ. ವಿಶೇಷ ಎಂದರೆ ಅವರ ಸಿನಿಮಾಗಳಲ್ಲಿನ ಮಾಸ್ ಡೈಲಾಗ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುವುದು ಕೂಡಾ ನಿಜ. ಅವರ ಲೇಟೆಸ್ಟ್ ಸಿನಿಮಾ ಅಂದರೆ ಅದು ಟಗರು ಸಿನಿಮಾದ ಯಶಸ್ಸಿನ ನಂತರ ಡಾಲಿ ಧನಂಜಯ್ ಅವರನ್ನು ನಾಯಕನನ್ನಾಗಿ ಮಾಡಿ, ಒಂದು ವಿಭಿನ್ನವಾದ ಹೆಸರಿನೊಂದಿಗೆ ಜನರ ಗಮನವನ್ನು ಸೆಳೆದಿರುವ ಪಾಪ್ ಕಾರ್ನ್ ಮಂಕಿ ಟೈಗಲ್. ಹೆಸರಿನಿಂದಲೇ ಜನರ ಗಮನವನ್ನು ತನ್ನತ್ತ ಸೆಳೆಯುತ್ತಿರುವ ಈ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ ಸೂರಿ ಅವರು.

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ತನ್ನ ಕಥೆ ಹಾಗೂ ಚಿತ್ರದ ಹೊಸ ಹಾಗೂ ವಿಭಿನ್ನ ಲುಕ್ ಗಳು ಸಾಕಷ್ಟು ಕ್ರೇಜನ್ನು ಹುಟ್ಟು ಹಾಕಿರುವುದು ಮಾತ್ರವಲ್ಲದೆ , ಸಿನಿಮಾ ಯಾವಾಗ ತೆರೆಯ ಮೇಲೆ ಬರಲಿದೆ ಎಂದು ಕಾಯುವಂತೆ ಮಾಡಿತ್ತು. ಅದೆಲ್ಲದರ ಜೊತೆಗೆ ತಲೆಯಲ್ಲಿ ರಕ್ತ ಸಿಕ್ತವಾದ ಬರಹಗಳಿದ್ದು, ಅದು ಮಂಕಿ ಎಂದು ಬರೆದಿರುವ ಡಾಲಿ ಅವರ ಹೊಸ ಲುಕ್ ಅಂತೂ ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಡಾಲಿ ಅವರ ಹೊಸ ಲುಕ್ ಒಂದು ಕುತೂಹಲವನ್ನು ಹುಟ್ಟು ಹಾಕಿದೆ.

ಚಿತ್ರ ತಂಡವು ಬೆಂಗಳೂರು, ಮುಂಬೈ, ಮೈಸೂರು ಸೇರಿದಂತೆ ಇತರೆಡೆಗಳಲ್ಲಿ ಚಿತ್ರೀಕರಣವನ್ನು ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ಪೋಷಿಸಿದ್ದಾರೆ. ಚಿತ್ರೀಕರಣವನ್ನು ಮುಗಿಸಿದ ಚಿತ್ರ ತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ ಎನ್ನಲಾಗಿದೆ. ಸೂರಿ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಒಟ್ಟಾರೆ ಸಿನಿಮಾದ ಕ್ರೇಜ್ ಅಂತೂ ಎಲ್ಲೆಡೆ ಈಗಾಗಲೇ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here