ಕರ್ನಾಟಕ ಹಾಗೂ ಕೇರಳದಲ್ಲಿ ಪ್ರವಾಹ ಉಂಟಾಗಿ ಆಗಿರುವ ತೊಂದರೆ ಹಾಗೂ ಅದರಿಂದ ಸಂತ್ರಸ್ತರಾದವರ ನೆರವಿಗಾಗಿ ತಮಿಳು ನಟ ಸೂರ್ಯ ಮತ್ತು ಅವರ ಸಹೋದರ ಕಾರ್ತಿ ಕೇರಳ ಹಾಗೂ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ 10 ಲಕ್ಷ ರೂ. ಗಳನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಈ ಬಾರಿ ಕರ್ನಾಟಕ ಹಾಗೂ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಅದರಲ್ಲಿ ಸಿಲುಕಿದ ಅಸಂಖ್ಯಾತ ಜನರು ನಿರಾಶ್ರಿತರಾಗಿದ್ದು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ನೆರವು ನೀಡಲು ಕರ್ನಾಟಕದಲ್ಲಿ ಈಗಾಗಲೇ ಹಲವು ಸ್ಟಾರ್ ನಟರು ಮುಂದಾಗಿದ್ದು, ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ಅವರು ನೀಡಿದ್ದಾರೆ.

ಈಗ ನಟರಾದ ಸೂರ್ಯ ಹಾಗೂ ಕಾರ್ತಿ ಪ್ರವಾಹ ಸಂತ್ರಸ್ತರಿಗಾಗಿ 10 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಸೂರ್ಯ ಹಾಗೂ ಕಾರ್ತಿ ಅವರು ತಮಿಳುನಾಡಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳ ಮೂಲಕ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ‌. ಕಷ್ಟದಲ್ಲಿ ಇರುವವರಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯಧನ ನೀಡುತ್ತಾರೆ. ಕಳೆದ ವರ್ಷ ಕೇರಳದಲ್ಲಿ ಆದ ಪ್ರವಾಹದ ಸಮಯದಲ್ಲೂ ಕೂಡಾ ಕಾರ್ತಿ ಅವರು ಕೇರಳ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹಣವನ್ನು ಪರಿಹಾರ ನಿಧಿಗೆ ನೀಡಿದ್ದರು‌.

ಕೆಲವು ದಿನಗಳ ಹಿಂದೆಯಷ್ಟೇ ತೆಲುಗಿನ ಹಾಸ್ಯ ನಟ ಸಂಪೂರ್ಣೇಶ್ ಬಾಬು ಅವರು ಕೂಡಾ ಎರಡು ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು. ಇನ್ನು ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಗುರುವಾರ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ 5 ಲಕ್ಷ ರೂ. ಚೆಕ್ ನೀಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here