ತಮಿಳು ಚಿತ್ರರಂಗ ಅಥವಾ ಕಾಲಿವುಡ್ ನ ಸ್ಟಾರ್ ನಟರಲ್ಲಿ ನಟ ಸೂರ್ಯ ಕೂಡಾ ಒಬ್ಬರು. ಅವರದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿರುವ ಈ ‌ನಟ ತಮ್ಮದೇ ಆದ ಸೇವಾ ಸಂಸ್ಥೆ ಮೂಲಕ ಅನೇಕ ಸಾಮಾಜಿಕ ಕಲ್ಯಾಣ ಚಟುವಟಿಕೆಗಳನ್ನು ಕೂಡಾ ನಡೆಸುತ್ತಾರೆ. ನಟ ಸೂರ್ಯ ಅವರ ಮುಂಬರಲಿರುವ ಸಿನಿಮಾ ಸೂರಾರೈ ಪೊಟ್ರು. ಈ ಸಿನಿಮಾ ಕನ್ನಡ ನಾಡಿನ ಸಾಧಕರನೊಬ್ಬರ ಕಥೆಯನ್ನು ಆಧರಿಸಿದೆ. ಆದರೆ ತಮಿಳುನಾಡಿನಲ್ಲಿ ಈ ಸಿನಿಮಾ ಬಿಡುಗಡೆಗೆ ಈಗೊಂದು ಅಪಸ್ವರ ಕೇಳಿ ಬಂದಿದ್ದು, ಚರ್ಚೆಗೆ ಕಾರಣವಾಗಿದೆ.

ಹಾಸನದ ಗೊರೂರಿನವರಾದ ಜಿ.ಆರ್.ಗೋಪಿನಾಥ್ ಅವರು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸಿ ಅನಂತರ ವಿಮಾನ ಯಾನ ಕ್ಷೇತ್ರಕ್ಕೆ ಬಂದ ಅವರು ಡೆಕ್ಕನ್ ಏರ್‌ವೇಸ್ ಆರಂಭಿಸಿ ಜನರಿಗೆ ಕಡಿಮೆ ದರದಲ್ಲಿ ವಿಮಾನ ಯಾನ ಮಾಡಲು ಅನುಕೂಲವಾಗುವಂತಹ ಅವಕಾಶ ಕಲ್ಪಿಸಿದವರು. ಇದೇ ಕಥೆಯನ್ನಾಧರಿಸಿರುವ ಈ ಸಿನಿಮಾದಲ್ಲಿ ಗೋಪಿನಾಥ್ ಅವರ ಪಾತ್ರವನ್ನು ನಟ ಸೂರ್ಯ ನಿರ್ವಹಿಸಿದ್ದು, ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿ ತಯಾರಿ ನಡೆಸಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೆ ಹೋಗಿತ್ತು.‌

ಲಾಕ್ ಡೌನ್ ವೇಳೆಯಲ್ಲಿ ಥಿಯೇಟರ್ ಗಳು ಮುಚ್ಚಿದ ಕಾರಣ ಕೆಲವು ಸಿನಿಮಾಗಳು ಓಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೇ ಹಿನ್ನೆಲೆಯಲ್ಲಿ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ನಟಿಸಿದ್ದ ಪೊನ್ ಮಗಳ್ ವಂದಾಳ್ ಸಿನಿಮಾವನ್ನು ಓಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆ ಮಾಡಲು ತಮಿಳುನಾಡಿನಲ್ಲಿ ಮೊದಲು ಪ್ರಯತ್ನ ಮಾಡಿದ್ದು ಸೂರ್ಯ ಅವರ ಪ್ರೊಡಕ್ಷನ್. ಆಗ ಥಿಯೇಟರ್ ಗಳವರು ಇದನ್ನು ವಿರೋಧಿಸಿ ಹಾಗೆ ಮಾಡದಿರಲು ಮನವಿ ಮಾಡಿದರೂ, ಕೂಡಾ ಪೊನ್ ಮಗಳ್ ವಂದಾಳ್ ಸಿನಿಮಾ ಅಮೆಜಾನ್ ಫ್ರೈಮ್ ನಲ್ಲಿ ಬಿಡುಗಡೆ ಆಗಿತ್ತು.

ಇದರಿಂದ ಸಿಟ್ಟಿಗೆದ್ದ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಪನೀರ್ ಸೆಲ್ವಂ ಅವರು ಸೂರ್ಯ ಅವರ ನಿರ್ಮಾಣದ ಎಲ್ಲಾ ಸಿನಿಮಾಗಳನ್ನು ಥಿಯೇಟರ್ ಗಳಿಂದ ಬ್ಯಾನ್ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಸಿನಿಮಾ ವಿತರಕ ತಿರಪ್ಪೂರು ಸುಬ್ರಮಣಿಯನ್ ಈ ವಿಚಾರವಾಗಿ ಅಸೋಸಿಯೇಷನ್ ಸದಸ್ಯರು ಹಾಗೂ ಸೂರ್ಯ ಅವರ ಕುಟುಂಬದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here