ಸಿನಿಮಾಗಳಲ್ಲಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಸ ಚಿತ್ರದ ನಾಯಕ ಜೀವನದಲ್ಲಿ ಏನೋ ಸಾಧನೆ ಮಾಡಬೇಕು ಎನ್ನುವುದಕ್ಕಾಗಿಯೋ, ಅಥವಾ ಯಾವುದೋ ಚಾಲೆಂಜ್ ಗಾಗಿಯೋ ಅಥವಾ ತನ್ನ ಪ್ರೇಮ ಪಡೆಯುವುದಕ್ಕಾಗಿಯೋ ತಾನು ಶ್ರೀಮಂತ ಅನ್ನೋ ವಿಷಯ ಮುಚ್ಚಿಟ್ಟು ಸಾಮಾನ್ಯನಂತೆ ಕೆಲಸ ಮಾಡೋದನ್ನು ನೋಡಿದ್ದೇವೆ. ಆದರೆ ಇಂತಹ ಒಂದು ಕಥೆ ಸ್ಟಾರ್ ನಟನೊಬ್ಬರ ಜೀವನದಲ್ಲಿ ಕೂಡಾ ನಡೆದಿದೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಈ ಲೇಖನ ಓದಿದರೆ ನಿಮಗೆ ಯಾರು ಆ ಸ್ಟಾರ್ ನಟ ಎನ್ನುವುದು ತಿಳಿಯುತ್ತದೆ. ಬನ್ನಿ ಹಾಗಾದರೆ ಯಾರು ಆ ನಟ ಎನ್ನುವುದನ್ನು ತಿಳಿಯೋಣ.

ಇಂದು ತಮಿಳಿನಲ್ಲಿ ದೊಡ್ಡ ಸ್ಟಾರ್ ನಟನಾಗಿರು ನಟ ಸೂರ್ಯ ಅವರ ಮೂಲ ಹೆಸರು ಸರವಣನ್ ಶಿವಕುಮಾರ್. ಆದರೆ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಈ ನಟ ಹೆಸರಾಗಿದ್ದು, ಸ್ಟಾರ್ ಆಗಿದ್ದು ಸೂರ್ಯ ಎಂದೇ. ಸೂರ್ಯ ಅವರ ತಂದೆ ಶಿವಕುಮಾರ್ ಅವರು ಕೂಡಾ ಒಬ್ಬ ಪ್ರಸಿದ್ಧ ನಟ. ಬಾಲ್ಯದಲ್ಲಿ ಸೂರ್ಯ ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮನೆಯ ಹಿರಿ ಮಗನಾಗಿ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಸೂರ್ಯ ಸಿನಿಮಾ ಇಂಡಸ್ಟ್ರಿ ಗೆ ಬರುವ ಮೊದಲು ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದರೆ ಆಶ್ಚರ್ಯ ಎನಿಸಿದರೂ ಕೂಡಾ ಇದೇ ನಿಜ.

ಆರಂಭದಲ್ಲಿ ಸೂರ್ಯ ಅವರಿಗೆ ಸಿನಿಮಾ ಗಳ ಬಗ್ಗೆ ಆಸಕ್ತಿಯಿರಲಿಲ್ಲ. ಆದ್ದರಿಂದಲೇ ತಾನೇ ದುಡಿದು ಸಂಪಾದನೆ ಮಾಡಬೇಕೆಂಬ ಆಸೆಯಿಂದ ತಾನು ನಟ ಶಿವಕುಮಾರ್ ಅವರ ಮಗ ಎಂಬ ವಿಷಯವನ್ನು ಬಚ್ಚಿಟ್ಟು, ಸೂರ್ಯ ಒಂದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ತನ್ನ ಕೆಲಸವನ್ನು ಆರಂಭಿಸಿದರು. ಆಗ ಸೂರ್ಯ ಪಡೆಯುತ್ತಿದ್ದ ಸಂಬಳ ತಿಂಗಳಿಗೆ 1000 ರೂಪಾಯಿಗಳು. 1995 ರಲ್ಲಿ ನಿರ್ದೇಶಕ ವಸಂತ್ ಸಿನಿಮಾ ಒಂದರಲ್ಲಿ ಲೀಡ್ ರೋಲ್ ನೀಡಿದಾಗಲೂ ಕೂಡಾ ಸೂರ್ಯ ಸಿನಿಮಾ ಮಾಡಲು ಆಸಕ್ತಿಯಿಲ್ಲದೆ ಅದನ್ನು ಆಫರ್ ತಿರಸ್ಕಾರ ಮಾಡಿದ್ದರು.

ಸುಮಾರು ಎಂಟು ತಿಂಗಳ ಕಾಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದ ಅವರಿಗೆ ಅಲ್ಲೂ ತೃಪ್ತಿ ಸಿಗಲಿಲ್ಲ. ಅದಾದ ನಂತರ 1997 ರಲ್ಲಿ ಮಣಿರತ್ನಂ ನಿರ್ಮಾಣದ ವಸಂತ್ ನಿರ್ದೇಶನದ ನೇರುಕ್ಕು ನೇರ್ ಸಿನಿಮಾ ಮೂಲಕ ಸೂರ್ಯ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂದ ಸಿನಿಮಾ ನಂತರ ಅವರಿಗೆ ಸಿನಿ ರಂಗದಲ್ಲಿ ಹೆಸರು ದೊರೆಯಿತು. ದೊಡ್ಡ ಸ್ಟಾರ್ ಮಗನಾದರೂ ಸೂರ್ಯ ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಸುಲಭವಾಗಿ ದೊರೆಯಲಿಲ್ಲ. ಆದರೆ ಎಲ್ಲವನ್ನು ಮೀರಿ ಇಂದು ಅವರು ತಮಿಳಿನ ಒಬ್ಬ ಸೂಪರ್ ಸ್ಟಾರ್ ಆಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here