ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಈಗ ಒಂದು ಇತಿಹಾಸ ಅಥವಾ ಕೇವಲ ಸ್ಮರಣೆ ಮಾತ್ತ. ಜೂನ್ 14 ರಂದು ಅನಿರೀಕ್ಷಿತ ಅವಘಡ ಎಂಬಂತೆ ಸುಶಾಂತ್ ಸಾವಿಗೆ ಶರಣಾದ ಸುದ್ದಿಯು ಸಿಡಿಲಿನಂತೆ ಬಾಲಿವುಡ್ ಅಂಗಳದಲ್ಲಿ ಬಡಿದಿತ್ತು. ಅಭಿಮಾನಿಗಳಂತೂ ಸುಶಾಂತ್ ಸಾವನ್ನು ನಂಬಲು ಕೂಡಾ ಅಸಾಧ್ಯವಾಗಿತ್ತು. ಬಾಲಿವುಡ್ ನ ಸ್ಟಾರ್ ನಟನಾಗಿ ಬೆಳೆಯುತ್ತಿದ್ದ ಪ್ರತಿಭಾವಂತ ನಟ ಇದ್ದಕ್ಕಿದ್ದಂತೆ ಸಾವಿಗೆ ಶರಣಾದ ಎಂಬುದು ಯಾರಿಗೂ ಕೂಡಾ ನಂಬುವುದು ಅಸಾಧ್ಯವಾಗಿತ್ತು. ಸುಶಾಂತ್ ಸಾವಿನ ನಂತರ ಬಾಲಿವುಡ್ ನ ಕರಾಳ ಮುಖವೊಂದು ಅನಾವರಣ ಆಯಿತು. ನೆಪೋಟಿಸಂ ಬಗ್ಗೆ ಅನೇಕ ನಟ ನಟಿಯರು ಬಾಯ್ತೆರೆದರು.

ಸುಶಾಂತ್ ಸಾವು ಸಾಮಾನ್ಯವಲ್ಲ ಅದರ ಹಿಂದೆ ಬೇರೇನೋ ರಹಸ್ಯ ಇದೆ ಎಂಬ ಅನುಮಾನ ದಟ್ಟ ವಾಯಿತು. ಬಿಹಾರ ಮತ್ತು ಮುಂಬೈ ಪೋಲಿಸರು ಸುಶಾಂತ್ ಸಾವಿನ ಕುರಿತಾಗಿ ತನಿಖೆಯನ್ನು ನಡೆಸುತ್ತಿದ್ದು, ತನಿಖೆಯು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಇದರ ನಡುವೆಯೇ ಸುಶಾಂತ್ ಅವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ನ ಫೊರೆನ್ಸಿಕ್ ಪರೀಕ್ಷೆಗಳ ನಂತರ ಬಂದಿರುವ ವರದಿಗಳಲ್ಲಿ ಸುಶಾಂತ್ ಸಾವಿಗೆ ಮುನ್ನ ಗೂಗಲ್ ನಲ್ಲಿ ಏನು ಸರ್ಚ್ ಮಾಡಿದ್ದರು ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ ಪೋಲಿಸರು.‌

ದೇಶದ ಪ್ರತಿಷ್ಠಿತ ಪತ್ರಿಕೆಯೊಂದು ಈ ಕುರಿತಾಗಿ ಬರೆದಿದ್ದು , ಅದರ ಪ್ರಕಾರ ಸುಶಾಂತ್ ಸಾವಿಗೆ ಮುನ್ನ ಗೂಗಲ್ ನಲ್ಲಿ ತನ್ನದೇ ಹೆಸರನ್ನು ಹಾಕಿ ಸರ್ಚ್ ಮಾಡಿದ್ದಾರೆ. ಅನಂತರ ಅವರ ಸಾವಿಗೆ ಕೆಲವೇ ದಿನಗಳ ಹಿಂದೆ ಸಾವಿಗೆ ಶರಣಾಗಿದ್ದ ಸುಶಾಂತ್ ಅವರ ಮಾಜಿ ಸೆಕ್ರೆಟರಿ ದಿಶಾ ಸಾಲಿಯಾನ್ ಸಾವಿನ ಕುರಿತಾದ ಸುದ್ದಿಗಳನ್ನು ಸರ್ಚ್ ಮಾಡಿದ್ದಾರೆ. ಆಕೆಯ ಸಾವಿನೊಂದಿಗೆ ತನ್ನ ಹೆಸರು ಕೂಡಾ ಸೇರಿಸಲಾಗಿದೆಯಾ ಎನ್ನುವ ಶಂಕೆಯಿಂದ ಅವರು ಈ ರೀತಿ ಸರ್ಚ್ ಮಾಡಿರಬಹುದು ಎನ್ನಲಾಗಿದೆ. ಸುಶಾಂತ್ ಅವರಿಗೆ ದಿಶಾ ಸಾವಿನ ಜೊತೆ ತನ್ನ ಹೆಸರು ಸೇರಿಕೊಂಡರೆ ಎನ್ನುವ ಆತಂಕವೂ ಇತ್ತು ಎನ್ನಲಾಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಒಬ್ಬ ದುರಂತ ನಾಯಕನಾಗಿ ಉಳಿದು ಹೋದ ನಟ. ಯಶಸ್ಸಿನ ಹಾದಿಯಲ್ಲಿ ಸಾಗುವಾಗಲೇ ಯಾರೂ ಊಹಿಸದ ಹಾಗೆ ತಮ್ಮ ಕುಟುಂಬ, ಆಪ್ತರು ಹಾಗೂ ಅಭಿಮಾನಿಗಳಿಗೆ ನೋವನ್ನು ಉಳಿಸಿ ಸಾವಿಗೆ ಶರಣಾದರು. ಸುಶಾಂತ್ ಸಾವು ಬಾಲಿವುಡ್ ನಲ್ಲಿ ದೊಡ್ಡ ಸಂಚಲನವನ್ನು ಹುಟ್ಟಿಸಿದೆ.‌ ಬಾಲಿವುಡ್ ನಲ್ಲಿ ನೆಪೋಟಿಸಂ ನಿಂದಾಗಿ ನೊಂದವರಿಗೆ ಸುಶಾಂತ್ ಸಾವು ಧ್ವನಿಯಾಯಿತಾದರೂ, ಸುಶಾಂತ್ ಸಾವಿನ ಸುತ್ತಾ ನೂರಾರು ಅನುಮಾನಗಳು ಹುಟ್ಟಿಕೊಂಡು ಅದೊಂದು ಪೂರ್ವ ನಿಯೋಜಿತ ಕೊಲೆ ಎನ್ನಲಾಗುತ್ತಿರುವಾಗಲೇ ಈ ಕುರಿತಂತೆ ಮುಂಬೈ ಹಾಗೂ ಬಿಹಾರದ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸುಶಾಂತ್ ಸಾವಿಗೆ ಶರಣಾಗುವ ಮುನ್ನ ಗೂಗಲ್ ನಲ್ಲಿ ಅವರು ಏನು ಸರ್ಚ್ ಮಾಡಿದ್ದರು ಎನ್ನುವ ಆಸಕ್ತಿಕರ ಮಾಹಿತಿಗಳು ಹೊರ ಬಂದಿದ್ದು, ಅವೆಲ್ಲವೂ ಕೂಡಾ ಸುಶಾಂತ್ ಅವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ಫೊರೆನ್ಸಿಕ್ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ದೇಶದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಅದರ ಅನ್ವಯ ಸುಶಾಂತ್ ತನ್ನ ಬಗ್ಗೆ ಹಾಗೂ ಕೆಲವೇ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ತಮ್ಮ ಮಾಜಿ ಸೆಕ್ರೆಟರಿ ದಿಶಾ ಸಾಲಿಯಾನ್ ಬಗ್ಗೆ ಕೂಡಾ ಸರ್ಚ್ ಮಾಡಿದ್ದರೆಂಬ ಕುತೂಹಲಕಾರಿ ವಿಷಯವು ಹೊರ ಬಂದಿದೆ.

ಇವು ಮಾತ್ರವಲ್ಲದೇ ಸುಶಾಂತ್ ಗೂಗಲ್ ನಲ್ಲಿ ಬೈ ಪೋಲಾರ್ ಡಿಸಾರ್ಡರ್, ಸಿಜೊಪ್ರೇನಿಯಾ ಎಂಬ ವಿಚಾರಗಳ ಕುರಿತಾಗಿ ಕೂಡಾ ಸರ್ಚ್ ಮಾಡಿದ್ದು, ಬಹಳ ವಿಚಿತ್ರ ಹಾಗೂ ಶಾಕಿಂಗ್ ವಿಷಯ ಏನೆಂದರೆ ಸುಶಾಂತ್ ಪೈನ್ ಲೆಸ್ ಡೆತ್ ಎನ್ನುವ ವಿಷಯವನ್ನು ಕೂಡಾ ಸರ್ಚ್ ಮಾಡಿದ್ದಾರೆ. ಅಂದರೆ ನೋವಿಲ್ಲದ‌ ಸಾವಿನ ವಿಧಾನಗಳ ಕುರಿತು ಕೂಡಾ ಮಾಹಿತಿಯನ್ನು ಹುಡುಕಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here