ಬಾಲಿವುಡ್ ನಲ್ಲಿ ಒಂದು ಸಂಚಲವನ್ನು ಹುಟ್ಟುಹಾಕಿದ್ದ ನೋವಿನ ಸಂಗತಿ ಎಂದರೆ ಬಾಲಿವುಡ್ ನಲ್ಲಿ ಉಜ್ವಲ ತಾರೆಯಾಗಿ ಹೊಳೆಯಬೇಕಿದ್ದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನಿರೀಕ್ಷಿತ ಸಾವು. ಸುಶಾಂತ್ ಸಾವಿನ ಸುತ್ತ ಈಗಾಗಲೇ ನೂರಾರು ಅನುಮಾನಗಳು ಹುಟ್ಟಿಕೊಂಡಿದ್ದು, ಅದರ ವಿಷಯವಾಗಿ ತನಿಖೆ ನಡೆಯಬೇಕೆಂದು ಈಗಾಗಲೇ ಸಾಕಷ್ಟು ಕೂಗುಗಳು ಕೇಳಿ ಬರುತ್ತಿದ್ದು, ಮುಂಬೈ ಪೋಲಿಸರ ತನಿಖೆಯಿಂದ ಬೇಸತ್ತ ಸುಶಾಂತ್ ಅವರ ತಂದೆ ಬಿಹಾರದ ಪಾಟ್ನಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ.

ಇನ್ನು ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ನಿರ್ಭಯಾಗೆ ನ್ಯಾಯ ಒದಗಿಸಿದ ಪ್ರಸಿದ್ಧ ವಕೀಲೆ ಸೀಮಾ ಕುಶ್ವಾಹಾ, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಡೆದಿರುವ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅವರು ಈ ಇಡೀ ವಿಷಯವನ್ನು ವಸ್ತುನಿಷ್ಠವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಈಗಾಗಲೇ ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರೊಂದಿಗೆ ಅವರ ಕುಟುಂಬ್ ಐದು ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಈ ಸಂಬಂಧ ಬಿಹಾರ ಪೊಲೀಸರು ಮುಂಬೈಗೆ ಹೋಗಿದ್ದಾರೆ ಎನ್ನಲಾಗಿದೆ ಎಫ್ಐಆರ್ ನಲ್ಲಿ ಹೆಸರಿಸಲ್ಪಟ್ಟವನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ವಿಚಿತ್ರ ಎಂಬಂತೆ ಸುಶಾಂತ್ ಗೆಳತಿ ರಿಯಾ ಈಗಾಗಲೇ ಬೇಲ್ ಪಡೆಯಲು ಪ್ರಯತ್ನ ಮಾಡಿರುವುದಾಗಿ ತಿಳಿದು ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here