ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಪ್ರಕರಣ ಎಂದು ನಟರಾದ ಕಂಗನಾ ರಣಾವತ್, ಶೇಖರ್ ಸುಮನ್ ವಾದಿಸಿದ್ದರು. ಇದೀಗ ಈ ವಾದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಕೆಲವೊಂದು ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಿದ್ದಾರೆ. ಸುಶಾಂತ್‌ದು ಒಂದು ಕೊಲೆ ಎಂದು ನಾನೇಕೆ ಭಾವಿಸುವೆ ಎಂದು ಅವರು ೨೬ ಕಾರಣಗಳ ಸುದೀರ್ಘ ಪಟ್ಟಿಯನ್ನು ಅವರು ಟ್ವೀಟ್ ಮಾಡಿದ್ದಾರೆ.

ಅದರಲ್ಲಿ ಎರಡು ಕಾರಣಗಳು ಮಾತ್ರ ಆತ್ಮಹತ್ಯೆ ಎನ್ನಲು ಪೂರಕವಾಗಿದೆ. ಉಳಿದೆಲ್ಲ ಅಂಶಗಳೂ ಇದೊಂದು ಕೊಲೆ ಎನ್ನುವುದನ್ನೇ ಬೊಟ್ಟು ಮಾಡಿ ತೋರಿಸುತ್ತವೆ. ಕುತ್ತಿಗೆ ಮೇಲೆ ಕಂಡು ಬಂದಿರುವ ಹಗ್ಗದ ಗುರುತು, ಅದರ ಉದ್ದ, ದೇಹದ ಮೇಲಿರುವ ಬೇರೆ ಗುರುತುಗಳು, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಚಿಕ್ಕ ಟೇಬಲ್ ಆಗಲಿ ಇತರೆ

ಕುರ್ಚಿಯಾಗಲಿ ಇಲ್ಲದಿರುವುದು, ಕೊಠಡಿಯ ಡೂಪ್ಲಿಕೇಟ್ ಕೀ ಮಾಯವಾಗಿರುವುದು, ನೇಣಿಗೆ ಬಳಸಲಾದ ಬಟ್ಟೆ ಮತ್ತು ಕುತ್ತಿಗೆ ಮೇಲಿನ ಗುರುತುಗಳಿಗೆ ತಾಳಮೇಳ ಇಲ್ಲದಿರುವುದು… ಮುಂತಾದವು ಕೊಲೆ ನಡೆದಿರಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here