ಬಿಜೆಪಿಯ ಹಿರಿಯ ನಾಯಕಿಯೂ ಹಾಗೂ ಮಾಜಿ ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ವರಾಜ್ ಅವರು ಆಂಧ್ರಪ್ರದೇಶಕ್ಕೆ ನೂತನ ರಾಜ್ಯಪಾಲರಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಹಾಗೂ ಹಲವರು ಅವರಿಗೆ ಶುಭಾಶಯಗಳನ್ನು ಕೂಡಾ ಅನೇಕರು ಕೋರಿದ್ದರು. ಆದರೆ ಈಗ ಈ ವಿಷಯಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಕಾರಣ ಈ ಬಗ್ಗೆ ಸ್ವತಃ ಸುಷ್ಮಾ ಸ್ವರಾಜ್ ಅವರೇ ಟ್ವೀಟ್ ಮಾಡುವ ಮೂಲಕ ತಾವು ರಾಜ್ಯಪಾಲರಾಗಿಲ್ಲ ಎಂದು ಖಚಿತವಾದ ಮಾಹಿತಿಯನ್ನು ನೀಡಿದ್ದಾರೆ. ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ಆಂಧ್ರಪ್ರದೇಶದ ರಾಜ್ಯಪಾಲೆಯಾಗಿ ನೇಮಕವಾಗಿಲ್ಲ, ಅದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

 

ಆದರೆ ಇದು ಸುಳ್ಳು ಸುದ್ದಿ ಎಂದು ತಿಳಿಯುವ ಮೊದಲೇ ನಿನ್ನೆ ರಾತ್ರಿ ಕೇಂದ್ರ ಸಚಿವ ಹರ್ಷವರ್ಧನ್ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ನಲ್ಲಿ ಶುಭಾಶಯವನ್ನು ಕೋರಿದ್ದರು. ಅವರು ತಮ್ಮ ಟ್ವೀಟ್ ನಲ್ಲಿ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಸುಷ್ಮಾ ದೀದಿಗೆ ಅಭಿನಂದನೆಗಳು ಎಂದು ಹೇಳುತ್ತಾ ನಿಮ್ಮ ಸುದೀರ್ಘ ರಾಜಕೀಯ ಅನುಭವ ಅಲ್ಲಿಯ ಜನರಿಗೆ ಅನುಕೂಲ ಆಗಲಿದೆ ಎಂದು ಹೊಸ ಅಧಿಕಾರ ಹಾಗೂ ಸ್ಥಾನಕ್ಕೆ ಶುಭವನ್ನು ಹಾರೈಸಿದ್ದರು. ಆದರೆ ನಂತರ ಅವರು ಟ್ವೀಟನ್ನು ಡಿಲೀಟ್ ಮಾಡಿದರಾದರೂ, ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 1,000ಕ್ಕೂ ಅಧಿಕ ಲೈಕ್ ಮತ್ತು 200ಕ್ಕೂ ಹೆಚ್ಚು ರೀ-ಟ್ವೀಟ್ ಆಗಿವೆ.

ಹೀಗೆ ಸುದ್ದಿ ಹರಡಿ ಸಾವಿರಾರು ಜನರು ಟ್ವಿಟ್ಟರಿನಲ್ಲಿ ಅಭಿನಂದನೆಗಳನ್ನು ತಿಳಿಸಲು ಆರಂಭಿಸಿದ್ದಾರೆ. ಕೊನೆಗೆ ಈ ವಿಷಯ ಸುಷ್ಮಾ ಸ್ವರಾಜ್ ಅವರ ಅವಗಾಹನೆಗೆ ಬಂದ ಕೂಡಲೇ ಅವರು ತಮ್ಮ ಪ್ರತಿಕ್ರಿಯೆ ನೀಡುತ್ತಾ ಇದೆಲ್ಲಾ ಸುಳ್ಳು ಸುದ್ದಿ ಎಂದು ಎಲ್ಲರಿಗೂ ಸ್ಪಷ್ಟ ಮಾಹಿತಿ ರವಾನಿಸಿದ್ದಾರೆ. ಈ ಬಾರಿ ಆರೋಗ್ಯದ ತೊಂದರೆಯಿಂದಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಕೂಡಾ ಸ್ಪರ್ಧೆ ಮಾಡಿರಲಿಲ್ಲ. ಆದರೆ ನಿನ್ನೆ ಇದ್ದಕ್ಕಿದ್ದಂತೆ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡರೆಂಬ ಸುದ್ದಿ ಹರಡಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here