ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಇನ್ನೇನಿದ್ದರೂ ಕೂಡ ಫಲಿತಾಂಶದ ಯೋಚನೆಯಾಗಿದೆ. ಸದ್ಯ ಚುನಾವಣೆ ಮುಗಿಸಿರುವ ರಾಜಕಾರಣಿಗಳಿಗೆ ನಾಳೆಯ ಫಲಿತಾಂಶದ ಬಗ್ಗೆ ಹೆಚ್ಚು ಆತಂಕ ಎದುರಾಗಿದೆ. ಆದರೆ ಜ್ಯೋತಿಷಿಗಳೋರ್ವರು ಬಿಜೆಪಿಗೆ ಬಹುಮತ ದೊರೆತು ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ಹೇಳಿದ್ದಾರೆ.

ರಾಜ್ಯ ಚುನಾವಣೆ ಬಗ್ಗೆ ಅನೇಕ ಸಮೀಕ್ಷೆಗಳು ನಡೆದಿದ್ದು ಒಂದೊಂದು ಸಮೀಕ್ಷೆಯಲ್ಲಿ ಒಂದೊಂದು ಪಕ್ಷಗಳು ಭರ್ಜರಿ ಜಯಭೇರಿ ಭಾರಿಸುತ್ತವೆ ಎಂದು ಹೇಳಿದೆ. ಕೆಲ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಹೇಳಿದೆ. ಆದರೆ ಬೆಂಗಳೂರಿನ ಸಿದ್ಧಾರ್ಥ ಜ್ಯೋತಿಷ್ಯ ಕೇಂದ್ರದ ಚಂದ್ರಶೇಖರ್ ಸ್ವಾಮೀಜಿ ಎನ್ನುವವರು ಚುನಾವಣೆಯ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ. ಆ  ಭವಿಷ್ಯದ ಪ್ರತಿ ನೋಡಿ.

ಸಿದ್ದರಾಮಯ್ಯ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಜಾತಕವನ್ನು  ಆಧರಿಸಿ ಭವಿಷ್ಯ ನುಡಿಯಲಾಗಿದೆ ಎಂದು ಅವರು ಹೇಳಿದ್ದಾರೆ. ಜ್ಯೋತಿಷಿಗಳ ಪ್ರಕಾರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 78 ರಿಂದ – 81 ಸ್ಥಾನಗಳು ಲಭ್ಯವಾಗಲಿದ್ದು, ಬಿಜೆಪಿ 116 ರಿಂದ 123 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಇನ್ನು ಜೆಡಿಎಸ್ ಗೆ 25 ರಿಂದ 27 ಸ್ಥಾನಗಳು ಲಭ್ಯವಾದರೆ ಪಕ್ಷೇತರರಿಗೆ 4 ಸ್ಥಾನಗಳು ಲಭ್ಯವಾಗಬಹುದು ಎನ್ನಲಾಗಿದೆ. ಆದರೆ ಈ ಎಲ್ಲಾ ಭವಿಷ್ಯ, ಸಮೀಕ್ಷೆಗಳ ಸತ್ಯಾಸತ್ಯತೆಯನ್ನು ಅರಿಯಬೇಕಾದಲ್ಲಿ ನಾಳೆಯ ಫಲಿತಾಂಶದ ವರೆಗೂ ಕೂಡ ಕಾಯುವುದು ಅನಿವಾರ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here