ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾಲುಗಳಂತೆ, ವಿದೇಶದಲ್ಲಿ ನೆಲೆಗೊಂಡಿರುವ ಕನ್ನಡಿಗರು ಕೂಡಾ ನವೆಂಬರ್ ಮಾಸದಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ, ಕನ್ನಡ ದೀಪವನ್ನು ಗಡಿಯಾಚೆ ಕೂಡಾ ಬೆಳಗುತ್ತಿದ್ದಾರೆ. ಅಂತಹುದೇ ಒಂದು ಅರ್ಥಪೂರ್ಣ ಹಾಗೂ ಮನೋಜ್ಞ ಕನ್ನಡ ರಾಜ್ಯೋತ್ಸವ ನಡೆದಿದೆ ಯುನೈಟೆಡ್ ಕಿಂಗ್ ಡಂ ನ ಸ್ವಿಂಡನ್ ನಲ್ಲಿ. ಇಲ್ಲಿನ ಹೆಮ್ಮೆಯ ಕನ್ನಡಿಗರೇ ಆಗಿರುವ  ಕೌನ್ಸಿಲರ್ ರವಿಕುಮಾರ್ ವೆಂಕಟೇಶ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದು, ವಿದೇಶದಲ್ಲಿ ಸಹ ಕನ್ನಡ ಗಂಧ ಗಾಳಿ ಜೋರಾಗಿಯೇ ಬೀಸಿದೆ. ಸ್ವಿಂಡನ್ನಲ್ಲಿ ನಡೆದ ಆ ಕನ್ನಡ ರಾಜ್ಯೋತ್ಸವದ ಬಗ್ಗೆ ತಿಳಿಯೋಣ ಬನ್ನಿ.

ಸ್ವಿಂಡನ್ ನಲ್ಲಿ ನವೆಂಬರ್ ಎಂಟರಂದು ಕನ್ನಡ ರಾಜ್ಯೋತ್ಸವವನ್ನು ಅಲ್ಲಿನ ಕನ್ನಡಿಗರು ಆಚರಿಸಿದ್ದು, ಈ ಸಮಾರಂಭಕ್ಕೆ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ಹುದ್ದೆಯಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಸನ್ಮಾನ್ಯ ಶ್ರೀ ಡಾ.ಮುರಳೀಧರ ಕಡೆಮನೆ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಕಡೆಯ ಬಾರಿ ಕನ್ನಡ ಶಾಲೆಗೆ ಬಂದ ಮಕ್ಕಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ನೀಡಲಾಯಿತು ಹಾಗು ಶಿಕ್ಷಕಿಯರಿಗೆ ಸನ್ಮಾನವನ್ನು ಕೂಡಾ ಮಾಡಲಾಯಿತು.

ಮತ್ತೊಂದು ವಿಶೇಷ ಏನೆಂದರೆ ಇದೇ ಸಮಾರಂಭದಲ್ಲಿ ಸ್ವಿಂಡನ್ ಸೆಂಟ್ರಲ್ ಗ್ರಂಥಾಲಯದೊಂದಿಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿದ್ದು, ಸ್ವಿಂಡನ್ ಗ್ರಂಥಾಲಯ ದವರು ಕನ್ನಡದ 50 ಪುಸ್ತಕಗಳನ್ನು ಅವರ ಗ್ರಂಥಾಲಯದಲ್ಲಿ ಸಂಗ್ರಹಿಸಲು ಒಪ್ಪಿಕೊಂಡಿದ್ದು, ಇನ್ನು ಮುಂದೆ ಕನ್ನಡ ಪುಸ್ತಕ ಓದಲು ಬಯಸುವ ಹಿರಿಯರಿಗೆ ಹಾಗೂ ಕನ್ನಡಿಗರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಒಂದರ್ಥದಲ್ಲಿ ಕನ್ನಡದ ಕಂಪು ಸ್ವಿಂಡನ್ ನಲ್ಲಿ ಹರಡಲಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಕವಿ, ಬರಹಗಾರ, ಗ್ರಂಥಾಲಯ ಪಾಲಕರು,ಮಾನವತಾವಾದಿಯಾದ ಟೋನಿ ಹಿಲ್ಲರ್, ಪ್ರಮುಖ ಬ್ಲಾಗರ್, ಇತಿಹಾಸಕಾರರು ಬರಹಗಾರರು ಆದ ಅಕ್ಟಿನ್ ಸನ್ ಅವರು ಮತ್ತು ಅನೇಕ ಕನ್ನಡಿಗರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here