ಸ್ವಿಟ್ಜರ್ಲೆಂಡ್‌‌ ನಲ್ಲಿ ಕುಟುಂಬವೊಂದರಲ್ಲಿ ಬಹಳ ಹಳೆಯ ಕಾಲದ ಒಂದು ತಾಮ್ರದ ಬಟ್ಟಲು ಇದೆ. ಅವರು ಅದನ್ನು ಈಗಾಗಲೇ ಹಲವು ಮ್ಯೂಸಿಯಂ ಹಾಗೂ ಪುರಾತನ ವಸ್ತು ಹರಾಜು ಹಾಕುವ ಏಜೆನ್ಸಿಗಳನ್ನು ಸಂಪರ್ಕಿಸಿ ಯಾರೂ ಅದನ್ನು ಬೇಡ ಎಂದಾಗ, ಮನೆಯಲ್ಲಿ ಅದನ್ನು ಟೆನಿಸ್ ಬಾಲ್ ಗಳನ್ನು ಇಡಲು ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಅವರ ಅದೃಷ್ಟ ಖುಲಾಯಿಸಿದೆ. ಯಾವ ಬಟ್ಟಲನ್ನು ಮ್ಯೂಸಿಯಂ ಗಳು ಬೇಡ ಎಂದವೋ, ಆ ಬಟ್ಟಲನ್ನು ಈಗ ಒಂದು ಹರಾಜು ಸಂಸ್ಥೆಯು ಹರಾಜು ಹಾಕಿ ಅದರ ನಿಜವಾದ ಮೌಲ್ಯ ಏನು ಎಂಬುದನ್ನು ತೋರಿಸಿದ್ದು, ಬೇಡ ಅಂದವರೆಲ್ಲಾ ಹುಬ್ಬೇರಿಸುವಂತೆ ಮಾಡಿದೆ. ಮಿಸ್ಟರ್ ಗ್ರೀನ್ ಬರ್ಲಿನ್ ನ ಮ್ಯೂಸಿಯಂ ಗೆ ಹೋದಾಗಲೂ ಆ ಬಟ್ಟಲನ್ನು ಮ್ಯೂಸಿಯಂ ನಲ್ಲಿ ಇಡಲು ತಿರಸ್ಕರಿಸಲಾಗಿತ್ತು ಎನ್ನುತ್ತಾರೆ.

ಕೊಲ್ಲೇರ್ ಆಕ್ಷನ್ಸ್ ಎಂಬ ಸಂಸ್ಥೆಯ ಹರಾಜು ಅನುಭವಿಗಳು ಆ ಬಟ್ಟಲನ್ನು ಸರಿಯಾಗಿ ಗಮನಿಸಿ ಅದು ಸಾಮಾನ್ಯವಾದುದಲ್ಲ, ಐತಿಹಾಸಿಕ ಮಹತ್ವವುಳ್ಳದ್ದು ಎಂದು ಗುರುತಿಸಿದೆ. ಅದರಿಂದಾಗಿಯೇ ಅದರ ಬೆಲೆ ಹೆಚ್ಚಿದ್ದು ಆ ಬಟ್ಟಲು 4.9 ಮಿಲಿಯನ್ ಡಾಲರ್ ಗಳಿಗೆ ಮಾರಾಟವಾಗಿದೆ. ಅಂದರೆ ಬರೋಬ್ಬರಿ 32 ಕೋಟಿ ರೂಪಾಯಿಗಳನ್ನು ಗಳಿಸಿದ ಈ ತಾಮ್ರದ ಬಟ್ಟಲು.. ಅಧ್ಯಯನದ ಪ್ರಕಾರ ಈ ಬಟ್ಟಲನ್ನು ತಯಾರಿಸಿರುವುದು ಚೀನಾದ ದೊರೆಗಳ ಕಾಲದಲ್ಲಿ ಎಂದು ತಿಳಿದು ಬಂದಿದೆ. ಇದು 17 ನೆಯ ಶತಮಾನಕ್ಕೆ ಸೇರಿದ್ದೆನ್ನಲಾಗಿದೆ.

ಸ್ವಿಸ್ ಕುಟುಂಬವು ಚೀನಾಕ್ಕೆ ಪ್ರವಾಸ ಹೋದಾಗ ಅಲ್ಲಿ ಅದನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಅದು ಸಾಮಾನ್ಯವಾದುದು ಅಲ್ಲ ಎನಿಸಿ ಮ್ಯೂಸಿಯಂ ಹಾಗೂ ಹರಾಜು ಸಂಸ್ಥೆ ಗಳನ್ನು ಕೇಳಿದ್ದರಾದರೂ ಯಾರಿಂದಲೂ ಸರಿಯಾದ ಪ್ರತಿಕ್ರಿಯೆ ಬಾರದೆ ಮನೆಯಲ್ಲಿ ಬಾಲ್ ಗಳನ್ನು ಇಡಲು ಬಳಸುತ್ತಿದ್ದರು. ಆದರೆ ಕಡೆಗೆ ಕೊಲ್ಲೆರ್ ಆಕ್ಷನ್ ಅವರು ಆ ಬಟ್ಟಲಿನ ನಿಜವಾದ ಮೌಲ್ಯ ಗುರ್ತಿಸಿ ಮಾರಾಟ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here