ಒಂದು ಚಿತ್ರ ಸೂಪರ್ ಹಿಟ್ ಆದರೆ ಆ ಇಡೀ ಚಿತ್ರತಂಡಕ್ಕೆ ಕೈ ತುಂಬಾ ಕೆಲಸ ಸಿಕ್ಕಿಬಿಡುತ್ತವೆ.! ಅದರಲ್ಲೂ ಆ ಸಿನಿಮಾದ ಕಲಾವಿದರು ಬಹಳ‌ ಬ್ಯುಸಿ ಆಗಿಬಿಡುತ್ತಾರೆ.! ನಾವು ಈಗ ಹೇಳೋಕೊರಟಿರೋದು ಕಳೆದ ವಾರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿರುವ ಶಿವರಾಜ್ ಕುಮಾರ್ ಅಭಿನಯದ ಟಗರು ಬಗ್ಗೆ.!
ಟಗರು ಚಿತ್ರ ಸಾಕಷ್ಟು ಸದ್ದು ಮಾಡುತ್ತಿದ್ದು ಆ ಚಿತ್ರದ ಪಾತ್ರಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ ಅದರಲ್ಲೂ ಟಗರು ಶಿವ, ಡಾಲಿ , ಚಿಟ್ಟೆ , ಕಾಕ್ರೋಚ್ , ಕಾನ್ಸ್ ಟೇಬಲ್ ಸರೋಜ ಪಾತ್ರಗಳು ಸೋಶಿಯಲ್ ಮೀಡಿಯಾದ ತುಂಬಾ ಹರಿದಾಡ್ತಿವೆ. ಈಗಿರುವಾಗಲೇ ಅತ್ತ ಫಿಲ್ಮ್ ಚೇಂಬರ್ ನಲ್ಲಿ ಡಾಲಿ, ಚಿಟ್ಟೆ, ಕಾಕ್ರೋಚ್ , ಕಾನ್ಸ್ ಟೇಬಲ್ ಸರೋಜ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಆಗಿವೆ.!
ನಿರ್ದೇಶಕ ಸುಕ್ಕಾ ಸೂರಿ ಸಿನಿಮಾದ ಪಾತ್ರಗಳು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತವೆ ಆದರೆ ಟಗರಿನ ಪೊಗರಿನ ಪಾತ್ರಗಳು ಮಾತ್ರ ಹಿಂದೆಂದೂ ಮಾಡಿರದಂತಹ ಸೌಂಡ್ ಮಾಡುತ್ತಿದ್ದು ಚಿತ್ರದ ಕ್ರೇಜ್ ಉತ್ತುಂಗದಲ್ಲಿರಲು ಪ್ರಮುಖ ಪಾತ್ರ ವಹಿಸಿವೆ ಎಂದೇ ಹೇಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here