ಕನ್ನಡ ಚಿತ್ರರಂಗಕ್ಕೆ ಈ ವರ್ಷದಲ್ಲಿ ಇಲ್ಲಿಯ ವರೆಗೆ ಬಂದ ಏಕೈಕ ಬ್ಲಾಕ್‌ಬಸ್ಟರ್ ಸಿನಿಮಾ ಡಾ.ಶಿವರಾಜಕುಮಾರ್ ಅಭಿನಯದ ಟಗರು. ವರ್ಷದ ಆರಂಭದಿಂದ ಸಾಕಷ್ಟು ಸದ್ದು ಮಾಡಿಕೊಂಡು ಫೆಬ್ರವರಿ 23 ರಂದು ತೆರೆಗೆ ಬಂದಿದ್ದ ಟಗರು ಇಂದಿಗೆ ಮೈಸೂರಿನ ಶಾಂತಲ ಚಿತ್ರಮಂದಿರದಲ್ಲಿ ಭರ್ಜರಿ 25 ವಾರಗಳನ್ನು ಪೂರೈಸಿದೆ.ಟಗರು ತೆರೆಕಂಡ ಸುಮಾರು 16 ಚಿತ್ರಮಂದಿರಗಳಲ್ಲಿ ಶತದಿನೋತ್ಸವದ ಸಂಭ್ರಮ ಆಚರಿಸಿತ್ತು‌. ಈಗ ಮೈಸೂರಿನ ಶಾಂತಲ ಮತ್ತು ಬೆಂಗಳೂರಿನ ಸಪ್ನ ಸೇರಿದಂತೆ ಟಗರು ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೇ ಟಗರು ಸಿಲ್ವರ್ ಜ್ಯುಬಿಲಿ ಸಂಭ್ರಮಕ್ಕೆ ರಾಜ್ಯದ ಸುಮಾರು 25 ಚಿತ್ರಮಂದಿರಗಳಲ್ಲಿ ಟಗರು ಮತ್ತೆ ತೆರೆ ಕಂಡಿದೆ.

ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾವು ಸಹ ತೆರೆಕಂಡ ಒಂದೆ ಚಿತ್ರಮಂದಿರದಲ್ಲಿ 25 ವಾರ ಪೂರೈಸಿದ ಉದಾಹರಣೆ ಇಲ್ಲ.ಆ ಮಟ್ಟಿಗೆ ಟಗರು ನಿಜಕ್ಕೂ ಬಿಗ್ ಬ್ಲಾಕ್‌ಬಸ್ಟರ್ ಎನಸಿಕೊಂಡಿದೆ. ಟಗರು ಗೆಲುವಿನಲ್ಲಿ ಹಲವಾರು ಅಂಶಗಳಿವೆ. ಡಾ.ಶಿವರಾಜಕುಮಾರ್ ಅವರ ಪೋಲೀಸ್ ಅವತಾರ , ಸುಕ್ಕಾ ಸೂರಿಯವರ ವಿಭಿನ್ನ ನಿರೂಪಣೆ , ಖಡಕ್ ವಿಲನ್ ಗಳಾಗಿ ಮಿಂಚಿದ ಧನಂಜಯ್ ,ವಸಿಷ್ಠ ಅವರ ವಿಶಿಷ್ಟ ಅಭಿನಯ , ಬೊಲ್ಡ್ ಆಗಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಾನ್ವಿತಾ ಹರೀಷ್ , ಮುಗ್ದ ಅಭಿನಯದ ಭಾವನ, ಕಾನ್ಸಟೇಬಲ್ ಸರೋಜ ಅವರ ಚಿಕ್ಕ ಪಾತ್ರ ಕೂಡ ನೋಡುಗರ ಮನದಲ್ಲಿ ಉಳಿದರು.

ಇನ್ನು ತೆರೆ ಹಿಂದೆ ಟಗರು ಚಿತ್ರಕ್ಕಾಗಿ ದುಡಿದವರ ಶ್ರಮ ನಿಜಕ್ಕೂ ಅದ್ಬುತ. ಟಗರು ಸಾಕಷ್ಟು ಸೌಂಡ್ ಮಾಡಲು ಪ್ರಮುಖ ಪಾತ್ರ ವಹಿಸಿದ್ದು ಚರಣ್ ರಾಜ್ ಅವರ ಅದ್ಬುತವಾದ ಮ್ಯೂಸಿಕ್ ಎಂದು ಹೇಳಬೇಕು. ಇಂದಿಗೂ ಟಗರು ಚಿತ್ರದ ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕುವವರ ಸಂಖ್ಯೆ ಕಡಿಮೆಯಾಗಿಲ್ಲ. ಇವರೆಲ್ಲರಿಗೂ ಬೆನ್ನೆಲುಬಾಗಿ ನಿಂತು ಟಗರು ಭರ್ಜರಿ ಗೆಲುವಿಗೆ ಕಾರಣರಾದ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಅವರ ಶ್ರಮ ಟಗರು ಗೆಲುವಿನ ಪ್ರಮುಖ ಅಂಶ.

ಇನ್ನು ಟಗರು ಚಿತ್ರವನ್ನು ಅದ್ಬುತವಾಗಿ ಸೆರೆ ಹಿಡಿದ ಛಾಯಾಗ್ರಾಹಕ ಮಹೇಮ್ ಸಿಂಹ ಅವರ ಕ್ಯಾಮರ ವರ್ಕ್ ಕೂಡ ನೋಡುಗರಿಗೆ ಇಷ್ಟವಾಗಿತ್ತು. ಇನ್ನು ಟಗರು ತೆರೆಕಂಡಾಗ ಸಾಕಷ್ಟು ಸೌಂಡ್ ಮಾಡಿದ್ದು ಚಿತ್ರದ ಸಂಭಾಷಣೆ ವಿಷಯದಲ್ಲಿ. ಟಗರು ಚಿತ್ರದ ಸಂಭಾಷಣೆ ಆರಂಭದಿಂದ ಇಂದಿನ ವರೆಗೂ ಟಾಕ್ ಆಫ್ ದಿ ಟೌನ್ ಆಗಿತ್ತು ಮಾಸ್ತಿ ಅವರು ಬರೆದ ಸಂಭಾಷಣೆ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇವೆ.ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದ್ದ ಟಗರು ಸಿನಿಮಾ ಬರಿ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಚಿತ್ರಮಂದಿರಗಳು ಮಸೇರಿದಂತೆ‌ ಮೊದಲ ಬಾರಿಗೆ ಅತಿ ಹೆಚ್ವು ಷೋ

ಗಳನ್ನು ವಿದೇಶಗಳಲ್ಲಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು.ಖ್ಯಾತ ಸೆಲೆಬ್ರಿಟಿಗಳಾದ ರಾಮ್ ಗೋಪಾಲ್ ವರ್ಮ , ಸುದೀಪ್ , ಯಶ್ , ಇಂಗ್ಲಂಡ್ ಕ್ರಿಕೆಟರ್ ಓವೈನ್ ಷಾ ಸೇರಿದಂತೆ ಹಲವು ಗಣ್ಯರು ಟಗರು ನೋಡಿ ಫಿದಾ ಆಗಿದ್ದರು. ಇನ್ನು ಟಗರು ಸಿನಿಮಾದ ಹಾಡಿಗೆ ಶಿವಣ್ಣ ಅದೆಷ್ಟು ಬಾರಿ ಕುಣಿದರೋ ಅದು ಲೆಕ್ಕವೇ ಇಲ್ಲ ಎನ್ನಬಹುದು. ಕಾಲೇಜು ಹಾಗು ಇನ್ನಿತರ ಸಮಾರಂಭಗಳಲ್ಲಿ ಶಿವಣ್ಣನವರ ಬಳಿ ಟಗರು ಚಿತ್ರದ ಸಿಗ್ನೇಚರ್ ಸ್ಟೆಪ್ ಹಾಕದೇ ಹೊರ ಬರುವಂತಿರಲಿಲ್ಲ. ಅಷ್ಟೇ ಅಲ್ಲದೇ

ಅತಿ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ಟಗರು ಚಿತ್ರದ ಕವರ್ ಸಾಂಗ್ ರೆಡಿ ಮಾಡಿದ ದಾಖಲೆ ಸಹ ಟಗರು ಚಿತ್ರದ ಪಾಲಾಗಿದೆ.ಇನ್ನೂ ಹಲವು ದಾಖಲೆಗಳೊಂದಿಗೆ ಟಗರು 25 ವಾರಗಳ ಸಂಭ್ರಮ ಆಚರಿಸಿದೆ. ಈ ಸಂಭ್ರಮಾಚರಣೆಯನ್ನು ಈ ಬಾರಿ ಡಾ.ಶಿವರಾಜಕುಮಾರ್ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ಟಗರು ಸಂಭ್ರಮ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು.

ಮೈಸೂರಿನ ಪಾರ್ವತಮ್ಮ ರಾಜ್‍ಕುಮಾರ್ ಅವರ ಶಕ್ತಿಧಾಮ ಆಶ್ರಮದಲ್ಲಿ ಅಲ್ಲಿನ ಮಕ್ಕಳು ಮತ್ತು ವೃದ್ದರಿಗೆ ಹಲವು ಸಹಾಯದ ಕಾರ್ಯಕ್ರಮ ಮಾಡುವ ಮೂಲಕ ಡಾ.ಶಿವರಾಜಕುಮಾರ್ ಅಭಿಮಾನಿ ಸಂಘವಾದ ಶಿವಸೈನ್ಯ ಟೀಂ ನಿರ್ಧರಿಸಿದೆ. ಇವುಗಳೆಲ್ಲದರ ನಡುವೆ ಟಗರು ಇಪ್ಪತೈದು ವಾರಗಳನ್ನು ಪೂರೈಸಿದ ಸಂದರ್ಭದಲ್ಲಿ ಇಂದು  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಡಾ.ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರೀಕರಣದ ಸ್ಥಳಕ್ಕೆ ಆಗಮಿಸಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿಕೊಂಡಿದ್ದಾರೆ. ಹೀಗೆ ಟಗರು ಸಿನಿಮಾ ಕನ್ನಡ ಚಿತ್ರರಂಗದ ಎಲ್ಲಾ ಅಭಿಮಾನಿಗಳಿಗೂ ಇಷ್ಟವಾದ ಸಿನಿಮಾ ಎಂಬುದು ಇದರಿಂದ ಗೊತ್ತಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here