ಕನ್ನಡ ಚಿತ್ರರಂಗಕ್ಕೆ ಅವಾಗವಾಗ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಚಿತ್ರಗಳು ಬರುತ್ತವೆ. ಅದರಲ್ಲೂ ಈ ಶಿವರಾಜ್ ಕುಮಾರ್ ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಲು ಶುರುವಾದರೆ ಆ ಚಿತ್ರದ ಗಳಿಕೆ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವೇ ಇಲ್ಲ.ಈಗ ಟಗರು ಚಿತ್ರದ್ದೂ ಅದೇ ಕಥೆ.ಟಗರು ಸೌಂಡ್ ಹೇಗಿದೆ ಅಂದರೆ ಚಿತ್ರದಲ್ಲಿ ಪಾತ್ರ ಮಾಡಿರುವ ಕಲಾವಿದರ ಒರಿಜಿನಲ್ ಹೆಸರನ್ನು ಜನ ಮರೆತಿದ್ದಾರೆ.ಟಗರು ಚಿತ್ರದಲ್ಲಿ ಶಿವಣ್ಣನವರ ಎದುರಿಗೆ ಖಡಕ್ ವಿಲನ್ ಆಗಿ ಅಬ್ಬರಿಸಿರುವ ಧನಂಜಯ್ ಅವರ ಡಾಲಿ ಪಾತ್ರ ಈಗ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.ಸಾಕಷ್ಟು ಸಿನಿಮಾಗಳಲ್ಲಿ ಧನಂಜಯ ಅವರು ನಾಯಕನಾಗಿ ನಟಿಸಿದ್ದರು ಆದರೆ ಟಗರು ಚಿತ್ರದಲ್ಲಿ ಧನಂಜಯ ಅವರಿಗೆ ಸಿಕ್ಕ ಪ್ರಶಂಸೆ ಇನ್ಯಾವ ಸಿನಿಮಾದಲ್ಲಿ ಸಿಕ್ಕಿರಲಿಲ್ಲ.

ಡಾಲಿ ಎಂಬ ಪಾತ್ರಕ್ಕೆ ಪ್ರೇಕ್ಷಕರು ಅಕ್ಷರಶಃ ಮಾರು ಹೋಗಿದ್ದಾರೆ.ಟಗರು ಚಿತ್ರದಲ್ಲಿ ಡಾಲಿಯ ಸ್ಟೈಲ್ ಗೆಟಪ್ ಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.ಶಿವಣ್ಣನಂತಹ ಮಹಾನ್ ಕಲಾವಿದರ ಮುಂದೆ ಮಂಕಾಗದಂತೆ ಡಾಲಿ ಧನಂಜಯ ಅವರ ಅಭಿನಯದ ಅಬ್ಬರವಿದೆ.ಟಗರು ಚಿತ್ರದಲ್ಲಿ ಶಿವಣ್ಣನವರಿಗೆ ಬೀಳುವ ಚಪ್ಪಾಳೆ ಡಾಲಿ ಹೊಡೆಯುವ ಡೈಲಾಗ್ ಗಳಿಗೂ ಬೀಳುತ್ತವೆ.ಅಷ್ಟರ ಮಟ್ಟಿಗೆ ಸೂರಿ ಡಾಲಿ ಪಾತ್ರದ ಪೋಷಣೆ ಮಾಡಿದ್ದಾರೆ.ಟಗರು ಚಿತ್ರ ನೋಡಿದ ಪ್ರತಿಯೊಬ್ಬರೂ ಡಾಲಿ ಧನಂಜಯ ಬಗ್ಗೆ ಮಾತಾಡಿ ಅಪ್ರಿಷಿಯೇಟ್ ಮಾಡುತ್ತಿದ್ದಾರೆ.ಒಂದು ಚಿತ್ರದ ಯಶಸ್ಸು ಆ ಚಿತ್ರದ ಕಲಾವಿದರ ಗೌರವವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಟಗರು ಮತ್ತು ಟಗರು ಚಿತ್ರದ ಟಗರು ಶಿವ ಡಾಲಿ , ಚಿಟ್ಟೆ , ಕಾಕ್ರೋಜ್ ಪಾತ್ರಗಳಿಗೆ ಜನರಿಂದ ಸಿಗುತ್ತಿರುವ ಪ್ರಶಂಸೆಗಳೇ ಸಾಕ್ಷಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here