ಬಹುನಿರೀಕ್ಷೆಯ ಟಗರು ಚಿತ್ರ ಇದೇ ತಿಂಗಳ 23 ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗುತ್ತಿದೆ.ಚಿತ್ರದ ಬಿಡುಗಡೆಗೂ ಮೊದಲೇ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿರುವ ಡಾ.ಶಿವರಾಜ್‍ಕುಮಾರ್ ನಟನೆಯ ಟಗರು ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಮಾಸ್ ಡೈರೆಕ್ಟರ್ ಸೂರಿ ಅವರ ನಿರ್ದೇಶನ ಇದೆ.ತಮ್ಮ ವಿಭಿನ್ನ ನಿರೂಪಣೆ ಮೂಲಕವೇ ಹೆಸರುವಾಸಿಯಾಗಿರುವ ಸೂರಿ ಅವರಿಗೆ ಫೆಬ್ರವರಿ 23 ತುಂಬಾ ವಿಶೇಷವಾದ ದಿನ.ತಮ್ಮ‌ ನಿರ್ದೇಶನದ ಮೊದಲ ಚಿತ್ರ ದುನಿಯಾ ತೆರೆ ಕಂಡಿದ್ದು ಕೂಡ ಫೆಬ್ರವರಿ 23 ರಂದೆ ಎನ್ನುವುದು ಗಮನಿಸಬೇಕಾದ ಅಂಶ.2007 ರ ಫೆಬ್ರವರಿ 23 ರಂದು ತೆರೆಗೆ ಬಂದಿದ್ದ ದುನಿಯಾ ಅಂದು ಹೊಸ ಅಲೆಯನ್ನು ಸೃಷ್ಟಿಸಿದ ಸಿನಿಮಾ.

ಇದೇ ಫೆಬ್ರವರಿ 23 ಕ್ಕೆ ದುನಿಯಾ ತೆರೆ ಕಂಡು 11 ವರ್ಷಗಳು ತುಂಬಲಿದೆ.ಈಗ ಅದೇ ದಿನ ತಮ್ಮ ಮಹತ್ವಾಕಾಂಕ್ಷೆಯ ಟಗರು ಚಿತ್ರ ತೆರೆಗೆ ಬರುತ್ತಿರುವುದು ಸೂರಿ ಅವರಿಗೆ ಸಖತ್ ಥ್ರಿಲ್ ನೀಡುವ ವಿಚಾರವಾಗಿದೆ. ಟಗರು ಚಿತ್ರವನ್ನು ಫೆಬ್ರವರಿ 23 ರಂದೇ ಬಿಡುಗಡೆ ಮಾಡಲು ಶ್ರೀಕಾಂತ್ ಅವರು ನಿರ್ಧರಿಸಿದ್ದಾರೆ.ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟಗರು ಕ್ರೇಜ್ ಗೆ ಟಗರು 23 ಕ್ಕೆ ತೆರೆಗೆ ಬರಲಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದೆ.ಇನ್ನು ಟಗರು ಬಿಡುಗಡೆಗೆ ಉಳಿದಿರುವುದು ಕೆಲವೇ ದಿನಗಳು ಮಾತ್ರ.ಹೀಗಾಗಿ ಎಲ್ಲೆಲ್ಲೂ ಟಗರು ಚಿತ್ರದ ಸದ್ದು ಜೋರಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here