ಮಾನ್ಯ ಗೃಹ ಸಚಿವ ಶ್ರೀ ರಾಮಲಿಂಗಾರೆಡ್ಡಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಶಿವರಾಜ್ ಕುಮಾರ್ ಅವರು ಬೆಂಗಳೂರು ನಗರ ಕೆಪಿವೈಸಿಸಿ ಉಪಾಧ್ಯಕ್ಷೆ ಶ್ರೀಮತಿ ಸೌಮ್ಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಯುವ ಉದ್ಯೋಗಕಾಂಕ್ಷಿಗಳಿಗೆ ಕೆಲಸ ದೊರಕಿಸಿಕೊಡುವ ನಿಟ್ಟಿನಲ್ಲಿ ಆರಂಭಿಸಿರುವ ‘ಎಲಿವೇಟ್ ಲೈಫ್’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ‘ಟಗರು’ ಚಲಚಿತ್ರವನ್ನು ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮತ್ತು ಚಿತ್ರತಂಡದ ಜೊತೆ ವೀಕ್ಷಿಸಿದರು.


ಈ ಸಂದರ್ಭದಲ್ಲಿ ಕು. ಮಾನ್ವಿತ ಹರೀಶ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಕಳೆದ ಶುಕ್ರವಾರ ತೆರೆಕಂಡು ರಾಜ್ಯಾದ್ಯಂತ ಎಲ್ಲರ ಮೆಚ್ಚುಗೆ ಪಡೆದು ಅಬ್ಬರಿಸುತ್ತಿರುವ ಡಾ.ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರವನ್ನು ಕರ್ನಾಟಕ ರಾಜ್ಯದ ಗೃಹಸಚಿವರರಾದ ರಾಮಲಿಂಗಾರೆಡ್ಡಿಯವರು ನೆನ್ನೆ ಸಂಜೆ ನಗರದ ಜೆಪಿನಗರದಲ್ಲಿರುವ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆನ್ನೆ ಸಂಜೆ ಡಾ.ಶಿವರಾಜ್ ಕುಮಾರ್ ,ಟಗರು ಚಿತ್ರದ ನಾಯಕಿ ಮಾನ್ವಿತಾ ಹರೀಶ್ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್ ಮತ್ತು ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿಯವರು ಜೊತೆಯಾಗಿ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಣೆ ಮಾಡಿದರು.ಸಿನಿಮಾ ನೋಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗೃಹಸಚಿವರು ಸಿನಿಮಾದಲ್ಲಿ ನೈಜ ಘಟನೆಗಳನ್ನು ತೋರಿಸಲಾಗಿದೆ ಒಬ್ಬ ಪೋಲಿಸ್ ಅಧಿಕಾರಿಯ ಕರ್ತವ್ಯ ನಿಷ್ಠೆ ಮತ್ತು ಸಮಾಜದ ಪುಂಡರನ್ನು ಮಟ್ಟಹಾಕುವ ಅಂಶಗಳು ಚೆನ್ನಾಗಿ ಮೂಡಿಬಂದಿದೆ ಎಂದರು.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here