ಟಗರು ಸಿನಿಮಾ ಬಂದಮೇಲೆ ಬೇಜಾನ್ ಸುದ್ದಿ ಮಾಡ್ತಾನೆ ಇದೆ.ಟಗರು ಚಿತ್ರದ ಕ್ಯಾರೆಕ್ಟರ್ ಗಳೇ ಹಾಗಿವೆ. ಟಗರು ಶಿವ ,ಡಾಲಿ ,ಚಿಟ್ಟೆ, ಕಾಕ್ರೋಜ್ ,ಬೇಬಿ ಕೃಷ್ಣ , ಹೀಗೆ ಪಟ್ಟಿ ದೊಡ್ಡದಿದೆ. ಟಗರು ಚಿತ್ರದ ಎಲ್ಲಾ ಪಾತ್ರಗಳು ಈಗ ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ.ಅಷ್ಟರ ಮಟ್ಟಿಗೆ ಟಗರು ಚಿತ್ರ ಕರ್ನಾಟಕದ ಜನರ ಮನಮುಟ್ಟಿದೆ.ಈಗ ಟಗರು ಚಿತ್ರದ ಹೊಸ ಕ್ಯಾರೆಕ್ಟರ್ ಕರ್ನಾಟಕದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಈ ಚಿತ್ರದಲ್ಲಿ ಭಾವನ ಮತ್ತು ಮಾನ್ವಿತಾ ಹರೀಶ್ ಅಂತ ದಂತದ ಗೊಂಬೆಗಳಿದ್ದರೂ ಸಹ ಯಾಕೋ ನಮ್ಮ ಪಡ್ಡೆಹುಡುಗರು ಮಾತ್ರ ಟಗರು ಚಿತ್ರದ ಲೇಡೀಸ್ ಕಾನ್ಸ್ ಟೇಬಲ್ ಪಾತ್ರ ಮಾಡಿರುವ ತ್ರಿವೇಣಿ ಆಲಿಯಾಸ್ ಸರೋಜ ಪಾತ್ರ ಹುಡುಗರ ಹಾಟ್ ಫೇವರೇಟ್ ಆಗಿಹೋಗಿದೆ.ಈಗ ಸರೋಜ ಬಗ್ಗೆಯೇ ಎಲ್ಲೆಲ್ಲೂ ಟ್ರೋಲ್ ಗಳು ಶುರುವಾಗಿದೆ.ಕೆಲ ಹುಡುಗರಂತೂ ಸರೋಜಳ ಜಪ ಮಾಡುತ್ತಿದ್ದಾರೆ.ಸರೋಜ ಪಾತ್ರ ಮಾಡಿರುವ ತ್ರಿವೇಣಿ ರಾವ್ ಹವಾ ಸದ್ಯ ಜೋರಾಗಿದೆ.ಒಂದು ಚಿತ್ರ ಗೆದ್ದರೆ ಅದರ ಪಾತ್ರಗಳೂ ಮನೆಮಾರಾಗುತ್ತವೆ ಎಂಬುದಕ್ಕೆ ಟಗರು ಸಿನಿಮಾ ಸಾಕ್ಷಿ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here