ಕನ್ನಡದ ಕೆಂಡಸಂಪಿಗೆ ಬಾಲಿವುಡ್ ಗೆ ಹಾರಲಿದ್ದಾರ..? ಹೌದು ಹೀಗೊಂದು ಪ್ರಶ್ನೆ ಈಗ ಕನ್ನಡ ಸಿನಿರಸಿಕರಿಗೆ ಕಾಡತೊಡಗಿದೆ.ಅದಕ್ಕೆ ಕಾರಣವೂ ಇದೆ.ಟಗರು ಸಿನಿಮಾ ನೋಡಿ ಮಾನ್ವಿತಾ ಹರೀಶ್ ಅಭಿನಯಕ್ಕೆ ಫಿದಾ ಆಗಿರುವ RGV ತನ್ನ ಮುಂದಿನ ಚಿತ್ರಕ್ಕಾಗಿ ಮಾನ್ವಿತಾ ಹರೀಶ್ ಅವರಿಗೆ ಎಷ್ಟು ಸಂಭಾವನೆ ನೀಡಲೂ ಸಿದ್ಧ ಎಂದಿದ್ದಾರೆ.

ಭಾರತ ಚಿತ್ರರಂಗದ ಹೆಸರಾಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರಿಗಾಗಿ ನಿನ್ನೆ ‘ಟಗರು’ ಸಿನಿಮಾದ ವಿಶೇಷ ಪ್ರದರ್ಶನವನ್ನು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಏರ್ಪಡಿಸಲಾಗಿತ್ತು.

ಸಿನಿಮಾ ನೋಡಿ ಬಂದ ರಾಮ್ ಗೋಪಾಲ್ ವರ್ಮ ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.ಟಗರು ನಾನು ನೋಡಿದ ಔಟ್ ಸ್ಟ್ಯಾಂಡಿಂಗ್ ಮೂವಿ ಎಂದು ಹೇಳಿದರು. ಮೇಕಿಂಗ್ ಕಿಂಗ್ ಎಂದು ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮ ನಿರ್ದೇಶಕ ಸೂರಿ ಮಾಡಿರುವ ಸ್ಕ್ರೀನ್ ಪ್ಲೇಯನ್ನು ಸಿಕ್ಕಾಪಟ್ಟೆ ಹೋಗಳಿದ್ದಾರೆ. ನಟಿ ಮಾನ್ವಿತಾ ಹಾಗೂ ಧನಂಜಯ್ ಪಾತ್ರ ನೋಡಿ ವರ್ಮ ಕ್ವೀನ್ ಬೋಲ್ಡ್ ಆಗಿದ್ದಾರೆ.

ಸಿನಿಮಾ ವೀಕ್ಷಿಸಿದ ನಂತರ ಮಾತನಾಡಿದ ವರ್ಮಾ ಈಗ ತಾನೇ ನಿರ್ದೇಶಕ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಟಗರು ಸಿನಿಮಾವನ್ನು ವೀಕ್ಷಿಸಿದೆ. ಮಾನ್ವಿತಾ ಹರೀಶ್ ಒಬ್ಬ ನಟಿಯಲ್ಲ. ಆಕೆ ಎಲೆಕ್ಟ್ರಿಸಿಟಿ ಇದ್ದಂತೆ. ತನ್ನ ಸಾಮಥ್ರ್ಯದಿಂದಲೇ ಎಲ್ಲರಿಗೂ ಶಾಕ್ ನೀಡುತ್ತಾರೆ.

ಇನ್ನೂ ಧನಂನಜಯ್ ನಟನೆ ಎಲ್ಲರನ್ನೂ ಬೆದರಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ.ಟಗರು ಸಿನಿಮಾ ವೀಕ್ಷಿಸಿದ ನಂತರ ನಾನು ಮಾನ್ವಿತಾ ಹರೀಶ್ ಅವರಿಗೆ ಮೊದಲೇ ಟೋಕನ್ ಅಡ್ವಾನ್ಸ್ ನೀಡಿ ಸಿನಿಮಾಗೆ ಸೈನ್ ಮಾಡಿಸಿಕೊಂಡಿದ್ದೇನೆ. ”ವಿಶೇಷವಾಗಿ ನಟಿ ಮಾನ್ವಿತಾ ತುಂಬ ಚೆನ್ನಾಗಿ ನಟಿಸಿದ್ದಾರೆ.

ಮಾನ್ವಿತಾ ಕೇವಲ ಸಿನಿಮಾದಲ್ಲಿ ನಾಯಕಿ ಆಗಿಲ್ಲ. ತನ್ನ ನಟನ ಸಾಮರ್ಥ್ಯದಿಂದ ಆಕೆ ಶಾಕ್ ಕೊಟ್ಟಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ನನ್ನ ಚಿತ್ರಕ್ಕೆ ಆಕೆಗೆ ಅಡ್ವಾನ್ಸ್ ನೀಡುತ್ತೇನೆ. ಆಕೆ ಕೇಳುವ ಸಂಭಾವನೆಗಿಂತ ಹತ್ತು ಲಕ್ಷ ಹೆಚ್ಚು ಹಣ ಕೊಡುತ್ತೇನೆ.” ಇಲ್ಲವೆಂದರೆ ಅವರು ಕೇಳಿದಷ್ಟು ಕೊಡುತ್ತೇನೆ.

ಅಷ್ಟೇ ಅಲ್ಲದೇ ನಿರ್ದೇಶಕ ಸೂರಿ ಅವರನ್ನು ನಾನು ನಿರ್ಮಿಸುವ ಚಿತ್ರವನ್ನು ನಿರ್ದೇಶನ ಮಾಡಬೇಕಾಗಿ ಕೇಳಿಕೊಂಡಿದ್ದೇನೆ ಎಂದು ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ನಟಿಸಿದ್ದ ಧನಂಜಯ್ ರೋಲ್ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಇಷ್ಟ ಆಗಿತ್ತು. ಈಗ ವರ್ಮ ಸಹ ಆ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ” ಧನಂಜಯ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅವರ ನಟನೆ ಕೂಡ ಟೆರಿಫಿಕ್ ಆಗಿದೆ. ಅವರ ತನ್ನ ಕಣ್ಣುಗಳ ಮೂಲಕ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ.’

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here