ಟಗರು ಚಿತ್ರದ ಹವಾ ಬಿಡುಗಡೆ ನಂತರ ಇನ್ನೂ ಜೋರಾಗಿದೆ.ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಟಗರು ಭರ್ಜರಿ ಏಳನೇ ವಾರಕ್ಕೆ ಕಾಲಿಟ್ಟಿದೆ.ಅಷ್ಟೆ ಅಲ್ಲದೇ ಈ ವಾರದ ಅಂತ್ಯದಲ್ಲಿ ಟಗರು ಜಪಾನ್  ಮತ್ತು ಕೆನ್ಯಾ ದೇಶಗಳಲ್ಲಿ ಬಿಡುಗಡೆ

ಆಗುವ ಮೂಲಕ ಇಡೀ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಜಪಾನ್ ಮತ್ತು ಕೆನ್ಯಾ ದೇಶಗಳಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ದಾಖಲೆ ಟಗರು ಪಾಲಾಗಿದೆ.ಈಗಾಗಲೇ ಆಸ್ಟ್ರೇಲಿಯಾ, ಯು ಎಸ್ , ಇಟಲಿ ,ಮಸ್ಕತ್ , ಯು ಎ ಇ  ಸೇರಿದಂತೆ ಹಲವು ದೇಶಗಳಲ್ಲಿ ಟಗರು ಪ್ರದರ್ಶನ ಕಾಣುತ್ತಿದೆ.

ಜೊತೆಗೆ ಟಗರು ಸಿನಿಮಾ ಬಿಡುಗಡೆಯನ್ನು ಹೊರದೇಶಗಳಲ್ಲಿ ಕರ್ನಾಟಕದ ಅಭಿಮಾನಿಗಳ ರೀತಿಯಲ್ಲಿ ಇಟಲಿ ಯುಎಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.ಟಗರು ಶಿವಣ್ಣ ಅವರ ಪೋಸ್ಟರ್ ಗೆ ಹಾರ ಹಾಕಿ ಸೆಲೆಬ್ರೇಷನ್ ಮಾಡುತ್ತಿರುವುದು ಕನ್ನಡ ಚಿತ್ರಗಳಿಗೆ ವಿದೇಶದಲ್ಲಿ ಇದೇ ಮೊದಲು.

ಇನ್ನು ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಟಗರು 50 ದಿನಗಳನ್ನು ಪೂರೈಸಲಿದೆ.50 ದಿನ ಆದರೂ  ಕೂಡ ತುಂಬಿದ ಪ್ರದರ್ಶನ ಕಾಣುತ್ತಿರುವುದು ಟಗರು ಚಿತ್ರತಂಡಕ್ಕೆ ಸಂತಸ ಉಂಟುಮಾಡಿದೆ. ಟಗರು ಚಿತ್ರದ ಡೈಲಾಗ್ ಗಳು ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ.

ಟಗರು ಚಿತ್ರದ ಒಂದೊಂದು ಪಾತ್ರಗಳೂ ಜನಪ್ರಿಯತೆ ಪಡೆದಿವೆ.ಟಗರು ಶಿವ , ಡಾಲಿ , ಚಿಟ್ಟೆ , ಸರೋಜ ಹೀಗೆ ಚಿತ್ರದಲ್ಲಿ ಬರುವ ಪಾತ್ರಗಳಿಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರೆ.ಟಗರು ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಕಂಡು ಸ್ವತಃ ಟಗರು ಚಿತ್ರತಂಡ ದಂಗಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here