ಜನವರಿಗೆ ಬರುತ್ತೆ…ಇಲ್ಲ ಕಣೋ ಸಂಕ್ರಾಂತಿಗೆ ಫಿಕ್ಸ್ ಅಂತೆ.ಮಗಾ ಸಂಕ್ರಾಂತಿಗೂ ಬರಲ್ವಂತೆ ಕಣೋ ಅಯ್ಯೋ ಛೆ ಇನ್ಯಾವಗ್ಲೋ..ಮಗ ಫೆಬ್ರವರಿ 9 ಕ್ಕೆ ಬಂದೇ ಬರುತ್ತಂತೆ ಕಣೋ ಹೌದ ಗ್ಯಾರಂಟಿನ ಹು ಕಣೋ..ನಡಿ ಫ್ಲೆಕ್ಸ್  ರೆಡಿ ಮಾಡೋಣ. ಎಲ್ಲೋ ಫೆಬ್ರವರಿ 9 ಅಂದೆ ಅದ್ಯಾರೋ ಒಂದು ವಾರ ಮುಂದೆ ಅಂತಿದಾರೆ.ಹೇ ಇರೋ ಇರೋ ಒಂದು ವರ್ಷದಿಂದ ಕಾದಿದೆಯಾ ಇನ್ನೊಂದೆರಡು ವಾರ ಕಾಯಕ್ಕಾಗಲ್ವಾ …ಇನ್ನು ಎರಡು ವಾರನ ಅಂದ್ರೆ …? ಮಗಾ ಫೈನಲ್ 23 ಕಣೋ ಫಿಕ್ಸು.ಹು ಕಣೋ ಈ ಸಲ ಪಕ್ಕಾ 23ಕ್ಕೆ. ಇದೇನಪ್ಪ ಯಾರೋ ಮಾತಾಡ್ತಿದ್ದಂಗೆ ಇದೆ ಅಂದ್ಕೊಡ್ರಾ ಹೌದು ಇದು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಟಗರು ಚಿತ್ರದ ಬಗ್ಗೆ ಜನ ಮಾತಾಡ್ತಿರೋದು.

ಹೌದು ಈ ಸಂಭಾಷಣೆ ಟಗರು ಚಿತ್ರದ ಬಗ್ಗೆ ಜನರಿಗೆ ಇರೋ ಕ್ರೇಜ್ ಬಗ್ಗೆ ತಿಳಿಸುತ್ತೆ.ಚಿತ್ರಕ್ಕಾಗಿ ಕಾದು ಕಾದು ಸಾಕಾಗಿರುವ ಅಭಿಮಾನಿಗಳಿಗೆ ಟಗರು ರಿಲೀಸ್ ಫೈನಲ್ ಡೇಟ್ ಫಿಕ್ಸ್ ಆಗಿರುವುದು ಶಿವಣ್ಣನ ಅಭಿಮಾನಿಗಳಿಗೆ ನಿಂತಲ್ಲೇ ಬಾಡೂಟ ತಿಂದ ಸಂಭ್ರಮ ನೀಡಿದೆ. ಈಗಾಗಲೇ ಅಭಿಮಾನಿಗಳು ಟಗರು ಫ್ಲೆಕ್ಸ್ ಕಂಡಕಂಡಲ್ಲಿ ಹಾರ ,ಆರತಿ , ಪಟಾಕಿ ,ಹಾಲಿನ ಅಭಿಷೇಕ ಮಾಡಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದಾರೆ.ಇನ್ನು ಟಗರು ಟೈಟಲ್ ಹಾಡು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ.ಚಿಕ್ಕ ಮಕ್ಕಳಿಂದ ಹಿಡಿದು ಪಡ್ಡೆ ಹೈಕಳು ನಿಂತಲ್ಲೇ ಕುಂತಲ್ಲೇ ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಟಗರು ಸೃಷ್ಟಿಸಿರುವ ಕ್ರೇಜ್ ಗೆ ಸೌತ್ ಇಂಡಿಯನ್ ಫೇಮಸ್ ಡೈರೆಕ್ಟರ್ ಪೂರಿ ಜಗನ್ನಾಥ್  ಟಗರು ರಿಲೀಸ್ ದಿನವೇ ಬೆಂಗಳೂರಿನ ಮುಖ್ಯಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಚಿತ್ರ ನೋಡುವುದಾಗಿ ತಿಳಿಸಿದ್ದಾರೆ.ಇನ್ನು ಸ್ಯಾಂಡಲ್ ವುಡ್ ನಟನಟಿಯರು ಟಗರು ಹಾಡುಗಳಿಗೆ ತಾವಾಗೇ ನೃತ್ಯ ಮಾಡುತ್ತಾ ಟಗರು ಚಿತ್ರಕ್ಕಾಗಿ ಕಾಯುತ್ತಿರುವ ಪರಿಗೆ ಸಾಕ್ಷಿ . ಹೀಗೆ ಟಗರು ಮಾಡಿರುವ ಮೋಡಿಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲರ ಕುತೂಹಲ ಥಣಿಸಲು ಟಗರು ಇದೇ 23 ಕ್ಕೆ ಅಖಾಡಕ್ಕೆ ಇಳಿಯಲಿದೆ. ಸುಕ್ಕಾ ಸೂರಿಯ ಮ್ಯಾಜಿಕ್ , ಶಿವಣ್ಣನ ಖದರ್ , ಮಾನ್ವಿತಾಳ ಮೋಡಿ , ಡಾಲಿ ಧನಂಜಯ್ ನ ದರ್ಪ , ಚಿಟ್ಟೆ ವಸಿಷ್ಠ ಸಿಂಹನ ಘರ್ಜನೆ ನೋಡಲು ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here