ಚಿತ್ರ ಆರಂಭವಾದ ಕ್ಷಣದಿಂದ ಶಿವಣ್ಣನವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಟಗರು.ಕಳೆದ ಒಂದು ವರ್ಷದಿಂದ ಸಖತ್ ಸೌಂಡ್ ಮಾಡ್ತಾಯಿರೋ ಟಗರು ಚಿತ್ರದ ರಿಲೀಸ್ ಡೇಟ್ ಫೈನಲ್ ಆಗಿದೆ ಇದೇ ಫೆಬ್ರವರಿ 9 ರಂದು ಟಗರು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ.ಈ ಚಿತ್ರದ ಬಗ್ಗೆ ಇಷ್ಟೊಂದು ನಿರೀಕ್ಷೆ ಹೆಚ್ಚಲು ಹಲವಾರು ಕಾರಣಗಳಿವೆ ಅವುಗಳಲ್ಲಿ ಪ್ರಮುಖ ಕಾರಣಗಳೇನು ಎಂಬುದು ತಿಳಯೋಣ.

ಟಗರು ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಯಾಕೆ ?

1.ಹಲವು ವರ್ಷಗಳ ಬಳಿಕ ಶಿವರಾಜ್ ಕುಮಾರ್ ಮಾಸ್ ಅವತಾರದಲ್ಲಿ ಲಾಂಗ್ ಹಿಡಿದಿರುವುದು ಚಿತ್ರಪ್ರೇಮಿಗಳಲ್ಲಿ ಸಂಚಲನ ಸೃಷ್ಟಿಯಾಗಿದೆ.

2.ಡಾ.ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಸೇರಿರುವ ಈ ಚಿತ್ರಕ್ಕೆ ಶಿವಣ್ಣನವರ ಅಪ್ಪಟ ಅಭಿಮಾನಿ ಕೆ.ಪಿ.ಶ್ರೀಕಾಂತ್ ಮೊದಲ ಬಾರಿಗೆ ನಿರ್ಮಾಪಕರಾಗಿರುವುದು.


3.ಟಗರು ಚಿತ್ರದಲ್ಲಿ ಡಾ.ಶಿವಣ್ಣನವರಿಗೆ ಇದೇ ಮೊದಲ ಬಾರಿಗೆ ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ.

4.ಟಗರು ಗೆ ನಾಯಕಿಯರಾಗಿ ಜಾಕಿ ಭಾವನ ಮತ್ತು ಕೆಂಡಸಂಪಿಗೆಯ ಚೆಲುವೆ ಮಾನ್ವಿತಾ ಹರೀಷ್ ಕಾಣಿಸಿಕೊಂಡಿದ್ದಾರೆ.

5.ಹಲವು ವರ್ಷಗಳ ಬಳಿಕ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಶಿವಣ್ಣ ನಟನೆ .


6. ಟಗರು ಚಿತ್ರದ ಮೇಕಿಂಗ್ ವೀಡಿಯೋ ಮತ್ತು ಟೀಸರ್ ಗೆ ಯೂಟ್ಯೂಬ್‌ನಲ್ಲಿ ರೆಕಾರ್ಡ್ ವೀವ್ಸ್ ಸಿಕ್ಕಿರುವುದು.

7. ಟಗರು ಚಿತ್ರದ ಹಾಡುಗಳು ಬಾರೀ ಜನಪ್ರಿಯತೆ ಗಳಿಸಿರುವುದು ಮತ್ತು ಚಿತ್ರದ ಟೀಸರ್ ಮತ್ತು ಮೇಕಿಂಗ್ ವೀಡಿಯೋ ಗೆ ಇರುವ ಬ್ಯಾಕ್ ಗ್ರೌಂಡ್ ಸಂಗೀತ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು.


8.ಅದ್ದೂರಿ ಬಜೆಟ್ ಮೂಲಕ ಗೋವಾ, ಕರಾವಳಿ, ಬಳ್ಳಾರಿ ಮತ್ತು ಬೆಂಗಳೂರಿನ ಲೋಕಲ್
ಏರಿಯಾಗಳ ಬಹುತೇಕ ಎಲ್ಲಾ ಭಾಗಗಳಲ್ಲಿ ಚಿತ್ರೀಕರಣ.

9.ಟಗರು ಚಿತ್ರದ ಹೈಪ್ ಕಂಡು ತೆಲುಗು ಹಾಗು ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟರು ಚಿತ್ರಕ್ಕಾಗಿ ಕಾಯುತ್ತಿರುವುದು‌.


10. ಚಿತ್ರ ರಿಲೀಸ್ ಗೂ ಮುನ್ನವೇ ಶಿವಣ್ಣನವರ ಅಭಿಮಾನಿಗಳು ಟಗರು ಚಿತ್ರದ ಪೋಸ್ಟರ್ ಗಳಿಗೆ ಹಾರ ಮತ್ತು ಹಾಲಿನ ಅಭಿಷೇಕದ ಮೂಲಕ ಸಂಭ್ರಮಿಸುತ್ತಿದ್ದಾರೆ.
ಇವುಗಳ ಜೊತೆಗೆ ಟಗರು ಚಿತ್ರದಲ್ಲಿ ಹಲವಾರು ಗುಟ್ಟುಗಳು ಕೂಡ ಇವೆ ಚಿತ್ರ ನೋಡಿದ ನಂತರ ಟಗರು ಚಿತ್ರದ ಕ್ರೇಜ್ ಇನ್ನೂ ದುಪ್ಪಟ್ಟು ಆಗಲಿದೆ ಎನ್ನುತಿದೆ ಗಾಂಧಿನಗರ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here