ಕನ್ನಡ ಚಿತ್ರರಂಗದ ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾ ಯಾವುದು ಎಂದು ಯಾರನ್ನಾದರೂ ಕೇಳಿದರೆ ಮೊದಲು ಬರುವ ಹೆಸರೇ ಟಗರು. ಕರುನಾಡ ಚಕ್ರವರ್ತಿ ಡಾ‌. ಶಿವರಾಜಕುಮಾರ್  ಅಭಿನಯದ ಸುಕ್ಕಾ ಸೂರಿ ನಿರ್ದೇಶನದ ಟಗರು ಚಿತ್ರವನ್ನು ಕೆ ಪಿ ಶ್ರೀಕಾಂತ್ ಅವರು ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದರು. ಟಗರು ಚಿತ್ರದ ಟೀಸರ್ ಬಿಡುಗಡೆ ಆದಾಗಿನಿಂದ ಶುರುವಾಗಿದ್ದ ಟಗರು ಹವಾ ಟಗರು ಹಾಡುಗಳು ಬಿಡುಗಡೆ ನಂತರ ದುಪ್ಪಟ್ಟು ಮಾಡಿತ್ತು. ಅಭಿಮಾನಿಗಳು ಇಟ್ಟಿದ್ದ ನಿರೀಕ್ಷೆಗೂ ಮೀರಿ ಟಗರು ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಪ್ರದರ್ಶ ಕಂಡು ಇತ್ತೀಚಿನ ದಿನಗಳಲ್ಲಿ ಸಿಲ್ವರ್ ಜ್ಯೂಬಿಲಿ‌ ಆಚರಿಸಿದ ಅಪರೂಪದ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು.

ಬರೀ ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಬ್ಲಾಕ್‌ಬಸ್ಟರ್ ಆಗಿದ್ದ ಟಗರು ಸಿನಿಮಾ ಈಗ ತಮಿಳಿನಲ್ಲಿ ನಿರ್ಮಾಣವಾಗಲಿದೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮುತ್ತಯ್ಯ ಅವರು ತಮಿಳಿಗೆ ಕನ್ನಡದ ಟಗರು ರೈಟ್ಸ್ ಅನ್ನು ಇಂದು ಖರೀದಿಸಿದ್ದಾರೆ‌ . ವಿಶೇಷವೆಂದರೆ ಇತ್ತೀಚಿನ ವರ್ಷಗಳಲ್ಲಿ ಬಾರಿ ಮೊತ್ತಕ್ಕೆ ರೀಮೇಕ್ ರೈಟ್ಸ್ ಸೇಲ್ ಆದ ದಾಖಲೆ ಟಗರು ಚಿತ್ರದ ಪಾಲಾಗಿದೆ. ಸಾಮಾನ್ಯವಾಗಿ ಡಬ್ಬಿಂಗ್ ರೈಟ್ಸ್ ಗೆ ಎಲ್ಲಾ ನಟರ ಚಿತ್ರಗಳು ಉತ್ತಮ ಮೊತ್ತಕ್ಕೆ ಮಾರಾಟವಾಗುತ್ತಿತ್ತು.ಟಗರು ಹಿಂದಿ ಡಬ್ಬಿಂಗ್ ರೈಟ್ಸ್ ಸಹ ಬಾರೀ ಮೊತ್ತಕ್ಕೆ ಮಾರಾಟವಾಗಿತ್ತು. ಇದೀಗ ಟಗರು ರೀಮೇಕ್ ರೈಟ್ಸ್ ಗೆ ಬೇಡಿಕೆ ಬಂದು ಮಾರಾಟ ಆಗಿರುವುದು ಟಗರು ಹವಾ ಇನ್ನೂ ನಿಂತಿಲ್ಲ ಎನ್ನಬಹುದು.

ನಿರ್ದೇಶಕ ‘ದುನಿಯಾ’ ಸೂರಿ ಹಾಗೂ ‘ಸೆಂಚುರಿ ಸ್ಟಾರ್’ಶಿವರಾಜ್ ಕುಮಾರ್ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ‘ಟಗರು’ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರದ ರಿಮೇಕ್ ಹಕ್ಕು ಪಡೆದುಕೊಳ್ಳಲು ಪರಭಾಷೆಯಿಂದ ಭಾರಿ ಬೇಡಿಕೆ ಬಂದಿತ್ತು. ಸದ್ಯ, ‘ಟಗರು’ ಕಾಲಿವುಡ್​ಗೆ ಪಯಣ ಬೆಳೆಸಿದೆ. ಅರ್ಥಾತ್ ಈ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ.ಈ ಹಕ್ಕನ್ನು ನಿರ್ದೇಶಕ ಮುತ್ತಯ್ಯ ಪಡೆದುಕೊಂಡಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ‘ಟಗರು’ ನಿಮಾರ್ಪಕರಾದ ಕೆ.ಪಿ. ಶ್ರೀಕಾಂತ್, ‘ತಮಿಳಿನಲ್ಲಿ ‘ಕೊಂಬನ್’ ಚಿತ್ರ ನಿರ್ದೇಶನ ಮಾಡಿದ್ದ ಮುತ್ತಯ್ಯ ‘ಟಗರು’ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದಾರೆ. ಜೈ ಟಗರು. ಮೈಯ್ಯೆಲ್ಲ ಪೊಗರು ಎಂದಿದ್ದಾರೆ. ಆದರೆ ಟಗರು ರೀಮೇಕ್ ನಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here