ಟಗರು ಟಗರು ಟಗರು.ಸದ್ಯ ಸ್ಯಾಂಡಲ್ ವುಡ್ ಮಾತ್ರವಲ್ಲದೇ ದಕ್ಷಿಣ ಭಾರತ ಮತ್ತು ವಿಶ್ವದ ಅನೇಕ ದೇಶಗಳಲ್ಲಿ ಟಗರು ಭರ್ಜರಿ ಪ್ರದರ್ಶನ ಕಾಣುತ್ತಿದೆ.ಇದೇ ಪ್ರಥಮ ಬಾರಿಗೆ ಕೆ.ಪಿ.ಶ್ರೀಕಾಂತ್ ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದ ಟಗರು ಶ್ರೀಕಾಂತ್ ಅವರ ನಿರೀಕ್ಷೆಗೂ ಮೀರಿ‌ ಗೆದ್ದು ನಿಂತಿದೆ.

ಟಗರು ಚಿತ್ರಕ್ಕೆ ಸಿಕ್ಕಿರುವ ಅದ್ಭುತವಾದ ಯಶಸ್ಸು ಇಡೀ ಟಗರು ತಂಡವನ್ನು ಸಂತಸದಲ್ಲಿ ತೇಲಿಸಿದೆ.ತಮ್ಮ ಸುಕ್ಕಾ ರಾ ಸಬ್ಜೆಕ್ಟ್ ಗಳಿಂದಲೇ ಸಿನಿ ದುನಿಯಾದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ಸೂರಿ ಅವರಿಗೆ ಟಗರು ಅದ್ಭುತವಾದ ಯಶಸ್ಸು ಕೊಟ್ಟಿದೆ.ಇತ್ತೀಚಿಗಷ್ಟೇ ಮಫ್ತಿ ಅಂತಹ ಬ್ಲಾಕ್‌ಬಸ್ಟರ್ ಕೊಟ್ಟಿದ್ದ ಶಿವಣ್ಣ ಟಗರು ಮೂಲಕ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಕೊಟ್ಟು ಸ್ಯಾಂಡಲ್ ವುಡ್ ಕಿಂಗ್ ಎಂಬುದನ್ನು ನಿರೂಪಿಸಿದ್ದಾರೆ.

ಟಗರು ಚಿತ್ರದ ವಿಜಯೋತ್ಸವ ರಾಜ್ಯಾದ್ಯಂತ ನಡೆಯುತ್ತಿದೆ‌.ಟಗರು ವಿಜಯೋತ್ಸವದ ವೇಳೆ ಶಿವಣ್ಣ ಮತ್ತು ಧನಂಜಯ್, ವಸಿಷ್ಠ  ಹೋದ ಕಡೆ ಎಲ್ಲಾ ಜನಜಾತ್ರೆ ಸೇರುತ್ತಿದೆ.ಟಗರು ತೆರೆಗೆ ಬಂದು 30 ದಿನಗಳು ಕಳೆದಿವೆ.ಆದರೂ ಟಗರು ಚಿತ್ರಕ್ಕೆ ಬೇಡಿಕೆ ಕಮ್ಮಿಯಾಗಿಲ್ಲ. ಟಗರು ತೆರೆಗೆ ಬಂದಿದ್ದ ಚಿತ್ರಮಂದಿರಗಳ ಪೈಕಿ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಟಗರು ಐದನೇ ವಾರಕ್ಕೆ ಕಾಲಿಡುವ ಮೂಲಕ ಹೊಸ ದಾಖಲೆ ಬರೆದಿದೆ.

ಟಗರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದ ಚರಣರಾಜ್ ,ಟಗರು ಚಿತ್ರಕ್ಕೆ ಅದ್ಭುತವಾದ ಕ್ಯಾಮೆರಾ ವರ್ಕ್ ಮಾಡಿದ್ದ ಮಹೇನ್ ಸಿಂಹ , ಸಂಭಾಷಣೆ ಬರೆದಿದ್ದ ಮಾಸ್ತಿ ಅವರಿಗೆ ಈಗ ಬೇಡಿಕೆ ಶುರುವಾಗಿದೆ.ಇನ್ನು ಟಗರು ಚಿತ್ರದ ಪಾತ್ರಗಳಿಗೆ ಸುರುವಾಗಿದ್ದ ಟ್ರೋಲ್ ಗಳು ಇನ್ನೂ ಮುಂದುವರೆದಿವೆ.ಟಗರು ಯಶಸ್ಸು ಕನ್ನಡ ಸಿನಿರಸಿಕರಿಗೆ ಸಖತ್ ಖುಷಿ ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here