ಭೂಗತ ಲೋಕದ ಭಯಾನಕ ಅದ್ಯಾಯ

ನಾವು ನೋಡಿದ ಚಿತ್ರ – ಟಗರು ★★★★
ಒಂದು ರೌಡಿಸಂ ಸಿನಿಮಾ ಹೇಗಿರಬಹುದು ಮತ್ತು ಏನಿರಬಹುದು ಅದೆಲ್ಲಾ ಟಗರು ಚಿತ್ರದಲ್ಲಿದೆ.ಕಳೆದ ಒಂದೂವರೆ ವರ್ಷದಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಟಗರು ಕೊನೆಗೂ ಅಭಿಮಾನಿಗಳಿಗೆ ತನ್ನ ಖದರ್ ತೋರಿಸಿದ್ದಾನೆ. ಚಿತ್ರದ ಆರಂಭದಿಂದ ಅಂತ್ಯದವರೆಗೂ ರೋಚಕತೆಯ ತಿರುವುಗಳನ್ನು ಪಡೆದುಕೊಳ್ಳುತ್ತಾ ಪ್ರೇಕ್ಷಕರು ಮುಂದೇನು ಎನ್ನುವಂತೆ ತುದಿಗಾಲಲ್ಲಿ ಕಾಯುವಂತೆ ಮಾಡುವ ಅದ್ಬುತ ಎನ್ನುವಂತ ನಿರೂಪಣೆ ಟಗರು ಚಿತ್ರದ ಬಹು ದೊಡ್ಡ ಪ್ಲಸ್ ಪಾಯಿಂಟ್.!
ಅಭಿನಯದ ವಿಷಯಕ್ಕೆ ಬಂದರೆ ಅಕ್ಷರಶಃ ಟಗರಾಗಿ ಶಿವರಾಜಕುಮಾರ್ ಶಿವತಾಂಡವವಾಡಿದ್ದಾರೆ , ಪೋಲೀಸ್ ಅಧಿಕಾರಿಯಾಗಿ , ರೌಡಿಗಳನ್ನ ಅಟ್ಟಾಡಿಸುವ ಲಾಂಗ್ ಕಿಂಗ್ ಪ್ರೇಮಿಯಾಗಿಯೂ ಇಷ್ಟವಾಗುತ್ತಾರೆ, ಶಿವರಾಜಕುಮಾರ್ ಪ್ರತಿ ಸಂಭಾಷಣೆ ಜನಮನ ಗೆಲ್ಲುತ್ತದೆ. ವಿರಾಮದ ನಂತರ ಬರುವ ಭಾವನ ಭಾವನಾತ್ಮಕವಾಗಿ ಬೆರೆತರೆ , ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ, ಶಿವರಾಜಕುಮಾರ್ ಜೊತೆ ಸುತ್ತುವ ಮಾನ್ವಿತಾ ಪಡ್ಡೆ ಹೈಕಳ ಶಿಳ್ಳೆಗಿಟ್ಟಿಸುತ್ತಾರೆ, ಚಿತ್ರದಲ್ಲಿ ಖಳನಾಯಕರಾಗಿ ಧನಂಜಯ ಮತ್ತು ವಶಿಷ್ಠ ಅಬ್ಬರಿಸಿದ್ದಾರೆ, ಡಾಲಿ ಪಾತ್ರ ಧನಂಜಯ ಅವರಿಗೆ ಮತ್ತಷ್ಟು ನೆಗೆಟಿವ್ ಪಾತ್ರಗಳ ಅವಕಾಶಗಳನ್ನು ಕೊಡಡುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ಪ್ರತಿ ಫ್ರೇಮಿನಲ್ಲೂ ಕೂಡ ಮಹೇಂದ್ರ ಸಿಂಹ ಕ್ಯಾಮರ ಕೈ ಚಳಕ ಎದ್ದು ಕಾಣುತ್ತದೆ , ಆ ಮಟ್ಟಿಗೆ ಪ್ರೇಕ್ಷಕರ ಕಣ್ಣಿಗೆ ಟಗರು ಹಬ್ಬ, ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದ್ದು ಚರಣ್ ರಾಜ್ ಮ್ಯಾಜಿಕ್ ಮಾಡಿದ್ದಾರೆ, ದೀಪು ಸಂಕಲನ ಟಗರು ವೇಗಕ್ಕೆ ಸಾಥ್ ಕೊಟ್ಟಿದೆ ,ಇನ್ನು ನಿರ್ದೇಶಕ ಸೂರಿ ಬಹಳ ಜಾಣ್ಮೆಯಿಂದ ಟಗರು ನಿರೂಪಣೆ ಮಾಡಿದ್ದು ಭೂಗತ ಲೋಕದ ಮತ್ತೊಂದು ಮುಖ ಅನಾವರಣ ಮಾಡಿದ್ದಾರೆ, ಒಬ್ಬ ಖಡಕ್ ಪೋಲೀಸ್ ಅಧಿಕಾರಿಯ ಸುತ್ತ ನಡೆಯುವ ಘಟನೆಗಳನ್ನು ನೈಜವಾಗಿ ಚಿತ್ರಿಸಿರುವ ನಿರ್ದೇಶಕ ಸೂರಿ ಭೂಗತಲೋಕದ ಮತ್ತೊಂದು ದುನಿಯಾ ತೋರಿಸಿ ಇಷ್ಟವಾಗುತ್ತಾರೆ.ಸಂಪೂರ್ಣ ಚಿತ್ರ ಶುರುವಿನಿಂದ ಅಂತ್ಯದವರೆಗೂ ಸೂಜಿಗಲ್ಲಿನಂತೆ ಸೆಳೆಯುವ ಟಗರು ಪೊಗರನ್ನು ಒಂದು ಸೆಕೆಂಡ್ ಕೂಡ ಮಿಸ್ ಮಾಡುವ ಹಾಗಿಲ್ಲ.! ಟಗರು ಚಿತ್ರದ ಪ್ರತಿ ದೃಶ್ಯಗಳಲ್ಲೂ ನಿರ್ಮಾಪಕರ ಸಿನಿಮಾ ಮೇಲಿನ ಪ್ರೀತಿ ಎದ್ದು ಕಾಣುತ್ತದೆ, ಚಿತ್ರಕ್ಕೆ ಧಾರಾಳವಾಗಿ ಖರ್ಚು ಮಾಡಿರುವ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಟಗರನ್ನು ಅದ್ದೂರಿಯಾಗಿಸಿದ್ದಾರೆ. ಒಟ್ಟಾರೆಯಾಗಿ ನಿರೀಕ್ಷೆ ಹೊತ್ತು ಬರುವ ಟಗರು ಮೋಸಮಾಡದೆ ದುನಿಯಾದ ಮತ್ತೊಂದು ದರ್ಶನ ಮಾಡಿಸುತ್ತಾನೆ, ಕೊಟ್ಟ ಕಾಸಿಗೆ ಸಾಕಷ್ಟು ಮನರಂಜನೆಯನ್ನು ಒದಗಿಸುವ ಟಗರು ಪೊಗರು ಪ್ರೇಕ್ಷಕ ಪ್ರಭುವಿಗೆ ಇಷ್ಟವಾಗುತ್ತಾನೆ , ಆರಾಮಾಗಿ ಚಿತ್ರಮಂದಿರಗಳಲ್ಲಿ ಟಗರು ನೋಡಿ ಎಂಜಾಯ್ ಮಾಡಿ.!

www.suddimane.com – Review Sagar Manasu

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here