ಪುಟ್ಟಗೌರಿ ಮದುವೆ ಧಾರಾವಾಹಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.ಈ ಧಾರಾವಾಹಿ ಮೂಲಕ ಗೌರಿ ಆಲಿಯಾಸ್ ರಂಜಿನಿ ರಾಘವನ್ (ಮೂಲ ಹೆಸರು) ಮಾಡಿರುವ ಮೋಡಿ ಇದೆಯಲ್ಲಾ ಅದು ಬಹಳ ದೊಡ್ಡದು.ಇತ್ತೀಚಿನ ದಿನಗಳಲ್ಲಿ ಪುಟ್ಟಗೌರಿ ಪಡೆದ ಜನಪ್ರಿಯತೆ ಸಿಕ್ಕಾಪಟ್ಟೆ ದೊಡ್ಡದು.ಈಗ ರಂಜಿನಿ ಅವರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.ಈಗಾಗಲೇ ರಾಜಹಂಸ ಎನ್ನುವ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ರಂಜನಿ ರಾಘವನ್ ಅವರಿಗೆ ಈ ಬಾರಿ ಸ್ವಲ್ಪ ದೊಡ್ಡದಾದ ಅವಕಾಶವೇ ದೊರೆತಿದೆ.

ಕೆಲವು ದಿನಗಳಿಂದ ದರ್ಶನ್ ಅವರ ಸಂಬಂಧಿಯಾದ ಮನೋಜ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು.ಈಗ ಮನೋಜ್ ನಾಯಕನಾಗುವ ಸಮಯ ಬಂದಿದೆ.ಟಕ್ಕರ್ ಎನ್ನುವ ಮಾಸ್ ಟೈಟಲ್ ಕೂಡ ಮನೋಜ್ ಅವರ ನಟನೆಯ ಮೊದಲ ಚಿತ್ರಕ್ಕೆ ಫಿಕ್ಸ್ ಆಗಿದೆ.ಈ ಹಿಂದೆ ರನ್ ಆಂಟನಿ ಎನ್ನುವ ಚಿತ್ರ ನಿರ್ದೇಶನ ಮಾಡಿದ್ದ ರಘು ಶಾಸ್ತ್ರಿ ಈಗ ಟಕ್ಕರ್ ಚಿತ್ರ ನಿರ್ದೇಶನ ಮಾಡಲಿದ್ದಾರೆ.ಹುಲಿರಾಯ ಚಿತ್ರಕ್ಕೆ ಬಂಡವಾಳ ಹೂಡಿದ್ದ ‌ನಾಗೇಶ್ ಅವರು ಟಕ್ಕರ್ ಚಿತ್ರದ ನಿರ್ಮಾಪಕರು. ಇನ್ನು ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here