KGF ಚಿತ್ರ ನೆನ್ನೆ ದೇಶದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಕೆ.ಜಿ.ಎಫ್’ ಚಿತ್ರವನ್ನ ನೋಡಿ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಎರಡು ವರ್ಷ ಕಾದಿದ್ದಕ್ಕೂ ಸಾರ್ಥಕ ಎಂಬ ಮನೋಭಾವ ಯಶ್ ಅಭಿಮಾನಿಗಳಲ್ಲಿ ಮೂಡಿದೆ.ಮೇಕಿಂಗ್ ವಿಚಾರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ರವರನ್ನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಕೆ.ಜಿ.ಎಫ್ ಕನ್ನಡದ ಹೆಮ್ಮೆಯ ಗೋಲ್ಡ್ ಚಿತ್ರ ಎಂದು ಫ್ಯಾನ್ಸ್ ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದಾರೆ. ಯಶ್ ಅಭಿನಯಕ್ಕೆ ಎಲ್ಲರೂ ಸಲಾಂ ಹೊಡೆಯುತ್ತಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆ ಕಂಡಿದ್ದು ನಿರೀಕ್ಷೆಯನ್ನೂ ಮೀರಿ ಯಶಸ್ಸು ಗಳಿಸಿದೆ.

ಚಿತ್ರಕ್ಕೆ ಕೇವಲ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ತಮಿಳು ಸಿನಿಮಾ ಪ್ರೇಕ್ಷಕರೂ ಕೂಡ ಫುಲ್ ಫಿದಾ ಆಗಿದ್ದಾರೆ.ನಿನ್ನೆ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ಕೆಜಿಎಫ್ ತೆರೆಕಂಡಿದ್ದು, ಬೆಳಗ್ಗಿನಿಂದಲೇ ಪ್ರೇಕ್ಷಕರು ಕಿಕ್ಕಿರಿದು ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಅತ್ತ ಇತರೆ ಭಾಷೆಗಳ ಚಿತ್ರಗಳನ್ನು ನಿರ್ಲಕ್ಷಿಸುತ್ತಿದ್ದ ತಮಿಳುನಾಡಿನಲ್ಲೂ ಕೆಜಿಎಫ್ ಭಾರಿ ಸದ್ದು ಮಾಡುತ್ತಿದ್ದು, ಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕನೊಬ್ಬ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.

ವೀಕ್ಷಣೆ ಮಾಡಿದ ಪ್ರೇಕ್ಷಕನೊಬ್ಬ ಚಿತ್ರ ಮುಕ್ತಾಯದ ಬಳಿಕ ಮಾತನಾಡಿ, ‘ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಕಲ್ವನೆ ಕೂಡ ಇರಲಿಲ್ಲ. ಕೆಜಿಎಫ್ ಅದ್ಬುತವಾಗಿದೆ. ಕೆಜಿಎಫ್ ನಲ್ಲಿ ಈ ರೀತಿಯ ಸನ್ನಿವೇಶಗಳಿರುತ್ತವೆ ಎಂದು ತಿಳಿದಿರಲಿಲ್ಲ. ಫ್ಯಾಕ್ಷನ್ ಚಿತ್ರವಲ್ಲ ಅದರ ಅಪ್ಪನಂತಿದೆ ಕೆಜಿಎಫ್ ಎಂದು ಪ್ರೇಕ್ಷಕ ಹೇಳಿದ್ದಾನೆ.
ಅಂತೆಯೇ ಚಿತ್ರಕಥೆ, ಹಿನ್ನಲೆ ಸಂಗೀತ, ನಿರ್ದೇಶನ ಎಲ್ಲವೂ ತಮಿಳು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here