ಯಾವುದೆ ಸರ್ಕಾರ ಬಂದರೂ ತಮಿಳುನಾಡಿಗೆ ನೀರು ಬಿಡಬೇಕು ಎಂದಿದ್ದ ರಜನಿಕಾಂತ್ ಅವರ ಹೇಳಿಕೆಗೆ ಕುಮಾರಸ್ವಾಮಿ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎಂದು ತಿಳಿಯುವ ಮುನ್ನ ರಜನಿಕಾಂತ್ ಏನೇಳಿದ್ರು ಬನ್ನಿ ತಿಳಿಯೋಣ.ಇಂದು  ಚೆನೈನಲ್ಲಿ ಸುದ್ದಿ ಗೋಷ್ಠಿ ನಡೆಸಿದ ತಮಿಳುನಾಡಿನ ಖ್ಯಾತ ನಟ ರಜನಿಕಾಂತ್ ಪ್ರಸ್ತುತ ಕರ್ನಾಟಕದ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು ಕುಮಾರಸ್ವಾಮಿ ಅವರು ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರನ್ನು ಹರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ರಜನಿಕಾಂತ್ ತಿಳಿಸಿದ್ದಾರೆ.ಇದೇ ವೇಳೆ ಮಾತನಾಡಿದ ರಜನಿಕಾಂತ್ ಕರ್ನಾಟಕದಲ್ಲಿ ಬಿಜೆಪಿ ಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ಕೊಟ್ಟಿದ್ದು ಬಿಗ್ ಜೋಕ್ ಎಂದು ಹೇಳಿದ್ದಾರೆ‌.

ಕಮಲಹಾಸನ್ ಜೊತೆ ರಜನಿಕಾಂತ್ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತನಾಡಿದ್ದು ಸದ್ಯಕ್ಕೆ ಇನ್ನೂ ನಾವು ಏನನ್ನೂ ತೀರ್ಮಾನಿಸಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.ರಜನಿಕಾಂತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು

ರಜನಿಕಾಂತ್ ಮೊದಲು ನಮ್ಮ ರಾಜ್ಯಕ್ಕೆ ಬಂದು ಜಲಾಶಯಗಳ ಪರಿಸ್ಥಿತಿ ನೋಡಲಿ. ನಮ್ಮ ರಾಜ್ಯದ ಪರಿಸ್ಥಿತಿಯನ್ನು ಮೊದಲು ಅವರು ಅರಿತುಕೊಳ್ಳಲಿ. ನಮಗೆ ನೀರಿದ್ದರೆ ಅಲ್ಲವೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ಎಂದು ಕರ್ನಾಟಕದ ಭಾವೀ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here