ತಾನು‌ ಕನ್ನಡದ ನಟ ಸಾರ್ವಭೌಮ‌ ಡಾ.ರಾಜ್ ಕುಮಾರ್ ಅಭಿಮಾನಿ ಎಂದಿದ್ದಕ್ಕೆ, ಕನ್ನಡ ನಟನೋರ್ವನಿಂದ ತಮಿಳು ಚಿತ್ರರಂಗ ಅವಕಾಶ ಕಸಿದಕೊಂಡಿದೆ. ಭಾಷಾಭಿಮಾನ ಹಾಗೂ ಆಂತರಿಕ ವೈಷಮ್ಯವನ್ನು ಕಲೆಯಲ್ಲಿ ತೋರಿಸಲು ಹೊರಟಂತಿದೆ ತಮಿಳು ಚಿತ್ರರಂಗ. ಕಲೆ ಎಂಬುದಕ್ಕೆ ದೇಶ, ಭಾಷೆಗಳೆಂಬ ಗಡಿಯಿಲ್ಲ. ಆದ್ದರಿಂದಲೇ ಕಲಾವಿದರು ಅನ್ಯ ಭಾಷೆಗಳಲ್ಲಿ ಕೂಡಾ ನಟಿಸಿ, ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಹೀಗೆ ಕನ್ನಡದ ಪ್ರತಿಭಾವಂತ ನಟನೊಬ್ಬನಿಗೆ ತಮಿಳು ಭಾಷೆಯ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಆತ ಅಣ್ಣಾವ್ರ ಅಭಿಮಾನಿ ಎಂದಿದ್ದಕ್ಕೆ, ಅವನನ್ನು ಆ ಚಿತ್ರದಿಂದ ಹೊರಹಾಕಲಾಗಿದೆ.

ಕನ್ನಡದ ನೂತನ ಯುವ ನಟ ಕೃಷ್ಣಲೀಲಾ, ಹಾಗೂ ಬಹದ್ದೂರ್ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿ, ಹೆಸರು ಗಳಿಸಿದ್ದ ಯೋಗಿಯವರಿಗೆ ತಮಿಳಿನ ಪಾರ್ಥಿಬನ್ ಕಾದಲ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅವಕಾಶ ದೊರೆತಿತ್ತು. ಇತ್ತೀಚೆಗಷ್ಟೆ ತಮಿಳುನಾಡಿನಲ್ಲ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಆಗ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಯೋಗಿಯವರನ್ನು ಸುತ್ತುವರೆದ ಪತ್ರಕರ್ತರು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಹಾಗೆ ಪ್ರಶ್ನೆಗಳನ್ನು ಕೇಳುವಾಗ ಕಾವೇರಿ ನೀರಿನ ಬಗ್ಗೆ ಪ್ರಶ್ನಸಿದಾಗ ಯೋಗಿಯವರು ಕರ್ನಾಟಕದಲ್ಲೇ ಕೆಲವು ಕಡೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆಂದು ಹೇಳಿದ್ದಾರೆ.

ನಂತರ ಪತ್ರಕರ್ತರು ಯೋಗಿಯವರನ್ನು ನಿಮಗೆ ರಜನೀಕಾಂತ್ ಇಷ್ಟವೋ, ಡಾ.ರಾಜ್ ಕುಮಾರ್ ಇಷ್ಟವೋ ಎಂಬ ಪ್ರಶ್ನೆ ಕೂಡಾ ಹಾಕಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯೋಗಿಯವರು ಯಾವುದೇ ಗೊಂದಲವಿಲ್ಲದೆ ಅಣ್ಣಾವ್ರೇ ತನ್ನ ನೆಚ್ಚಿನ ನಟ ಎಂದು ಹೇಳಿದ್ದಾರೆ. ಇದಾದ ಮೇಲೆ ಚಿತ್ರ ನಿರ್ದೇಶಕರು ಆ ರೀತಿ ಹೇಳಬಾರದಾಗಿತ್ತು ಎಂದು ಸಲಹೆ ನೀಡಿದ್ದು ಮಾತ್ರವಲ್ಲದೆ, ಯೋಗಿಯವರನ್ನು ಚಿತ್ರದಿಂದ ತೆಗೆದು ಹಾಕಿದ್ದಾರೆ. ಇದರಿಂದ ಸಿಕ್ಕ ಅವಕಾಶದಿಂದ ವಂಚಿತರಾದ ಯೋಗಿ ಕರ್ನಾಟಕಕ್ಕೆ ವಾಪಸಾಗಿದ್ದಾರೆ ಮಾತ್ರವಲ್ಲದೆ , ತಾನೊಬ್ಬ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಹೀಗೆ ಕರ್ನಾಟಕ ಹಾಗೂ ತಮಿಳುನಾಡಿನ ಜಲವಿವಾದ ಈಗ ಚಿತ್ರರಂಗದಲ್ಲಿ ನಟನೆಗೂ ಒಂದು ಮುಳುವಾಗಿದೆ ಹಾಗೂ ಕಾವೇರಿ ಹಾಗೂ ಅಣ್ಣಾವ್ರ ಬಗ್ಗೆ ಮಾತನಾಡಿದ್ದಕ್ಕೆ ಆತನ ಕಲೆಯನ್ನು ಕಡೆಗಣಿಸಿರುವ ಆ ಚಿತ್ರ ತಂಡ ತಮ್ಮ ಸಂಕುಚಿತ ಮನೋಭಾವವನ್ನು ತೋರಿಸಿದೆಯಲ್ಲದೆ, ಕಲೆಯಲ್ಲೂ ರಾಜಕೀಯ ತಂದು, ಮತ್ತೊಂದು ಸಮಸ್ಯೆಗೆ ನಾಂದಿ ಹಾಡಿದಂತಿದೆ. ಇದೊಂದು ವಿಚಾರ ಮಾಡಬೇಕಾದ ವಿಷಯವಾಗಿದ್ದು , ನಟನಿಗಾದ ಈ ಅವಮಾನದ ಕುರಿತು ಚಿತ್ರ ತಂಡ ಸೂಕ್ತ ಉತ್ತರ ನೀಡಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here